ಬೂಕನಕೆರೆ ಗ್ರಾಮದಲ್ಲಿ ಬಿಜೆಪಿ ಪದಾಧಿಕಾರಿಗಳ ನೇಮಕಾತಿ ಸಭೆ

ಕೆ.ಆರ್.ಪೇಟೆ.ನ.04: ಭಾರತೀಯ ಜನತಾ ಪಕ್ಷವು ದಿನೆ ದಿನೆ ತಾಲ್ಲೂಕಿನಲ್ಲಿ ಸುಭದ್ರ ನೆಲೆ ಕಂಡುಕೊಳ್ಳುತ್ತಿದ್ದು ಗ್ರಾಮ ಮಟ್ಟಕ್ಕೂ ವಿಸ್ತರಿಸಿಕೊಂಡಿದೆ ಅದರಂತೆ ಮುಂಬರುವ ಗ್ರಾಮ ಪಂಚಾಯತಿ ಚುನಾವಣೆಯ ಹಿತದೃಷ್ಟಿಯಿಂದ ವಿವಿಧ ವಿಭಾಗಗಳ ಪದಾಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ.
ಇಂದು ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಬಿಜೆಪಿ ಪದಾಧಿಕಾರಿಗಳ ನೇಮಕಾತಿ ಸಭೆ ಏರ್ಪಡಿಸಲಾಗಿತ್ತು ಈ ಸಂದರ್ಭದಲ್ಲಿ ಬೂಕನಕೆರೆ ಹೋಬಳಿಯ ಒಬಿಸಿ ಅಧ್ಯಕ್ಷರನ್ನಾಗಿ ಕುರುಬರಬಸ್ತಿ ಗ್ರಾಮದ ಯುವ ಮುಖಂಡ ಬಿ.ಎಂ.ಮಂಜುನಾಥ್ ಅವರನ್ನು ನೇಮಕ ಮಾಡಲಾಯಿತು.
ತಾಲ್ಲೂಕು ಒಬಿಸಿ ಅಧ್ಯಕ್ಷರಾದ ಸಾರಂಗಿ ನಾಗರಾಜು ನೇತೃತ್ವದಲ್ಲಿ ಇಂದು ಬೂಕನಕೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಜುನಾಥ್ ಅವರಿಗೆ ನೇಮಕಾತಿ ಪತ್ರ ನೀಡಿ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು.
ನಂತರ ಮಾತನಾಡಿ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರು ಶಿರಾದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಪಣತೊಟ್ಟು ಕಾರ್ಯಕರ್ತರೊಂದಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ ಅವರ ಪರಿಶ್ರಮಕ್ಕೆ ತಕ್ಕ ಗೆಲುವಿನ ಯಶಸ್ಸು ದೊರೆಯಲಿ ಮತ್ತು ಇದೇ ನವೆಂಬರ್ 5 ನೇ ತಾರೀಖು ಗುರುವಾರ ಅವರ ಹುಟ್ಟುಹಬ್ಬ ಇರುವುದರಿಂದ ಅವರ ಮನೆ ದೇವರಾದ ಬೂಕನಕೆರೆಯ ಗೋಗಲಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ ಆದ್ದರಿಂದ ಪಕ್ಷದ ಎಲ್ಲಾ ಮುಖಂಡರು ಕಾರ್ಯಕರ್ತರು ಹಾಗು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಯಡಿಯೂರಪ್ಪ ಬಳಗದ ಜಿಲ್ಲಾಧ್ಯಕ್ಷ ಬಿ.ಕೆ.ಮಧುಸೂದನ್, ವಿಜಯೇಂದ್ರ ಬಳಗದ ಅಧ್ಯಕ್ಷ ಬಿ.ವೈ.ಚಂದ್ರು, ಲಕ್ಷ್ಮೀಶ, ಸಚಿನ್, ರವಿ,ಪ್ರೀತಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು..