ಅಥಣಿ :ಜೂ.4: ಪಟ್ಟಣದಲ್ಲಿ ಹಾಗೂ ತಾಲೂಕಿನಾದ್ಯಂತ ಬುಲೇಟ್ ಮೋಟರ್ ಸೈಕಲ್ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಅಥಣಿ ಪೆÇೀಲಿಸರು ಯಶಸ್ವಿಯಾಗಿದ್ದು, ಆರೋಪಿಯನ್ನು ಪೆÇಲೀಸರು ಬಂಧಿಸಿ ಆತನಿಂದ 5 ಲಕ್ಷ ಮೌಲ್ಯದ 3 ಬುಲೆಟ್ ವಶಪಡಿಸಿಕೊಂಡಿದ್ದಾರೆ.
ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚುವ ಸಲುವಾಗಿ ಬೆಳಗಾವಿ ಜಿಲ್ಲಾ ಪೆÇಲೀಸ ಅಧೀಕ್ಷಕರಾದ ಡಾ, ಸಂಜೀವ ಪಾಟೀಲ ಹಾಗೂ ಹೆಚ್ಚುವರಿ ಪೆÇಲೀಸ ಅಧಿಕ್ಷಕರಾದ ಎಮ್ ವೇಣುಗೋಪಾಲ, ಅಥಣಿ ಡಿವೈಎಸ್ಪಿ ಶ್ರೀಪಾಲ ಜಲ್ದೆ, ಮತ್ತು ಅಥಣಿ ಸಿಪಿಐ ರವೀಂದ್ರ ನಾಯ್ಕೋಡಿ ಇವರ ಮಾರ್ಗದರ್ಶನದಲ್ಲಿ ಪಿಎಸಐಗಳಾದ ( ಕಾ & ಸು) ಶಿವಶಂಕರ ಮುಕರಿ, ಎಫ್ ಎಸ್ ಇಂಡಿಕರ, ಚಂದ್ರಶೇಖರ ಸಾಗನೂರ ಹಾಗೂ ಸಿಬ್ಬಂದಿಗಳಾದ ವಿ ಜಿ ಆರೇರ, ಎಎಸ್‍ಐ, ಜಮೀರ ಢಾಂಗೆ, ಶ್ರೀದರ, ಬಾಂಗಿ ಎಮ್ ಎ ಪಾಟೀಲ, ಪಿ ಬಿ ನಾಯಿಕ ವಿನೋದ ಠಕ್ಕನ್ನವರ ಟೆಕ್ನಿಕಲ್, ಸೇಲ್ ಬೆಳಗಾವಿ ಇವರನ್ನೊಳಗೊಂಡ ತಂಡ ಭಾಗಿಯಾಗಿತ್ತು. ಅಥಣಿ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ಅಥಣಿ ಪೆÇಲೀಸ್ ಠಾಣೆರವರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು
ಸದರಿ ತಂಡವು ಇದೇ ದಿ, 03 ರಂದು ಆರೋಪಿತನನ್ನು ದಸ್ತಗಿರಿ ಮಾಡಿ ಆತನಿಂದ ಒಟ್ಟು ಸುಮಾರು ರೂ.5,00000/- ಕಿಮ್ಮತ್ತಿನ 03 ಬುಲೇಟ -ಮೋಟರ್ ಸೈಕಲ್‍ಗಳನ್ನು ಜಪ್ತ ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸದರಿ ತನಿಖಾ ತಂಡದ ಕಾರ್ಯವನ್ನು ಶ್ಲಾಘಿಸಿ ಆರಕ್ಷಕ ಅಧೀಕ್ಷಕರು ಬೆಳಗಾವಿರವರು ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರ ನೀಡಿದ್ದಾರೆ