
ಬೈಲಹೊಂಗಲ 21: ಪಟ್ಟಣದ ಸೋಮವಾರ ಪೇಟೆಯಲ್ಲಿರುವ ಆಶೀರ್ವಾದ ಆಸ್ಪತ್ರೆಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಿತು.
ಆಶೀರ್ವಾದ ಆಸ್ಪತ್ರೆ ವತಿಯಿಂದ ರವಿವಾರ ಜರುಗಿದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಧುಮೇಹ ಹಾಗೂ ರಕ್ತದೊತ್ತಡ ತಪಾಸಣೆ ಮಾಡಿ ಉಚಿತವಾಗಿ ಶುಗರ್, ಬಿ.ಪಿ ಮಾತ್ರೆಗಳನ್ನು ನೀಡಲಾಯಿತು. ಜೊತೆಗೆ ಇ.ಸಿ.ಜಿ. ಹಾಗೂ ಈಕೋ ತಪಾಸಣೆಯನ್ನು ಉಚಿತವಾಗಿ ಮಾಡಲಾಯಿತು.
ಆಸ್ಪತ್ರೆಯ ವೈದ್ಯ ಡಾ.ಸಂಜೀವಕುಮಾರ ಮಡಿವಾಳರ ಇವರ ತಂದೆ ಸೋಮೇಶ್ವರ, ತಾಯಿ ಶಾಂತಾ ಇವರ 35 ನೇ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಲಾದ ಈ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ನುರಿತ ವೈದ್ಯರಾದ ಡಾ. ಸಂಜೀವಕುಮಾರ ಮಡಿವಾಳರ, ಡಾ. ಅಶೋಕ ಕುಲಕರ್ಣಿ, ಡಾ. ಚೇತನ ಕೋಟಗಿ, ಡಾ.ಬಸವರಾಜ ಹೆಬ್ಬಳ್ಳಿ ಹಾಗೂ ತಂಡದವರಿಂದ ಆರೋಗ್ಯ ತಪಾಸಣೆ ಜರುಗಿತು. ಈ ಶಿಬಿರದಲ್ಲಿ ನಗರದ ಹಾಗೂ ತಾಲೂಕಿನ ಸಾರ್ವಜನಿಕರು ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದರು. ಶಿವಾನಂದ ಮಡಿವಾಳರ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.