ರಾಯಚೂರು,ಮಾ.೨೬-
ಕಾಂಗ್ರೆಸ್ ಪಕ್ಷದ ಸಿದ್ದಾಂತ ಹಾಗೂ ಎಐಸಿಸಿ ಕಾರ್ಯದರ್ಶಿ ಎನ್ ಎಸ್ ಬೋಸರಾಜು ಅವರ ಸರಳತೆಯ ನಾಯಕತ್ವ ಮೆಚ್ಚಿ ವಾರ್ಡ್ ನಂ ೨೩, ೨೪, ೨೫, ೨೭ ರ ಮೂರು ಬಡವಾವಣೆಯ ಅನೇಕರು ವಿಜಯರಾಜ ರಡ್ಡಿ ನೇತೃತ್ವದಲ್ಲಿ ಸುಮಾರು ೨೫೦೦ ಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ರವಿಬೋಸರಾಜು ನೇತೃತ್ವದಲ್ಲಿ ಬೃಹತ್ ಮೆರವಣಿಗೆ ಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ನಗರದ ಗಂಜ್ ನಿಂದ ಸಾವಿರಾರು ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಪಕ್ಷ ಸೇರ್ಪಡೆಯಾದರು.
ಪಕ್ಷ ಸೇರ್ಪಡೆಯಾದ ಅನೇಕರಿಗೆ ಎಐಸಿಸಿ ಕಾರ್ಯದರ್ಶಿಗಳಾ ದ ಎನ್ ಎಸ್ ಬೋಸರಾಜು ಅವರು ಅಭೂತಪೂರ್ವ ವಾಗಿ ಬರಮಾಡಿಕೊಂಡರು.
ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ದುರಾಡಳಿತ ಕ್ಕೆ ಬೇಸತ್ತು ಹಾಗೂ ಸ್ಥಳಿಯ ಶಾಸಕರ ನಡೆಯನ್ನು ವಿರೋಧಿಸಿ ಕಾಂಗ್ರೆಸ್ ಕ್ಷಕ್ಕೆ ಪಾದಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯರಾದ ಕೆ ಶಾಂತಪ್ಪ, ಶ್ರೀನಿವಾಸರಡ್ಡಿ, ತಿಮ್ಮಾರಡ್ಡಿ, ಶೇಖರ್ ರಡ್ಡಿ, ಅರುಣ ದೊತರಬಂಡಿ, ಮುನಿ, ವಿಶಾಲ್ ಶ್ರೀನಿವಾಸ್ ರಡ್ಡಿ, ಮಲಂಗ್, ಕುಲ್ಲಾ ಮಲ್ಲೇಶ, ಬಾಯಿದೊಡ್ಡಿ ವಿಜಯ್, ವಿನೋದ್ ರಡ್ಡಿ, ವಿಜಯ್, ನಾಗರಾಜು, ಶ್ರೀನಿವಾಸ ರಡ್ಡಿ, ರಂಜಿತ್ ಹೀರಾ, ಪ್ರಶಾಂತ ಕುಮಾರ, ಪ್ರವೀಣ, ವೀರೇಶ್, ರವಿ ರಾಂಪೂರ, ಹನುಮಂತ ಹೊಸೂರು, ಮಹೇಂದ್ರ ಜೆಗರಕಲ್ ತಿಮ್ಮಪ್ಪ , ಶರಣಗೌಡ ಮಲ್ಲಾಪೂರ ಸೇರಿದಂತೆ ಅನೇಕರು ಮೆರಚಣಿಗೆ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.