ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟನೆ

ಬೆಂಗಳೂರು,ಜು೧೭:ಮಹಾಲಕ್ಷ್ಮಿ ಲೇಔಟ್ ಬಿ.ಜಿ.ಎಸ್ ವರ್ಲ್ಡ್ ಶಾಲಾ ಆವರಣದಲ್ಲಿ ವಿಶ್ವ ಒಕ್ಕಲಿಗರ ಮಹಾವೇದಿಕೆ,ಮಹಿಳಾ ವಿಭಾಗ ಹಾಗೂ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಸಂಸ್ಥೆಯ ಸಹಯೋಗದಲ್ಲಿ ಬೃಹತ್ ಮಹಿಳಾ ಉದ್ಯೋಗ ಮೇಳ ಉದ್ಘಾಟಿಸಲಾಯಿತು.
ಶ್ರೀ ಆದಿಚುಂಚನಗಿರಿ ಶಾಖಾಮಠ, ವಿಜಯನಗರ ಪರಮ ಪೂಜ್ಯ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿಯವರು ವಹಿಸಿಕೊಂಡಿದ್ದರು. ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರಾದ ಡಾ. ಟಿ. ಶಿವಕುಮಾರ್ ನಾಗರ ನವಿಲೆ ಸೇರಿದಂತೆ ಇತರೆ ಗಣ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು .
ನಂತರ ಅಧ್ಯಕ್ಷ ಡಾ. ಟಿ. ಶಿವಕುಮಾರ್ ನಾಗರ ನವಿಲೆಯವರು ಈ ಕಾರ್ಯಕ್ರಮದ ರೂವಾರಿ ಶ್ರೀಮತಿ ಭಾರತಿ ಶಂಕರ್ ರವರು ವ್ಯಕ್ತಿಯಲ್ಲ ಶಕ್ತಿ. ಜನರಿಗೆ ನಾವು ಅನ್ನದಾನ ಮಾಡುವ ಬದಲು ಅವರೇ ದುಡಿದು ತಿನ್ನುವಂತಹ ಕೆಲಸ ಮಾಡಬೇಕು. ಆ ಕೆಲಸ ಈ ದಿನ ಆಗುತ್ತಿರುವುದು ಬಹಳ ಹೆಮ್ಮೆ ಎನಿಸುತ್ತದೆ. ಮಹಿಳೆಯರು ಆರ್ಥಿಕವಾಗಿ ಸಭಲರಾಗಲು ಇದೊಂದು ಸುವರ್ಣಾಕಾಶ. ಎಲ್ಲರಿಗೂ ಶುಭವಾಗಲಿ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಸಭಾ ಸದಸ್ಯರಾದ ಜಿ.ಸಿ. ಚಂದ್ರಶೇಖರ್, ವಿಶ್ವ ಒಕ್ಕಲಿಗರ ಮಹಾವೇದಿಕೆ ಮಹಿಳಾ ವಿಭಾಗದ ಅಧ್ಯಕ್ಷರಾದ ಶ್ರೀಮತಿ ಭಾರತಿ ಶಂಕರ್, ಹೇಮಲತಾ ಗೋಪಾಲಯ್ಯ, ವೈ.ಡಿ ರವಿಶಂಕರ್, ಶಾಸಕರಾದ ಸಿ. ಎನ್. ಬಾಲಕೃಷ್ಣ, ದೇವರಾಜ್, ಮಹಿಳಾ ವಿಭಾಗದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು