ಬೃಹತ್ ಧ್ವಜಾರೋಹಣ: ಡಾ.ಶರಣಬಸವಪ್ಪ ಅಪ್ಪಾರಿಂದ ಪೋಸ್ಟರ್ ಬಿಡುಗಡೆ

ಕಲಬುರಗಿ ಆ 1: ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ಯ ಖಾದಿ ಯಿಂದ ತಯಾರಿಸಿದ 75 ಅಡಿ ಉದ್ದ 50ಅಡಿ ಅಗಲದ ದೇಶದ ಎರಡನೇ ಅತಿ ದೊಡ್ಡ ಹಾಗೂ ಕರ್ನಾಟಕದ ಅತಿ ದೊಡ್ಡ ರಾಷ್ಟ್ರಧ್ವಜದ ಅನಾವರಣ ಕಮಲಾಪುರದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಪೆÇೀಸ್ಟರ್ ಬಿಡುಗಡೆ ಮಾಡಿದ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾ ಅವರು ದೇಶದಲ್ಲೆ ಎರಡನೇಯ ರಾಜ್ಯದಲ್ಲೆ ದೊಡ್ಡ ಧ್ವಜಾರೋಹಣ ಕಲಬುರಗಿಯ ಕಮಲಾಪುರದಲ್ಲಿ ನಡೆಯುತ್ತಿರುವುದು ಸಂತೋಷದ ವಿಷಯವಾಗಿದೆ. ದೇಶಾಭಿಮಾನದಿಂದ ಬಮ್ಮನ್ ಕುಟುಂಬ ವೈಯಕ್ತಿಕವಾಗಿ ಮಾಡುತ್ತಿರುವುದು ಒಳ್ಳೆಯಬೆಳವಣಿಗೆ ಎಂದು ಹೇಳಿದರು. ಆಯೋಜಕ ವಿನೋದ ಬಮ್ಮನ್,ಎಂ ಎಸ್ ಪಾಟೀಲ್ ನರಿಬೋಳ.ಮಾತನಾಡಿದರು. ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ, ಪೂಜ್ಯ ಚಿರಂಜೀವಿ ದೊಡ್ಡಪ್ಪಾ ಅಪ್ಪಾ, ಬಸವರಾಜ ದೇಶಮುಖ, ವಿನೋದ ರೇವಪ್ಪ ಬಮ್ಮನ, ರವೀಂದ್ರ ಮುತ್ತಿನ್, ಚನ್ನವೀರಪ್ಪಾ ಗುಡ್ಡಾ ಮಂಜು ಡಬರಾಬಾದಿ ಮತ್ತು ಬಮ್ಮನ್ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು