
ಲಕ್ನೋ, ಜ.೧೯-ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿರುವ ಕಾಲೇಜಿನಲ್ಲಿ ಬುರ್ಖಾ ಧರಿಸಿದ್ದಕ್ಕಾಗಿ ಹಲವು ವಿದ್ಯಾರ್ಥಿನಿಯರಿಗೆ ಏಕಾಏಕಿ ಪ್ರವೇಶ ನಿರಾಕರಿಸಲಾಗಿರುವುದು ವರದಿಯಾಗಿದೆ.
ತಮ್ಮ ಕಾಲೇಜು ಬುರ್ಖಾ ಧರಿಸಿ ಕಾಲೇಜು ಕ್ಯಾಂಪಸ್ಗೆ ಪ್ರವೇಶಿಸಲು ಬಿಡುತ್ತಿಲ್ಲ ಮತ್ತು ಪ್ರವೇಶ ದ್ವಾರದಲ್ಲಿ ಅದನ್ನು ತೆಗೆಯುವಂತೆ ಒತ್ತಾಯಿಸುತ್ತಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಈ ವಿಷಯದ ಬಗ್ಗೆ ವಿದ್ಯಾರ್ಥಿಗಳು, ಸಮಾಜವಾದಿ ಛಾತ್ರ ಸಭಾ ಕಾರ್ಯಕರ್ತರು ಮತ್ತು ಕಾಲೇಜು ಪ್ರಾಧ್ಯಾಪಕರ ನಡುವೆ ಮಾತಿನ ಚಕಮಕಿ ನಡೆಯಿತು. ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕಾಲೇಜು ಪ್ರಾಧ್ಯಾಪಕ ಡಾ.ಎ.ಪಿ.ಸಿಂಗ್, ಇಲ್ಲಿ ವಿದ್ಯಾರ್ಥಿಗಳಿಗೆ ಡ್ರೆಸ್ ಕೋಡ್ ಅನ್ನು ಜಾರಿಗೆ ತಂದಿದ್ದಾರೆ ಮತ್ತು ಅದನ್ನು ಅನುಸರಿಸಲು ನಿರಾಕರಿಸುವ ಯಾರಾದರೂ ಕಾಲೇಜು ಕ್ಯಾಂಪಸ್ಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗುವುದು ಎಂದು ಹೇಳಿದರು.
ಇದಕ್ಕೆ ಸಮಾಜವಾದಿ ಛಾತ್ರ ಸಭಾದ ಸದಸ್ಯರು ಕಾಲೇಜಿಗೆ ಡ್ರೆಸ್ ಕೋಡ್ನಲ್ಲಿ ಬುರ್ಖಾವನ್ನು ಸೇರಿಸಲು ಮತ್ತು ಹುಡುಗಿಯರು ತಮ್ಮ ತರಗತಿಗಳಿಗೆ ಹಾಜರಾಗಲು ಅವಕಾಶ ಮಾಡಿಕೊಡುವಂತೆ ಮನವಿ ಸಲ್ಲಿಸಿದರು.