ಬೃಹತ್ ಪಂಜಿನ ಮೆರವಣಿಗೆ

ಹುಬ್ಬಳ್ಳಿ,ಮಾ24: ಭಾರತೀಯ ಜನತಾ ಪಕ್ಷ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರ ಯುವ ಮೋರ್ಚಾ ಘಟಕದ ವತಿಯಿಂದ, ಭಾರತ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಹೋರಾಟಗಾರರಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ಹುತಾತ್ಮರ ದಿನದ ಸ್ಮರಣಾರ್ಥಕವಾಗಿ ಬೃಹತ್ ಪಂಜಿನ ಮೆರವಣಿಗೆಯನ್ನು ನಗರದಲ್ಲಿ ಹಮ್ಮಿಕೊಳ್ಳಲಾಯಿತು.

ಹು-ಧಾ ಪೂರ್ವ ಯುವ ಮೋರ್ಚಾ ಅಧ್ಯಕ್ಷರಾದ ಪ್ರೀತಮ್ ಅರಕೇರಿ ಅಧ್ಯಕ್ಷತೆಯಲ್ಲಿ ಹಾಗೂ ಹು-ಧಾ ಪೂರ್ವ ಮಂಡಲದ ಅಧ್ಯಕ್ಷರಾದ ಪ್ರಭು ನವಲಗುಂದಮಠ ರವರ ನೆತೃತ್ವದಲ್ಲಿ ಬೃಹತ ಪಂಜಿನ ಮೆರವಣಿಗೆಯನ್ನು ಈಶ್ವರ ದೇವಸ್ಥಾನ, ಈಶ್ವರ ನಗರ, ಹಳೇ ಹುಬ್ಬಳ್ಳಿಯಿಂದ ಪ್ರಾರಂಭವಾಗಿ ಜಂಗ್ಲಿಪೇಟ, ಬೇಳಮಕರ ಓಣಿ ಮೂಲಕ ಸಾಗಿತು. ದಾರಿ ಮಧ್ಯೆ ದೇಶಾಭಿಮಾನಿಗಳು ಪುಷ್ಪಗಳ ಮಳೆಗೆರೆದು ಸ್ವಾಗತ ಮಾಡಿದರು. ಹಳೇ ಹುಬ್ಬಳ್ಳಿ ವೃತದಲ್ಲಿ ಮೆರವಣಿಗೆ ಮುಕ್ತಾಯಗೊಂಡಿತು.

ಕಾರ್ಯಕ್ರಮದಲ್ಲಿ ಸುಭಾಷ ಸಿಂಗ್ ಜಮಾದಾರ ಮಾತನಾಡಿ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರು ಹುತಾತ್ಮರಾದ ಕ್ಷಣಗಳು ನಮ್ಮ ಚರಿತ್ರೆಯಲ್ಲಿ ಕಂಬನಿ ತರುವ ಕ್ಷಣಗಳು. 1928 ರಲ್ಲಿ ದೆಹಲಿಯ ಸೆಂಟ್ರಲ್ ಅಸೆಂಬ್ಲಿಗೆ ಬಾಂಬ್ ಎಸೆದ ಆರೋಪ ಮತ್ತು ಬ್ರಿಟಿಷ್ ಅಧಿಕಾರಿಯೊಬ್ಬನನ್ನು ಗುಂಡಿಕ್ಕಿ ಕೊಂದ ಕಾರಣಕ್ಕೆ ಅವರನ್ನು ಸೆರೆಯಲ್ಲಿರಿಸಲಾಗಿತ್ತು. ನಂತರ 1931 ಮಾರ್ಚ್ 23 ರಂದು ಅವರನ್ನು ಬ್ರಿಟಿಷ್ ಸರ್ಕಾರ ನೇಣಿಗೇರಿಸಿತು. ಯುವ ಜನಾಂಗಕ್ಕೆ ಸ್ಫೂರ್ತಿಯಾದ ಆ ದಿವ್ಯಚೇತನಗಳನ್ನು ನೆನೆದು ಮಾರ್ಚ್ 23 ನ್ನು ಶಾಹಿದ್ ದಿವಸ್ ಅಥವಾ ಬಲಿದಾನ ದಿನವನ್ನಾಗಿ ಆಚರಿಸಲಾಗುತ್ತದೆ. ಇತಿಹಾಸದಲ್ಲಿ ಅಚ್ಚೊತ್ತಿದ ಮಹತ್ವದ ಮಹಾನ್ ನಾಯಕರಿಗೆ ನಮ್ಮ ಭೂಮಿಯ ಈ ಮೂವರು ಶ್ರೇಷ್ಟ ವ್ಯಕ್ತಿಗಳ ಬಗ್ಗೆ ಪ್ರತೀ ಭಾರತೀಯರೂ ಹೆಮ್ಮೆ ಪಡಬೇಕು. ಅವರ ಯೌವನದ ಉತ್ತುಂಗ ಕಾಲದಲ್ಲಿ ಅವರು ತಮ್ಮ ಜೀವನನ್ನು ಬಲಿದಾನ ಮಾಡಿದರು. ಅವರಿಂದಾಗಿ ಇತರರು ಸ್ವಾತಂತ್ರ್ಯ ಮತ್ತು ಸ್ವಾಭಿಮಾನದ ಬದುಕನ್ನು ಜೀವಿಸುವಂತಾಗಿದೆ. ಅವರು ಎಂದಿಗೂ ನಮ್ಮೆಲ್ಲರ ಮನಸ್ಸಿನಲ್ಲಿ ಭದ್ರಸ್ಥಾನದಲ್ಲಿ ಉಳಿಯುತ್ತಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಶಿವು ಮೇಣಸಿನಕಾಯಿ, ಓಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ ಶೇಜವಾಡಕರ, ಹುಡಾ ಸದಸ್ಯ ಚಂದ್ರಶೇಖರ ಗೋಕಾಖ, ಸಂತೋಷ ಅರಕೇರಿ, ಹು-ಧಾ ಪೂರ್ವ ಮಂಡಲದ ಪ್ರಧಾನ ಕಾರ್ಯದರ್ಶಿ ಜಗದೀಶ ಬುಳ್ಳನವರ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಲಾಲ, ಪ್ರೀನ್ಸ ಶರ್ಮಾ, ಶಿವಯ್ಯಾ ಹಿರೇಮಠ, ರೇಲ್ವೆ ಸಲಹಾ ಸಮಿತಿ ಸದಸ್ಯ ದೀಪಕ ಲಾಳಗೆ, ಅಣ್ಣಪ್ಪ ಗೋಕಾಖ, ರಾಜು ಕೋರ್ಯಣಮಠ, ಪ್ರವೀಣ ಕುಬಸದ, ಹರೀಶ ಹಳ್ಳಿಕೇರಿ, ಮಂಜುನಾಥ ಬಿಜವಾಡ ಮತ್ತಿತರರು ಉಪಸ್ಥಿತರಿದ್ದರು.