ಬೂತ್ ವಿಜಯ ಅಭಿಯಾನ ಸಭೆ ಉದ್ಘಾಟನೆ

ಗದಗ,ಜ1 : ಮುಂಬರುವ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಗೆಲ್ಲಿಸಲು ಪಕ್ಷವನ್ನು ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಬಲಪಡಿಸುವ ಅವಶ್ಯಕತೆ ಇದೆ. ಜನೆವರಿ 2 ರಿಂದ 10 ರೊಳಗೆ ರಾಜ್ಯಾದ್ಯಾಂತ 50 ಲಕ್ಷ ಮನೆಗಳಲ್ಲಿ ಪಕ್ಷದ ಧ್ವಜ ಹಾರಿಸುವ ಗುರಿಯನ್ನು ಹೊಂದಲಾಗಿದ್ದು. ಬೂತ್ ಮಟ್ಟದ ಕಾರ್ಯಕರ್ತರಾದಿಯಾಗಿ ಎಲ್ಲಾ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದು ರೋಣ ಮಂಡಲ ಬಿಜೆಪಿ ಅಧ್ಯಕ್ಷ ಮುತ್ತಣ್ಣ ಕಡಗದ ನುಡಿದರು.
ಜಿಲ್ಲೆಯ ಗಜೇಂದ್ರಗದ ನಗರದ ಪಕ್ಷದ ಕಚೇರಿಯಲ್ಲಿ ಭಾಜಪ ರೋಣ ಮಂಡಲವತಿಯಿಂದ ಜನೇವರಿ 2 ರಿಂದ ಜನೇವರಿ 12 ರ ವರಗೆ ನಡೆಯಲಿರುವ ಬೂತ್ ವಿಜಯ ಅಭಿಯಾನದ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಗದಗ ಜಿಲ್ಲಾ ಭಾಜಪ ಕೋಶಾಧ್ಯಕ್ಷರಾದ ನಾಗರಾಜ ಕುಲಕರ್ಣಿ, ಮುಂಬರುವ ದಿನಗಳಲ್ಲಿ ಯುವಕರು ತಮ್ಮ ತಮ್ಮ ಬೂತ್‍ಗೆ ಸಂಬಂಧಪಟ್ಟ ಪ್ರತಿ ಮನೆಗಳಿಗೆ ತೆರಳಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪರ ಕಾರ್ಯಕ್ರಮಗಳನ್ನು ತಿಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಭಾಜಪ ಜಿಲ್ಲಾ ಉಪಾಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ವೀರಣ್ಣ ಅಂಗಡಿಯವರನ್ನು ಭಾಜಪ ರೋಣ ಮಂಡಲದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಅಶೋಕ ನವಲಗುಂದ, ಭಾಸ್ಕರಸಾ ರಾಯಬಾಗಿ, ವೀರಣ್ಣ ಅಂಗಡಿ, ರಾಜಣ್ಣ ಹೂಲಿ,ಶಶಿಧರ ಸಂಕನಗೌಡ್ರು, ಆರ್.ಕೆ.ಚವ್ಹಾಣ್, ರಾಜೇಂದ್ರ ಘೋರ್ಪಡೆ, ಪ್ರಧಾನ ಕಾರ್ಯದರ್ಶಿಗಳಾದ ಉಮೇಶ ಮಲ್ಲಾಪುರ, ನೀಲಪ್ಪ ಗುರಿಕಾರ ಹಾಗೂ ಪಕ್ಷದ ಶಕ್ತಿಕೇಂದ್ರ ಪ್ರಮುಖರು, ಮಹಾಶಕ್ತಿ ಕೇಂದ್ರ ಪ್ರಮುಖರು, ಪಕ್ಷದ ಮುಖಂಡರು ಉಪಸ್ಥತರಿದ್ದರು.