ಬೂತ್ ಮಟ್ಟದಲ್ಲಿ ಪಕ್ಷದ ಸಂಘಟನೆ ಬಲಗೊಳಿಸಿ: ಡಾ.ಸಿದ್ದು ಪಾಟೀಲ

(ಸಂಜೆವಾಣಿ ವಾರ್ತೆ)
ಹುಮನಾಬಾದ :ಜ.9:ದೇಶದ ಯುವ ಜನತೆ ದೇಶದ ಬಹುಮುಖ್ಯ ಆಧಾರ ಸ್ತಂಭವಿದ್ದತೆ ಯುವ ಜನತೆ ಜನಪರ ಆಡಳಿತಕ್ಕೆ ಮನ್ನಣೆ ನೀಡುತಿದ್ದಾರೆ. ದೇಶ ಸುರಕ್ಷಿತ ಆಡಳಿತ ವ್ಯವಸ್ಥೆ ಕೈಯಲಿದೆ ನಾವು ನೀವೆಲ್ಲ ಸೇರಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಒಗ್ಗಟಾಗಿ ಶ್ರಮಿಸಿ ಭಾರತೀಯ ಜನತಾ ಪಕ್ಷವನ್ನು ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸಬೇಕಾಗಿದೆ. ಬೂತ್ ಮಟ್ಟದಲ್ಲಿ ಪಕ್ಷದ ಸಂಘಟನೆಯನ್ನುಬಲಗೊಳಿಸೋಣ. ಎಂದು ಕ್ಷೇತ್ರದ ಬಿಜೆಪಿ ಮುಖಂಡರಾದ ಡಾ. ಸಿದ್ದು ಪಾಟೀಲ ಮತ ಕ್ಷೇತ್ರದ ಕುಡಂಬಲ ಗ್ರಾಮದಲ್ಲಿ ಭಾರತ ಜನತಾ ಪಕ್ಷದ ನೂತನ ಪಕ್ಷದ ಕಛೇರಿ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಶ್ರೀ ಸೋಮನಾಥ ಪಾಟೀಲ ಹುಡಗಿ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಜಿ ರವರ ಕೈ ಬಲಪಡಿಸೋಣ ರಾಜ್ಯದಲ್ಲಿ ಮತ್ತೊಮ್ಮೆ ಭಾರತೀಯ ಜನತಾ ಪಕ್ಷದ ವಿಜಯ ಪತಾಕೆ ಹಾರಿಸಲು ಸಜ್ಜಾಗುವಂತೆ ಕಾರ್ಯಕರ್ತರಿಗೆ ತಿಳಿಸಿದರು.
ಮಂಡಲ ಅಧ್ಯಕ್ಷರಾದ ಪ್ರಭಾಕರ ನಾಗರಾಳೆ, ಮಂಡಲ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಭಂಡಾರಿ, ಬಿ.ಎಸ್.ಎಸ್.ಕೆ ಕಾರ್ಖಾನೆ ಸದಸ್ಯರು ಪಕ್ಷದ ಮುಖಂಡರಾದ ಮಲ್ಲಿಕಾರ್ಜುನ ಪಾಟೀಲ, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷರಾದ ಶ್ರೀ ಭದ್ರೇಶ ಪಾಟೀಲ, ಸಂತೋಷ ಎನ್. ಪಾಟೀಲ, ರೇವಣಪ್ಪಾ ಹೂಗಾರ, ಮಾಜಿ ತಾಲ್ಲೂಕ ಪಂಚಾಯತ ಅಧ್ಯಕ್ಷರು ಬೀರಪ್ಪಾ ಮಾತಾರ್ಂಡ , ಮಾಜಿ ತಾಲ್ಲೂಕಾ ಪಂಚಾಯತ್ ಸದಸ್ಯರು ಸಿರಾಜ ಬಂಡಾಗಿ, ಮುಕುಂದ ಸಂಗೋಳಗಿ, ಶರಣ ದೀಪಕ, ಸಂಗಪ್ಪಾ ಕೋಟಗಿ, ದಿಲೀಪಕುಮಾರ ಪಾಟೀಲ, ಕೃಷ್ಣಕುಮಾರ ಹಣಕುಣಿ, ವೀರಣ್ಣಾ ಭಂಡಾರಿ, ವೀರಶೆಟ್ಟಿ ದೇಶಮುಖ, ಪಪ್ಪು ದಾವಿ, ಗಿರೀಶ ತುಂಬಾ, ಶ್ರಿನಾಥ ದೇವಣಿ, ನಾಗಭೂಷಣ ಸಂಗಮ್ ಮುಂತಾದ ಪಕ್ಷದ ಮುಂಖಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.