ಬೂತ್ ವಿಜಯ ಅಭಿಯಾನ

ಗುರಮಿಠಕಲ್:ಜ.18:ಬೂತ್ ವಿಜಯ ಅಭಿಯಾನ ,ವಿಜಯ ಸಂಕಲ್ಪ ಅಭಿಯಾನದ ಹತ್ತಿಕುಣಿ ಮಹಾ
ಶಕ್ತಿ ಕೇಂದ್ರದ ಮೋಟ್ನಳ್ಳಿ ಕೋಟಗೇರಾ,ಕೆ.ಹೊಸಳ್ಳಿ,ಚಿಂತಾಗುಂಟ ಗ್ರಾಮಗಳಲ್ಲಿ ಶಕ್ತಿ ಕೇಂದ್ರಗಳಲ್ಲಿ
ಸಭೆ ನಡೆಸಲಾಯಿತು ಮತ್ತು 19 ನೇ ತಾರೀಕು ಸೇಡಂ ತಾಲೂಕಿನ ರಾಷ್ಟ್ರಕೊಟರ ರಾಜಧಾನಿಯಾದ ಮಳಖೇಡ ಗ್ರಾಮಕ್ಕೆ ಪ್ರಧಾನಿ ನರೇಂದ್ರ ಮೋದಿಜಿ ಯವರು ಆಗಮಿಸುವ ಪ್ರಯುಕ್ತ ಪೂರ್ವ ಭಾವಿ ಸಭೆ ನಡೆಸಲಾಯಿತು
ಸಭೆಯಲ್ಲಿ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷರಾದ ಹಾಗೂ ವಿಜಯ ಸಂಕಲ್ಪ ಅಭಿಯಾನದ ಜಿಲ್ಲಾ ತಂಡದ ಸದಸ್ಯರಾದ ಮೌನೇಶ್ ಬೆಳಗೇರ ಕಾರ್ಯದರ್ಶಿ ಹಾಗೂ ವಿಜಯ ಸಂಕಲ್ಪ ಅಭಿಯಾನದ ಗುರುಮಿಟ್ಕಲ್ ಮಂಡಲದ ಸಂಚಾಲಕರು ಶ್ರೀಕಾಂತ್ ಬಾಚವಾರ ಹಾಗೂ ಅಮೃತ ತಿಪ್ಪಶೆಟ್ಟಿ, ನಾಗವೇಣಿ, ಗುರುನಾಥ ಗಟ್ಲಾ,ಶರಣಗೌಡ ಪಾಟೀಲ್ ಮೋಟ್ನಳ್ಳಿ ನಾಗಪ್ಪ,ಮಾಜಿ ಅಧ್ಯಕ್ಷರು ಮಲ್ಲಿಕಾರ್ಜುನ ಉಪ್ಪಾರ್ ಕೋಟಗೇರಾ ದೇವೀಂದ್ರಪ್ಪ, ಮಹದೇವಪ್ಪ ಇತರರು ಇದ್ದರು.