ಬೂತ್ ವಿಜಯ ಅಭಿಯಾನಕ್ಕೆ ಚಾಲನೆ

ಧಾರವಾಡ,ಜ3 : ಬಿಜೆಪಿ ಧಾರವಾಡ ಮಂಡಲ ವತಿಯಿಂದ ಬೂತ್ ವಿಜಯ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಕಾರ್ಯಕ್ರಮದ ನೇತ್ರತ್ವ ವಹಿಸಿದ್ದ ಧಾರವಾಡ ಶಾಸಕ ಅಮೃತ ದೇಸಾಯಿ ಮಾತನಾಡಿ ಸಲಹೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷರಾದ ಬಸವರಾಜ ಕುಂದಗೋಳಮಠ, ಮಾಜಿ ಶಾಸಕಿ ಸೀಮಾ ಮಸೂತಿ ಮಾತನಾಡಿ, ಬೂತ್ ಮಟ್ಟದ ಸಂಘಟನೆಯೇ ಪಕ್ಷದ ಜೀವಾಳವಾಗಿದೆ. ಮಹಿಳೆಯರು ಸಹ ಪುರುಷರಷ್ಟೆ ಸಂಘಟಿತರಾಗಿ, ಪಕ್ಷ ಸಂಘಟನೆಯಲ್ಲಿ ತೊಡಬೇಕು. ಪ್ರಧಾನಿ ಮೋದಿಯವರು ಮಹಿಳೆ ಮತ್ತು ಮಕ್ಕಳಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದನ್ನು ಎಲ್ಲರಿಗೂ ಮುಟ್ಟಿಸುವ ಕೆಲಸ ಆಗಬೇಕು ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಡಬಲ್ ಎಂಜಿನ್ ಸರ್ಕಾರವಾಗಿದ್ದು, ಅವುಗಳ ಸಾಧನೆ ಕುರಿತು ವಿವರಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷರಾದ ರುದ್ರಪ್ಪ ಅರಿವಾಳ, ಪ್ರಧಾನ ಕಾರ್ಯದರ್ಶಿಗಳಾದ ಶಿವಾನಂದ ಗುಂಡಗೋವಿ, ಮಾಂತೇಶ ಶ್ಯಾಗೋಟಿ, ಶಶಿಮೌಳಿ ಕುಲಕರ್ಣಿ, ಚನ್ನವೀರಗೌಡ ಪಾಟೀಲ, ಶಂಕರ ಕೊಮಾರದೇಸಾಯಿ, ವೀರಯ್ಯ ಚಿಕ್ಕಮಠ, ನಾಗಪ್ಪ ತಿರ್ಲಾಪೂರ, ಸುಶೀಲಾ ಪಾಟೀಲ, ಮಂಡಲ ಪದಾಧಿಕಾರಿಗಳು ಉಪಸ್ಥಿತರಿದ್ದರು.