ಬೆಂಕಿಗಾಹುತಿಯಾದ ಸೂಪರ್ ಮಾರ್ಕೆಟ್, ಅಪಾರ ನಷ್ಟ

ಸಿಂಧನೂರು.ನ.೧೩- ನಗರದ ಗಂಗಾವತಿ ರಸ್ತೆಯಲ್ಲಿನ ಎಸ್.ಬಿ.ಐ ಬ್ಯಾಂಕ್ ಎದುರುಗಡೆ ಇರುವ ಯಶಸ್ವಿ ಸೂಪರ್ ಮಾರ್ಕೆಟ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸೂಪರ್ ಮಾರ್ಕೆಟ್ ನಲ್ಲಿನ ಅಪಾರ ವಸ್ತುಗಳು ನಾಶವಾಗಿವೆಂದು ತಿಳಿದು ಬಂದಿದೆ.
ಗಂಗಾವತಿ ರಸ್ತೆಯಲ್ಲಿ ಆಕ್ಸಿಸ್ ಬ್ಯಾಂಕ್ ಪಕ್ಕದಲ್ಲಿರುವ ಯಶಸ್ವಿ ಸೂಪರ್ ಮಾರ್ಕೆಟ್‌ಗೆ ಬೆಂಕಿ ತರುವಾಯ ಪ್ರತ್ಯಕ್ಷ ದರ್ಶಿಗಳು ಮಾಲಿಕರಿಗೆ ತಿಳಿಸಿದ ನಂತರ ಅಗ್ನಿಶಾಮಕ ದಳದವರಹ ಕೂಡಲೇ ಬೆಂಕಿಯನ್ನು ನಂದಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಸೂಪರ್ ಮಾರ್ಕೆಟ್‌ನಲ್ಲಿ ಕಿರಾಣಿ, ಸ್ಟೇಷನರಿ ಪ್ರತಿಯೊಂದು ವಸ್ತುಗಳು ಲಭ್ಯವಾಗುತ್ತಿದ್ದವು ಬೆಂಕಿಯಿಂದ ಇವೆಲ್ಲಾ ಸುಟ್ಟು ಕರಕಲಾಗಿವೆ.