
ದೇವದುರ್ಗ,ಏ.೦೫- ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಸಮೀಪದ ಶ್ರೀಬೂದಿಬಸವೇಶ್ವರ ಮಠದ ಹತ್ತಿದ ಸೈಕಲ್ ಶಾಪ್‌ಗೆ ಬೆಂಕಿ ಆಕಸ್ಮಿಕವಾಗಿ ತಗುಲಿ ಅಪಾರ ಪ್ರಮಾಣದ ವಸ್ತುಗಳು ಸುಟ್ಟಿವೆ. ಮಸ್ತಾನ್‌ಸಾಬ್ ದೇವರಗುಡ್ಡ ಎನ್ನುವವರಿಗೆ ಶಾಪ್ ಸೇರಿದ್ದು ಬೆಳಗ್ಗೆ ಏಕಾಏಕಿ ಬೆಂಕಿತಗುಲಿದೆ. ಸೈಕಲ್, ಸಾಮಗ್ರಿ ಸೇರಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತ ತಡೆದಿದ್ದಾರೆ. ಅಕ್ಕಪಕ್ಕದಲ್ಲಿ ಅಂಗಡಿ ಮುಂಗಟ್ಟು, ಹೋಟೆಲ್ ಇದ್ದು ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.