ಬೂದುಗುಪ್ಪ ಗ್ರಾಮದಲ್ಲಿ ಡಾ. ಬಿಆರ್ ಅಂಬೇಡ್ಕರ್ ನಾಮಫಲಕ ಉದ್ಘಾಟನೆ.


ಸಂಜೆವಾಣಿ ವಾರ್ತೆ
ಸಿರಿಗೇರಿ ಏ.15. ಸಿರುಗುಪ್ಪ ತಾಲೂಕಿನ ಬೂದುಗುಪ್ಪ ಗ್ರಾಮದಲ್ಲಿ ಚಲವಾದಿ ಕಾಲೋನಿಯ ಹತ್ತಿರ ನಿನ್ನೆ  ಡಾ. ಬಿಆರ್ ಅಂಬೇಡ್ಕರ್ ಅವರ 132ನೇ ಜನ್ಮದಿನಾಚರಣೆ ಪ್ರಯುಕ್ತ ಅಂಬೇಡ್ಕರ್ ಮತ್ತು ವೀರ ವನಿತೆ ಒನಕೆ ಓಬವ್ವ ಇವರ ಭಾವಚಿತ್ರವನ್ನು ಹೊಂದಿರುವ ಚಲವಾದಿ ಮಹಾಸಭಾ ಗ್ರಾಮ ಘಟಕದ ನಾಮಫಲಕವನ್ನು ಉದ್ಘಾಟನೆ ಮಾಡಲಾಯಿತು. ಇದೆ ವೇಳೆ ಗ್ರಾಮದ ಮುಖ್ಯ ಬೀದಿಯಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಸರಳವಾಗಿ, ಸಂಭ್ರಮದಿಂದ ಟ್ರ್ಯಾಕ್ಟರನಲ್ಲಿ  ಇಟ್ಟು ಮೆರವಣಿಗೆ ಮಾಡಲಾಯಿತು. ನಂತರ ನಾಮಫಲಕವನ್ನು ಉದ್ಘಾಟನೆಗೊಳಿಸಿ ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು. ಸಿರುಗುಪ್ಪ ತಾಲೂಕು ಛಲವಾದಿ ಮಹಾಸಭಾ ಸಮಿತಿಯ ಸಹ ಕಾರ್ಯದರ್ಶಿ, ಓಂಕಾರಪ್ಪ, ಬೂದಗುಪ್ಪ ಗ್ರಾಮ ಘಟಕ ಅಧ್ಯಕ್ಷ ಲಕ್ಷ್ಮಣ, ಮುಖಂಡರಾದ ಚಿದಾನಂದ, ರಮೇಶ, ಸರ್ದಾರ, ನಾಗರಾಜ, ಗಾದಿಲಿಂಗಪ್ಪ, ರಂಗಪ್ಪ, ಬಸವ ಹಾಗೂ ಮಹಿಳೆಯರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.