ಬುರ್ಜ್ ಖಲೀಫಾ ವೀಕ್ಷಿಸಿದ ಹನ್ಸಿಕಾ

ಹೈದರಾಬಾದ್, ಅ.೨೭-ಹನ್ಸಿಕಾ ಮೋಟ್ವಾನಿ ಬುರ್ಜ್ ಖಲೀಫಾ ವೀಕ್ಷಿಸಿ ಖುಷಿಪಟ್ಟಿದ್ದಾರೆ.ಅವರ ಈ ಫೋಟೋಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ.
ಹನ್ಸಿಕಾ ತೆಲುಗು ಚಿತ್ರರಂಗದಲ್ಲಿ ಟಾಪ್ ಹೀರೋಯಿನ್. ಮೊದಲ ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದಂತೆ ಹಲವು ಸಿನಿಮಾ ಅವಕಾಶಗಳು ಅರಸಿ ಬಂದವು. ಸದ್ಯ ಈ ನಟಿಗೆ ತೆಲುಗಿನಲ್ಲಿ ಅವಕಾಶಗಳು ಕಡಿಮೆಯಾಗಿವೆ.
ಇತ್ತೀಚೆಗೆ ದುಬೈನ ಬುರ್ಜ್ ಖಲೀಫಾದಲ್ಲಿ ಕ್ಲಿಕ್ಕಿಸಿದ ಕೆಲವು ಫೋಟೋಗಳನ್ನು ಹನ್ಸಿಕಾ ಹಂಚಿಕೊಂಡಿದ್ದಾರೆ. ಇದೀಗ ಆ ಫೋಟೋಗಳು ವೈರಲ್ ಆಗಿವೆ.
ಹನ್ಸಿಕಾ ಎಂಬ ಹೆಸರು ತಕ್ಷಣವೇ ಸೌತ್ ನಟಿ ಸೌಂದರ್ಯ ರಾಶಿ ಕಣ್ಣ ಮುಂದೆ ಬರುತ್ತದೆ. ಹನ್ಸಿಕಾ ತಮ್ಮ ಅಭಿನಯ ಮತ್ತು ಸೌಂದರ್ಯದಿಂದ ಚಿತ್ರರಂಗದಲ್ಲಿ ಖ್ಯಾತಿ ಹೊಂದಿದ್ದಾರೆ .ಅವರು ಈಗ ವೈವಾಹಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ.
ಮತ್ತೊಂದೆಡೆ, ಈ ನಟಿ ಕಳೆದ ವರ್ಷ ಸಿನಿಮಾದಲ್ಲಿ ನಟಿಸುತ್ತಲೇ ಮದುವೆಯಾದರು. ಈಗ ಪತಿಯೊಂದಿಗೆ ಆರಾಮವಾಗಿ. ಜೀವನ ಸಾಗಿಸುತ್ತಿದ್ದಾರೆ.
ತೆಲುಗಿನಲ್ಲಿ ಈ ನಟಿಗೆ ಸ್ಟಾರ್ ಹೀರೋಗಳ ಜೊತೆ ಸರಿಯಾದ ಅವಕಾಶಗಳು ಸಿಗಲಿಲ್ಲ. ಅಲ್ಲು ಅರ್ಜುನ್ ಜೊತೆಗಿನ ಸಿನಿಮಾದ ನಂತರ ಜ್ಯೂನಿಯರ್ ಎನ್ ಟಿಆರ್ ಜೊತೆ ಬಿಟ್ಟರೆ ದೊಡ್ಡ ನಾಯಕರ ಜೊತೆ ನಟಿಸಿರಲಿಲ್ಲ.
ಆ ನಂತರ ಹನ್ಸಿಕಾ ವೃತ್ತಿ ಜೀವನಕ್ಕೆ ಬ್ರೇಕ್ ಬಿದ್ದಿತ್ತು. ಇದೀಗ ಈ ನಟಿ ತಮಿಳಿನಲ್ಲೂ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ನಟಿ ತಮಿಳಿನಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ.
ಟಾಲಿವುಡ್ ನಾಯಕಿ ಹನ್ಸಿಕಾ ಮೋಟ್ವಾನಿ ಕಳೆದ ವರ್ಷ (೨೦೨೨) ಡಿಸೆಂಬರ್ ೪ ರಂದು ವಿವಾಹವಾದರು. ಸೊಹೈಲ್ ಜೊತೆಗಿನ ಮದುವೆ ಅದ್ಧೂರಿಯಾಗಿತ್ತು. ಸಾಂಪ್ರದಾಯಿಕ ವಿವಾಹ ಸಮಾರಂಭದಲ್ಲಿ ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಿದ್ದರು.