ಬೂದಿನಾಳ ಜನರಿಗೆ ಮಾಸ್ಕ್ ವಿತರಣೆ

ದೇವದುರ್ಗ: ತಾಲೂಕಿನ ಹಿರೇಬೂದೂರು ಗ್ರಾಪಂ ವ್ಯಾಪ್ತಿಯ ಬೂದಿನಾಳ ಗ್ರಾಮದ ಜನರಿಗೆ ಸ್ಥಳೀಯ ಗ್ರಾಪಂ ಸದಸ್ಯ ಬೂದೆಪ್ಪ ಕ್ಯಾದಿಗಿ ಮಾಸ್ಕ್, ಸಾನಿಟೈಸರ್ ಇತ್ತೀಚೆಗೆ ವಿತರಣೆ ಮಾಡಿದ್ದಾರೆ. ಕರೊನಾ ಎರಡನೇ ಅಲೆ ತಡೆಗೆ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ಸಂಕಷ್ಟದಲ್ಲಿರುವ ಬಡವರಿಗೆ ಬೂದೆಪ್ಪ ತಮ್ಮ ಸ್ವಂತ ಹಣದಲ್ಲಿ ನೂರಾರು ಜನರಿಗೆ ಮಾಸ್ಕ್, ಸಾನಿಟೈಸರ್, ಕೈತೊಳೆಯುವ ಸಾಬೂನು ನೀಡಿದ್ದಾರೆ. ಎರಡನೇ ಅವಧಿಗೆ ಸದಸ್ಯರಾಗಿರುವ ಇವರು, ಗ್ರಾಮದ ಜನರಿಗೆ ಸರ್ಕಾರದ ಸಂದ್ಯಾಸರುಕ್ಷಾ ವೇತನ, ವಿಧುವಾ ವೇತನ ಉಚಿತವಾಗಿ ಮಾಡಿಸಿಕೊಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಚರಂಡಿಗೆ ಸ್ವತಃ ಇಳಿದು ಸ್ವಚ್ಛ ಮಾಡಿ ಗಮನ ಸೆಳೆದಿದ್ದರು. ಸದ್ಯ ಉಚಿತವಾಗಿ ಮಾಸ್ಕ್, ಸಾನಿಟೈಸರ್ ವಿತರಿಸಿ ಗಮನ ಸೆಳೆದಿದ್ದಾರೆ.