ಬುನಾದಿ ಶಿಕ್ಷಣ ಬಲಿಷ್ಠವಿದ್ದರೆ ಸಾಧನೆಗೈಯಲು ಸಾಧ್ಯ : ವಾಸವಿ

ಬೀದರ:ಮಾ.26: ಭಾರತದ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆ ಕೊನೆಯ ಪರೀಕ್ಷೆಯಲ್ಲಿ 36ನೇ ರ್ಯಾಂಕ್ (ಂIಖ-36) ಪಡೆದ ವಾಸವಿ ತಂದೆ ದತ್ತಾತ್ರಿ ದಾಚಿಪಲ್ಲಿ ಅವರು ಜಿಲ್ಲೆ ಹಾಗೂ ಗುರು ನಾನಕ ಶಾಲೆಗೆ ಕೀರ್ತಿ ತಂದಿದ್ದಾರೆ. ಯಾವುದೇ ಮಹತ್ತರ ಸಾಧನೆ ಮಾಡಬೇಕಾದರೆ ಅದರ ಅಡಿಪಾಯ ಶಕ್ತಿಶಾಲಿಯಾಗಿರಬೇಕು. ಅಂತಹ ಶಕ್ತಿಶಾಲಿ ಅಡಿಪಾಯ ನನಗೆ ಹಾಕಿಕೊಟ್ಟ ಇಲ್ಲಿಯ ಗುರು ನಾನಕ ಶಿಕ್ಷಣ ಸಂಸ್ಥೆಗೆ ನನ್ನ ಅಭಿನಂದನೆಗಳು ಎಂದು ಅವರು ಅಭಿಮಾನದಿಂದ ನುಡಿದರು.

ಗುರು ನಾನಕ ಪಬ್ಲಿಕ್ ಶಾಲೆಯಲ್ಲಿ ಅವರ ಅದ್ಭುತ ಸಾಧನೆಗೆ ಶಾಲೆಯ ಆಡಳಿತ ಮಂಡಳಿ ಸನ್ಮಾನ ಸಮಾರಂಭ ಏರ್ಪಡಿಸಿದ ಸಂದರ್ಭದಲ್ಲಿ ಸನ್ಮಾನಿತರಾಗಿ ಮಾತನಾಡುತ್ತ ಗುರು ನಾನಕ ಪಬ್ಲಿಕ್ ಶಾಲೆಯಲ್ಲಿ ನಾನು 2012ರ ಬ್ಯಾಚ್‍ನಲ್ಲಿ ವ್ಯಾಸಂಗ ಮಾಡಿದ್ದೇನೆ, ಸಿಬಿಎಸ್‍ಇಯಲ್ಲಿ 10ಸಿಜಿಪಿಎ ಅಂಕ ಪಡೆದಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಇಲ್ಲಿಯ ಶಿಕ್ಷಕ ವೃಂದದವರು ನನಗೆ ಕಲಿಸಿಕೊಟ್ಟ ಪಾಠ ಮತ್ತು ಶಿಸ್ತು ನನ್ನ ಇಂದಿನ ಸಾಧನೆಗೆ ಪ್ರಮುಖ ಕಾರಣವಾಗಿದೆ. ಇಲ್ಲಿಯ ಶಿಕ್ಷಕರು ಮಕ್ಕಳಿಗೆ ಕಲಿಸಿಕೊಟ್ಟ ಪ್ರಾಮಾಣಿಕತೆ, ಓದಿನ ಗುಟ್ಟು ಮತ್ತು ಅಧ್ಯಯನಶೀಲತೆಗಳು ಮಕ್ಕಳಿಗೆ ಯಾವಾಗಲು ಎತ್ತರಕ್ಕೆ ಕೊಂಡೊಯ್ಯುವಂತವುಗಳಾಗಿವೆ. ಹೀಗಾಗಿ ಇಲ್ಲಿಯ ಬುನಾದಿ ಶಿಕ್ಷಣ ಅತ್ಯಂತ ಗÀಟ್ಟಿಯಾಗಿದ್ದು, ಇದುವೆ ನನಗೆ ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಇದನ್ನು ನಾನು ಮರೆಯುವುದಿಲ್ಲ ಎಂದು ಹೇಳಿದರು.

ಕುಮಾರಿ ವಾಸವಿ ಅವರ ದತ್ತಾತ್ರಿ ದಾಚಿಪಲ್ಲೆ ಅವರು ಸಹ ಮಾತನಾಡುತ್ತ ಗುರು ನಾನಕ ಪಬ್ಲಿಕ್ ಶಾಲೆ ಮಕ್ಕಳಿಗೆ ಅಮೂಲ್ಯವಾದ ಶಿಕ್ಷಣ ನೀಡುತ್ತ ಶಿಕ್ಷಣದ ತಳಪಾಯ ಬಹಳಷ್ಟು ಗಟ್ಟಿಗೊಳಿಸಿದ್ದರಿಂದ ತಮ್ಮ ಮಗಳು ವಾಸವಿ ಈ ಸ್ಥಾನಗಳಿಸಲು ಸಾಧ್ಯವಾಯಿತು ಎಂದು ಗುರು ನಾನಕ ಪಬ್ಲಿಕ್ ಶಾಲೆಯ ಸೇವೆಯನ್ನು ಕೊಂಡಾಡಿದ್ದರು.

ಕುಮಾರಿ ವಾಸವಿ ಗುರು ನಾನಕ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿ 36ನೇ ರ್ಯಾಂಕ್ ಪಡೆಯುವ ಮೂಲಕÀ ನಮ್ಮ ಸಂಸ್ಥೆಗೆ ಕೀರ್ತಿ ತಂದಿದ್ದಕ್ಕಾಗಿ ನಮಗೆ ಅತ್ಯಂತ ಸಂತೋಷ ತಂದಿದೆ. ಅದಕ್ಕಾಗಿ ಇಂತಹ ಹೆಮ್ಮೆಯ ಪುತ್ರಿಯನ್ನು ಈ ಸಂದರ್ಭದಲ್ಲಿ ಸನ್ಮಾನಿಸಲು ನಮಗೆ ಹೆಮ್ಮೆಯನಿಸುತ್ತದೆ. ಮತ್ತು ಇವರ ಪಾಲಕರಿಗೂ ಸಹ ಅಭಿನಂದಿಸುತ್ತೇನೆ. ಇಂತಹ ಸಾಧನೆಗೈದ ಮಕ್ಕಳನ್ನು ನಾಡಿಗೆ ನೀಡುತ್ತ ಬರುತ್ತಿರುವ ನಮ್ಮ ಶಾಲೆಯ ಶಿಕ್ಷಕರ ವೃಂದಕ್ಕೂ ಕೂಡಾ ಈ ಸಂದರ್ಭದಲ್ಲಿ ನಾನು ಅಭಿನಂದಿಸುವುದಾಗಿ ಶಾಲೆಯ ಉಪಾಧ್ಯಕ್ಷೆ ಶ್ರೀಮತಿ ರೇಷ್ಮಾ ಕೌರ ನುಡಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಶ್ರೀ ಎನ್.ರಾಜು, ರೆಕ್ಟರ್ ಆದ ಶ್ರೀಮತಿ ಪವನಾ ಪ್ರೀಯಾ ಮತ್ತು ಮುಖೋಪಾಧ್ಯಯರಾದ ಶ್ರೀಮತಿ ಆರೀಪ್ ಹಾದಿ ಉಪಸ್ಥಿತರಿದ್ದರು.