ಬೂತ್ ವಿಜಯ ಕಾರ್ಯಕ್ರಮ


ಲಕ್ಷ್ಮೇಶ್ವರ,ಜ.7:ಪಟ್ಟಣದಲ್ಲಿ ಶುಕ್ರವಾರ ಭಾರತೀಯ ಜನತಾ ಪಕ್ಷದ ಬೂತ್ ವಿಜಯ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಅಂಗವಾಗಿ ಬೂತ್ ಮಟ್ಟದ ಅಧ್ಯಕ್ಷರು ,ಪೇಜ್ ಪ್ರಮುಖರು , ಮತ್ತು ಬಿಜೆಪಿ ಕಾರ್ಯಕರ್ತರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ಪಟ್ಟಣದ ವಾರ್ಡ್ ನಂಬರ್ 1, 2, 3, 88, 91, 94, ರಲ್ಲಿ ಬೂತ್ ವಿಜಯ ಕಾರ್ಯಕ್ರಮದ ಅಂಗವಾಗಿ ಬೂತ್ ಮಟ್ಟದ ಅಧ್ಯಕ್ಷರು ಹಾಗೂ ಪ್ರಮುಖರು ಸೇರಿ ಬಿಜೆಪಿ ಕಾರ್ಯಕರ್ತರ ಮನೆಯ ಮೇಲೆ ಪಕ್ಷದ ಧ್ವಜವನ್ನು ಹಾರಿಸುವ ಮೂಲಕ ಬೂತ್ ವಿಜಯಕ್ಕೆ ಹಸಿರು ನಿಶಾನೆ ತೋರಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಡಾ. ಚಂದ್ರು ಲಮಾಣಿ, ಉಸ್ತುವಾರಿ ರಮೇಶ ಹಾಳತೋಟದ, ಶಿರಹಟ್ಟಿ ಮಂಡಳ ಪ್ರಧಾನ ಕಾರ್ಯದರ್ಶಿ ಗಂಗಾಧರ ಮೆಣಸಿನಕಾಯಿ, ಸಂಗಮೇಶ ಬೆಳವಲಕೊಪ್ಪ, ವಿಜಯಕುಂಬಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.