ಬೃಹದಾಕಾರದ ಹೆಬ್ಬಾವು ಸಂರಕ್ಷಣೆ…!

ಶಿವಮೊಗ್ಗ, ನ. 22: ಶಿವಮೊಗ್ಗ ತಾಲೂಕಿನ ಭೈರನಕೊಪ್ಪ ಗ್ರಾಮದ ತೆಂಗಿನ ತೋಟವೊಂದರಲ್ಲಿ
 ಕಾಣಿಸಿಕೊಂಡ ಬೃಹದಾಕಾರದ ಹೆಬ್ಬಾವನ್ನು ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರು
ಸುರಕ್ಷಿತವಾಗಿ ಸಂರಕ್ಷಿಸಿದ ಘಟನೆ ನಡೆದಿದೆ.
ಚೈತನ್ಯ ಕಡಿದಾಳ್ ಎಂಬುವರಿಗೆ ಸೇರಿದ ತೋಟದಲ್ಲಿ ಹಾವು ಕಾಣಿಸಿಕೊಂಡಿತ್ತು. ಇದನ್ನು
ಗಮನಿಸಿದ ಕಾರ್ಮಿಕರು ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ರವಾನಿಸಿದ್ದರು.
ಸ್ಥಳಕ್ಕಾಗಮಿಸಿದ ಕಿರಣ್ ಅವರು ಹರಸಾಹಸ ನಡೆಸಿ ಸುಮಾರು 8 ಅಡಿ ಉದ್ದದ ಹೆಬ್ಬಾವನ್ನು
ಸುರಕ್ಷಿತವಾಗಿ ಸಂರಕ್ಷಿಸುವಲ್ಲಿ ಸಫಲವಾಗಿದ್ದಾರೆ.