ಬುರುಜನಹಟ್ಟಿಯಲ್ಲಿ ಕಾಂಗ್ರೆಸ್ ಬೂತ್ ಮಟ್ಟದ ಸಭೆ

ಚಿತ್ರದುರ್ಗ.ಸೆ.೮; ನಗರದ ವಾರ್ಡ್ 7 ರ ಬುರುಜನಹಟ್ಟಿಯಲ್ಲಿ ಇರುವ ಸಮುದಾಯ ಭವನದಲ್ಲಿ ಚಿತ್ರದುರ್ಗ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಲಕ್ಷಿö್ಮಕಾಂತ್  ಅಧ್ಯಕ್ಷತೆಯಲ್ಲಿ ವಾರ್ಡ್ ಮತ್ತು ಬೂತ್ ಮಟ್ಟದ ಪ್ರತಿನಿಧಿಗಳ ಆಯ್ಕೆ ಸಭೆ ನಡೆಯಿತು.7ನೇ ವಾರ್ಡ್ ನಗರಸಭೆ ಸದಸ್ಯರು ಹಾಗೂ ಮಾಜಿ ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾದ ಕೆ.ಪಿಮೀನಾಕ್ಷಿ ರವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ 7ನೇ ವಾರ್ಡ್ ಅಧ್ಯಕ್ಷರ ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತುಈ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಂ. ಕೆ. ತಾಜ್‌ಪೀರ್, ಕಾರ್ಯಾಧ್ಯಕ್ಷರಾದ ಕೆ.ಎಂ.ಹಾಲಸ್ವಾಮಿ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಹನುಮಲಿ ಷಣ್ಮುಖಪ್ಪ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಗೀತಾನಂದಿನಿಗೌಡ, ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಕೆ.ಪಿ.ಸಂಪತ್ ಕುಮಾರ್, ಡಿ.ಎನ್. ಮೈಲಾರಪ್ಪ, ಬಿ.ಟಿ.ಜಗದೀಶ್, ಸೆಲ್ ಅಧ್ಯಕ್ಷರಾದ ಆರ್.ಅಶೋಕ್ ನಾಯ್ಡು, ಮೋಹನ್ ಪೂಜಾರಿ, ಮಾಜಿ ನಗರಸಭಾ ಅಧ್ಯಕ್ಷರಾದ ಮಂಜಪ್ಪ, ಕರಿಯಪ್ಪ ರವರ ಉಪಸ್ಥಿತಿಯಲ್ಲಿ ಈ ಸಭೆ ನಡೆಯಿತು, ಇನ್ನೂ ಹಲವಾರು ಸ್ಥಳೀಯ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.ಈ ಕಾರ್ಯಕ್ರಮಕ್ಕೆ ಮುಖ್ಯಸ್ಥರಿದ್ದ  ಹನುಮಲಿ ಷಣ್ಮುಖಪ್ಪ ರವರು ಮಾತನಾಡುತ್ತಾ, ರಾಷ್ಟç ಮಟ್ಟದಲ್ಲಿ ಏಐಸಿಸಿ, ರಾಜ್ಯಮಟ್ಟದಲ್ಲಿ ಕೆಪಿಸಿಸಿ, ಜಿಲ್ಲಾ ಮಟ್ಟದಲ್ಲಿ ಡಿಸಿಸಿ ಇದ್ದಂತೆಯೇ ಬೂತ್ ಮಟ್ಟದಲ್ಲೂ ಕಮಿಟಿಗಳನ್ನು ರಚನೆ ಮಾಡಿ ತಳಮಟ್ಟದ ಪಕ್ಷ ಸಂಘಟನೆ ಮಾಡಲು ತಮ್ಮಿಂದ ಮಾತ್ರ ಸಾಧ್ಯ ಎಂದು ಅಲ್ಲಿ ನೆರೆದಿದ್ದ ಅಸಂಖ್ಯಾತ ಜನರನ್ನುದ್ದೇಶಿಸಿ ಮಾತನಾಡಿದರು.