ಬೃಹತ್ ಕೈ ಸಮಾವೇಶಕ್ಕೆ ಸಿದ್ಧತೆ

ಕೋಲಾರ,ಏ,೧- ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರು ಏ,೯ಕ್ಕೆ ಕೋಲಾರಕ್ಕೆ ಭೇಟಿ ಕೆ.ಪಿ.ಸಿ.ಸಿ. ಆಯೋಜಿಸಿರುವ ಬೃಹತ್ ಕಾಂಗ್ರೇಸ್ ಸಮಾವೇಶದಲ್ಲಿ ಭಾಗವಹಿಸಲಿರುವ ಹಿನ್ನಲೆಯಲ್ಲಿ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ೭೫ರ ಸರ್ವಿಸ್ ರಸ್ತೆಗೆ ಹೊಂದಿ ಕೊಂಡಂತೆ ಇರುವ ಆರ್.ಎಲ್.ಜಾಲಪ್ಪ ಆಸ್ಪತ್ರೆಯ ಮುಂಭಾಗದಲ್ಲಿರುವ ಆನಂತರಾಜು ಅವರ ೧೧ ಎಕರೆ ಜಮೀನಿನಲ್ಲಿ ಬೃಹತ್ ವೇದಿಕೆಯನ್ನು ಸಿದ್ದಪಡೆಸಲಾಗುತ್ತಿದೆ.
ಸಮಾವೇಶದಲ್ಲಿ ಕೋಲಾರ ಜಿಲ್ಲೆ, ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ಬೆಂಗಳೊರು ಗ್ರಾಮಾಂತರ ಜಿಲ್ಲೆ ಸೇರಿದಂತೆ ಸುಮಾರು ೨ ಲಕ್ಷ ಮಂದಿ ಸಮಘಟಿತರಾಗುವ ನಿರೀಕ್ಷೆಯನ್ನು ಹೊಂದಿದೆ. ಸಮಾವೇಶದ ಜಮೀನಿನಲ್ಲಿನ ಹಳ್ಳ ಕೊಳ್ಳಗಳನ್ನು ಸಮದಟ್ಟು ಮಾಡಲು ಜೆ.ಸಿ.ಬಿ.ಗಳು ಟ್ರಾಕ್ಟರ್, ಟ್ರಕರ್‌ಗಳು ಕಾರ್ಯನಿರ್ವಹಿಸುತ್ತಿದೆ.
ಈಗಾಗಲೇ ಬೆಂಗಳೂರಿನ ಪ್ರಸಿದ್ದ ಪೆಂಡಾಲ್ ಕಂಟ್ರಾಕ್ಟರ್ ಅವರಿಗೆ ಪೆಂಡಾಲ್ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಪುರುಷರಿಗೆ, ಮಹಿಳೆಯರಿಗೆ ಹಾಗೂ ಮಾದ್ಯಮದವರಿಗೆ ಪ್ರತ್ಯೇಕವಾದ ಸ್ಥಳಗಳನ್ನು ಗೊತ್ತು ಪಡೆಸಿ ನಕಾಶೆಗಳನ್ನು ಸಿದ್ದ ಪಡೆಸಲಾಗಿದ್ದು ಅದರ ಪ್ರಕಾರ ಪೆಂಡಲ್ ಮತ್ತು ಆಸನಗಳನ್ನು ಸಿದ್ದಪಡೆಸಲಾಗುವುದು,
ಸಾರ್ವಜನಿಕರಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳಾದ ನೀರು, ಶೌಚಲಾಯ ಹಾಗೂ ಊಟದ ವ್ಯವಸ್ಥೆಗೆ ಅಗತ್ಯವಾದ ಜಾಗವನ್ನು ಗುರುತಿಸಲಾಗಿದೆ. ಇದರ ಜೂತೆಗೆ ದ್ವಿಚಕ್ರ, ಕಾರು, ಟೆಂಪು ಹಾಗೂ ಬಸ್‌ಗಳ ನಿಲುಗಡೆ ಪ್ರತ್ಯೇಕ ಜಾಗವನ್ನು ನಿಗಧಿ ಪಡೆಸಲಾಗಿದೆ.
ವೇದಿಕೆ, ಮುಖ್ಯ ಅತಿಥಿಗಳಿಗೆ ಆಸನಗಳು, ಪದಾಧಿಕಾರಿಗಳಿಗೆ ವೇದಿಕೆ ಮುಂಭಾಗ ಮತ್ತು ವೇದಿಕೆ ಪಕ್ಕದಲ್ಲಿ ಆಸನಗಳನ್ನು ಸಿದ್ದ ಪಡೆಸಲಾಗಿದೆ. ವೇದಿಕೆ ಮೇಲೆ ಬೆರಳೆಣಿಕೆಯಷ್ಟು ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಮುಖ ನಾಯಕರಿಗೆ ಮಾತ್ರ ಅಸನದ ಅವಕಾಶ ಕಲ್ಪಸಿಲಾಗುವುದು.
ಎಐಸಿಸಿ ಸಂಘಟನ ಕಾರ್ಯದರ್ಶಿ ಅಭೀಷೇಕ್ ದತ್ತ್ ಅವರು ಸಮಾವೇಶದ
ಸ್ಥಳಕ್ಕೆ ಅಗಮಿಸಿ ಸಿದ್ದತೆಗಳನ್ನು ಗಮನಿಸಿದರು, ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ರಾದ ಎಂ.ಎಲ್. ಅನಿಲ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪ್ರಸಾದ್ ಬಾಬು ಮುಖಂಡರಾದ ಎಸ್.ಸಿ. ವಿಭಾಗದ ಜಿಲ್ಲಾಧ್ಯಕ್ಷ ಜಯದೇವ,ಹಿಂದುಳಿದ ಘಟಕ ಮುಖಂಡ ಮಂಜುನಾಥ್, ಇದ್ದರು.