ಬೃಹತ್ ಸಾಲ ಮೇಳ ಉದ್ಘಾಟನೆ

ಕಲಬುರಗಿ;ಸೆ.10: ನಗರದ ಕನ್ನಡ ಭವನದಲ್ಲಿ ಕೆನರಾ ಬ್ಯಾಂಕ್ ವತಿಯಿಂದ ಬೃಹತ್ ಸಾಲ ಮೇಳವನ್ನು ಕೆನರಾ ಬ್ಯಾಂಕ್‍ನ ಸಹಾಯಕ ಮಹಾ ಪ್ರಬಂಧಕರಾದ ಜಗದೇಶ ಪ್ರಸಾದರಾವ್ ಅವರು ಉದ್ಘಾಟಿಸಿ ಮಾತನಾಡಿ ಕೆನರಾ ಬ್ಯಾಂಕ್‍ನ ಸೇವೆಗಳ ಉಪಯೋಗ ಪಡದು ಕೊಳ್ಳಬೇಕೆಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿಜಯಕುಮಾರ ತೇಗುಲತಿಪ್ಪಿ ಕನ್ನಡ ಭಾಷೆಯನ್ನು ನಿತ್ಯ ಚಟುವಟಿಕೆಯಲ್ಲಿ ಜಾಸ್ತಿ ಬಳಸಲು ವಿನಂತಿಸಿದರು ಮತ್ತು ಕೆನರಾ ಬ್ಯಾಂಕ್ ಒಂದು ತುಂಬಾ ವಿಸ್ವಾಸದ ಮತ್ತು ನಂಬಿಕೆಯ ಬ್ಯಾಂಕ್ ಎಂದು ಶ್ಲ್ಯಾಘಿಸಿದರು.

ಈ ಸಂದರ್ಭದಲ್ಲಿ ಡಿ.ಎಂ. ವಿಠ್ಠಲ್ ಮಲಗಿ, ಡಿ.ಎಂ ಜಿ ಹುಲತೆಪ್ಪ, ಮಾರ್ಕೆಟಿಂಗ್ ಮ್ಯಾನೇಜರ ಶಶಿಕಾಂತ್ ಆರ್ ಸೇರಿದಂತೆ ಕೆನರಾ ಬ್ಯಾಂಕ್ ನ ವಿವಿಧ ಶಾಖೆಗಳ ಪ್ರಭಂದಕರು, ಶಿಬಂದ್ಧಿಗಳು, ಗ್ರಾಹಕರು, ಕಲಬುರಗಿಯ ವಿವಿಧ ವಾಹನ ಡೀಲರ್ಸ್, ಬಿಲ್ಡರ್ಸ್ ಗಳು ಭಾಗವಹಿಸಿದ್ದರು. ನಂತರ ಗ್ರಾಹಕರಿಗೆ ವಿವಿಧ ರೀತಿಯ ಸಾಲಗಳನ್ನು ವಿತರಿಸಲಾಯಿತು.