ಬೂತ್ ಮಟ್ಟದಲ್ಲಿ ಲಸಿಕೆ ಹಂಚಿಕೆಗೆ ಚಿಂತನೆ

ದೆಹಲಿ, ಜ.೩- ಕೋವಿಡ್-೧೯ ಲಸಿಕೆ ವಿತರಣೆ ಸಂಬಂಧ ಚುನಾವಣಾ ಪ್ರಕ್ರಿಯೆಯಂತೆ ಬೂತ್ ಮಟ್ಟದಲ್ಲಿ ಹಂಚಿಕೆಗೆ ಚಿಂತನೆ ನಡೆಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕೊರೋನಾ ವ್ಯಾಕ್ಸಿನೇಷನ್ ಡ್ರೈವ್ ಬೂತ್ ಮಟ್ಟಕ್ಕೆ ಯೋಜಿಸಲಾಗಿದೆ. ಇನ್ನು ಈವರೆಗೆ ೯೬,೦೦೦ ವ್ಯಾಕ್ಸಿನೇಟರ್‌ಗಳಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ವ್ಯಾಕ್ಸಿನೇಷನ್ ಡ್ರೈವ್ ಬೂತ್ ಮಟ್ಟಕ್ಕೆ ಯೋಜಿಸಲಾದ ಚುನಾವಣಾ ಪ್ರಕ್ರಿಯೆಯನ್ನು ಆಧರಿಸಿದೆ. ೭೧೯ ಜಿಲ್ಲೆಗಳಲ್ಲಿ ೫೭,೦೦೦ ಕ್ಕೂ ಹೆಚ್ಚು ಭಾಗವಹಿಸಲಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ನಿನ್ನೆಯಷ್ಟೆ ದೆಹಲಿಯಲ್ಲಿ ಕೊವೀಡ್ ಲಸಿಕೆ ನೀಡಲು ಡ್ರೈ ರನ್ ತಾಲೀಮು ಪರಿಶೀಲಿಸಿದ ಸಚಿವರು, ನಾಲ್ಕು ರಾಜ್ಯಗಳಲ್ಲಿ ಒಣ ಓಟಕ್ಕೆ ಲಸಿಕೆ ಹಾಕುವ ಬಗ್ಗೆ ಮಾರ್ಗಸೂಚಿಯಲ್ಲಿ ಮಾಹಿತಿ ಪಡೆಯಲಾಗಿದ್ದು, ಹೊಸ ಮಾರ್ಗಸೂಚಿಗಳ ಪ್ರಕಾರ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಡ್ರೈ ರನ್ ನಡೆಸಲಾಗುತ್ತಿದೆ. ಲಸಿಕೆ ಯನ್ನು ನೀಡುವುದಬಿಟ್ಟು, ಡ್ರಿಲ್ ಸಮಯದಲ್ಲಿ ಎಲ್ಲಾ ವಿಧಾನಗಳನ್ನು ಅನುಸರಿಸಲಾಗುತ್ತಿದೆ ಎಂದರು.
ಕೊರೊನಾ ವೈರಸ್ ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಆದ್ಯತೆಯಾಗಿದೆ ಎಂದಿರುವ ಅವರು,ವದಂತಿಗಳಿಗೆ ಕಿವಿಗೊಡಬೇಡಿ ಎಂದು ಜನರಲ್ಲಿ ಮನವಿ ಮಾಡಿದರು.