ಬುಧವಾರ ನಡೆದ ಮತ ಎಣಿಕೆ ಪ್ರಕ್ರಿಯೆಯ ಅಂತಿಮ ಫಲಿತಾಂಶ

ಮಂಗಳೂರು, ಜ.೧- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿಸೆಂಬರ್ ೩೦ ರಂದು ಒಟ್ಟು ೨೨೦ ಗ್ರಾಮ ಪಂಚಾಯತ್‌ಗಳ ೩,೨೨೨ ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆಯು ಜಿಲ್ಲೆಯ ೭ ಕೇಂದ್ರಗಳಲ್ಲಿ ನಡೆದಿದ್ದು, ಎಣಿಕೆ ಪ್ರಕ್ರಿಯೆ ಬುಧವಾರ ತಡರಾತ್ರಿವರೆಗೆ ಕೆಲವು ತಾಲೂಕಿನಲ್ಲಿ ನಡೆದರೆ ಕೆಲವು ತಾಲೂಕುಗಳಲ್ಲಿ ಮುಂಜಾನೆಯವರೆಗೆ ನಡೆದಿದೆ ನಂತರದ ಫಲಿತಾಂಶದ ವಿವಿರ ಇಂತಿವೆ.
ಮಂಗಳೂರು ತಾಲೂಕಿನ ೩೭ ಗ್ರಾಮ ಪಂಚಾಯತ್‌ಗಳ ೬೫೧ ಸ್ಥಾನಗಳಿಗೆ ೨೮ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ೬೨೩ ಸದಸ್ಯರನ್ನು ಮತದಾನದ ಮೂಲಕ ಆಯ್ಕೆ ಮಾಡಲಾಗಿದೆ. ಗ್ರಾಮ ಪಂಚಾಯಿತಿಯ ಒಟ್ಟು ೬೫೧ ಸದಸ್ಯ ಸ್ಥಾನಗಳಲ್ಲಿ ೩೧೫ ಸಾಮಾನ್ಯ, ೩೩೬ ಮಹಿಳಾ ಸ್ಥಾನಗಳಿದ್ದು, ೪೨ ಅನುಸೂಚಿತ ಜಾತಿ ಸದಸ್ಯ ಸ್ಥಾನಗಳಲ್ಲಿ ಸಾಮಾನ್ಯ ೫, ಮಹಿಳೆ ೩೭, ಮತ್ತು ೩೭ ಅನುಸೂಚಿತ ಪಂಗಡ ಸದಸ್ಯ ಸ್ಥಾನಗಳಲ್ಲಿ ೩೭ ಮಹಿಳೆಯರು, ೧೬೩ ಹಿಂದುಳಿದ ಅ. ವರ್ಗ ಸದಸ್ಯ ಸ್ಥಾನಗಳಲ್ಲಿ ೭೩ ಸಾಮಾನ್ಯ, ೯೦ ಮಹಿಳೆ, ೪೫ ಹಿಂದುಳಿದ ಬ ವರ್ಗ ಸದಸ್ಯ ಸ್ಥಾನಗಳಲ್ಲಿ ೨೨ ಸಾಮಾನ್ಯ ೨೩ ಮಹಿಳೆ ಹಾಗೂ ೩೬೪ ಸಾಮಾನ್ಯ ವರ್ಗದ ಸದಸ್ಯ ಸ್ಥಾನಗಳಲ್ಲಿ ೨೧೫ ಸಾಮಾನ್ಯ, ೧೪೯ ಮಹಿಳೆಯರು ಆಯ್ಕೆಯಾಗಿರುತ್ತಾರೆ.
ಮೂಡುಬಿದಿರೆ ತಾಲೂಕಿನ ೧೨ ಗ್ರಾಮ ಪಂಚಾಯತ್‌ಗಳ, ೧೯೩ ಸ್ಥಾನಗಳಿಗೆ ೭ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ೧೮೬ ಸದಸ್ಯರನ್ನು ಮತದಾನದ ಮೂಲಕ ಆಯ್ಕೆ ಮಾಡಲಾಗಿದೆ. ಗ್ರಾಮ ಪಂಚಾಯಿತಿಯ ಒಟ್ಟು ೧೯೩ ಸದಸ್ಯ ಸ್ಥಾನಗಳಲ್ಲಿ ೯೪ ಸಾಮಾನ್ಯ, ೯೯ ಮಹಿಳಾ ಸ್ಥಾನಗಳಿದ್ದು, ೨೦ ಅನುಸೂಚಿತ ಜಾತಿ ಸದಸ್ಯ ಸ್ಥಾನಗಳಲ್ಲಿ ಸಾಮಾನ್ಯ ೭, ಮಹಿಳೆ ೧೩, ಮತ್ತು ೧೪ ಅನುಸೂಚಿತ ಪಂಗಡ ಸದಸ್ಯ ಸ್ಥಾನಗಳಲ್ಲಿ ೨ ಸಾಮಾನ್ಯ, ೧೨ ಮಹಿಳೆ, ೪೬ ಹಿಂದುಳಿದ ಅ. ವರ್ಗಗಳಲ್ಲಿ ೨೧ ಸಾಮಾನ್ಯ, ೨೫ ಮಹಿಳೆ, ೧೧ ಹಿಂದುಳಿದ ಬ ವರ್ಗ ಸದಸ್ಯ ಸ್ಥಾನಗಳಲ್ಲಿ ೪ ಸಾಮಾನ್ಯ ೭ ಮಹಿಳೆ ಹಾಗೂ ೧೦೨ ಸಾಮಾನ್ಯ ವರ್ಗದ ಸದಸ್ಯ ಸ್ಥಾನಗಳಲ್ಲಿ ೬೦ ಸಾಮಾನ್ಯ, ೪೨ ಮಹಿಳೆಯರು ಆಯ್ಕೆಯಾಗಿರುತ್ತಾರೆ
ಬಂಟ್ವಾಳ ತಾಲೂಕಿನ ೫೭ ಗ್ರಾಮ ಪಂಚಾಯತ್‌ಗಳಲ್ಲಿ, ೮೩೭ ಸ್ಥಾನಗಳಿಗೆ ೧೫ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ೮೨೨ ಸದಸ್ಯರನ್ನು ಮತದಾನದ ಮೂಲಕ ಆಯ್ಕೆ ಮಾಡಲಾಗಿದೆ. ಗ್ರಾಮ ಪಂಚಾಯಿತಿಯ ಒಟ್ಟು ೮೩೭ ಸದಸ್ಯ ಸ್ಥಾನಗಳಲ್ಲಿ ೪೦೪ ಸಾಮಾನ್ಯ, ೪೩೩ ಮಹಿಳಾ ಸ್ಥಾನಗಳಿದ್ದು, ೫೯ ಅನುಸೂಚಿತ ಜಾತಿ ಸದಸ್ಯ ಸ್ಥಾನಗಳಲ್ಲಿ ಸಾಮಾನ್ಯ ೨, ಮಹಿಳೆ ೫೭, ಮತ್ತು ೭೨ ಅನುಸೂಚಿತ ಪಂಗಡ ಸದಸ್ಯ ಸ್ಥಾನಗಳಲ್ಲಿ ೧೨ ಸಾಮಾನ್ಯ, ೬೦ ಮಹಿಳೆ, ೨೦೩ ಹಿಂದುಳಿದ ಅ. ವರ್ಗಗಳಲ್ಲಿ ೮೫ ಸಾಮಾನ್ಯ , ೧೧೮ ಮಹಿಳೆ, ೫೩ ಹಿಂದುಳಿದ ಬ ವರ್ಗ ಸದಸ್ಯ ಸ್ಥಾನಗಳಲ್ಲಿ ೨೭ ಸಾಮಾನ್ಯ ೨೬ ಮಹಿಳೆ ಹಾಗೂ ೪೫೦ ಸಾಮಾನ್ಯ ವರ್ಗದ ಸದಸ್ಯ ಸ್ಥಾನಗಳಲ್ಲಿ ೨೭೮ ಸಾಮಾನ್ಯ, ೧೭೨ ಮಹಿಳೆಯರು ಆಯ್ಕೆಯಾಗಿರುತ್ತಾರೆ.
ಬೆಳ್ತಂಗಡಿ ತಾಲೂಕಿನ ೪೬ ಗ್ರಾಮ ಪಂಚಾಯತ್‌ಗಳಲ್ಲಿ, ೬೩೧ ಸ್ಥಾನಗಳಿಗೆ ೭ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ೬೨೪ ಸದಸ್ಯರನ್ನು ಮತದಾನದ ಮೂಲಕ ಆಯ್ಕೆ ಮಾಡಲಾಗಿದೆ. ಗ್ರಾಮ ಪಂಚಾಯಿತಿಯ ಒಟ್ಟು ೬೩೧ ಸದಸ್ಯ ಸ್ಥಾನಗಳಲ್ಲಿ ೩೦೪ ಸಾಮಾನ್ಯ, ೩೨೭ ಮಹಿಳಾ ಸ್ಥಾನಗಳಿದ್ದು, ೬೪ ಅನುಸೂಚಿತ ಜಾತಿ ಸದಸ್ಯ ಸ್ಥಾನಗಳಲ್ಲಿ ಸಾಮಾನ್ಯ ೧೬, ಮಹಿಳೆ ೪೮, ಮತ್ತು ೫೪ ಅನುಸೂಚಿತ ಪಂಗಡ ಸದಸ್ಯ ಸ್ಥಾನಗಳಲ್ಲಿ ೭ ಸಾಮಾನ್ಯ, ೪೭ ಮಹಿಳೆ, ೧೪೩ ಹಿಂದುಳಿದ ಅ. ವರ್ಗಗಳಲ್ಲಿ ೫೬ ಸಾಮಾನ್ಯ , ೮೭ ಮಹಿಳೆ, ೩೬ ಹಿಂದುಳಿದ ಬ ವರ್ಗ ಸದಸ್ಯ ಸ್ಥಾನಗಳಲ್ಲಿ ೧೯ ಸಾಮಾನ್ಯ ೧೭ ಮಹಿಳೆ ಹಾಗೂ ೩೩೪ ಸಾಮಾನ್ಯ ವರ್ಗದ ಸದಸ್ಯ ಸ್ಥಾನಗಳಲ್ಲಿ ೨೦೬ ಸಾಮಾನ್ಯ, ೧೨೮ ಮಹಿಳೆಯರು ಆಯ್ಕೆಯಾಗಿರುತ್ತಾರೆ
ಪುತ್ತೂರು ತಾಲೂಕಿನ ೨೨ ಗ್ರಾಮ ಪಂಚಾಯತ್‌ಗಳಲ್ಲಿ, ೩೪೩. ಸ್ಥಾನಗಳಿಗೆ ೨೧ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ೩೨೨ ಸದಸ್ಯರನ್ನು ಮತದಾನದ ಮೂಲಕ ಆಯ್ಕೆ ಮಾಡಲಾಗಿದೆ. ಗ್ರಾಮ ಪಂಚಾಯಿತಿಯ ಒಟ್ಟು ೩೪೩ ಸದಸ್ಯ ಸ್ಥಾನಗಳಲ್ಲಿ ೧೬೭ ಸಾಮಾನ್ಯ, ೧೭೬ ಮಹಿಳಾ ಸ್ಥಾನಗಳಿದ್ದು, ೪೦ ಅನುಸೂಚಿತ ಜಾತಿ ಸದಸ್ಯ ಸ್ಥಾನಗಳಲ್ಲಿ ಸಾಮಾನ್ಯ ೧೩, ಮಹಿಳೆ ೨೭, ಮತ್ತು ೩೭ ಅನುಸೂಚಿತ ಪಂಗಡ ಸದಸ್ಯ ಸ್ಥಾನಗಳಲ್ಲಿ ೧೨ ಸಾಮಾನ್ಯ, ೨೫ ಮಹಿಳೆ, ೭೨ ಹಿಂದುಳಿದ ಅ. ವರ್ಗಗಳಲ್ಲಿ ೨೯ ಸಾಮಾನ್ಯ , ೪೩ ಮಹಿಳೆ, ೧೭ ಹಿಂದುಳಿದ ಬ ವರ್ಗ ಸದಸ್ಯ ಸ್ಥಾನಗಳಲ್ಲಿ ೧೦ ಸಾಮಾನ್ಯ ೭ ಮಹಿಳೆ ಹಾಗೂ ೧೭೭ ಸಾಮಾನ್ಯ ವರ್ಗದ ಸದಸ್ಯ ಸ್ಥಾನಗಳಲ್ಲಿ ೧೦೩ ಸಾಮಾನ್ಯ, ೭೪ ಮಹಿಳೆಯರು ಆಯ್ಕೆಯಾಗಿರುತ್ತಾರೆ
ಸುಳ್ಯ ತಾಲೂಕಿನ ೨೫ ಗ್ರಾಮ ಪಂಚಾಯತ್‌ಗಳಲ್ಲಿ, ೨೮೨ ಸ್ಥಾನಗಳಿಗೆ ೬ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ೨೭೬ ಸದಸ್ಯರನ್ನು ಮತದಾನದ ಮೂಲಕ ಆಯ್ಕೆ ಮಾಡಲಾಗಿದೆ. ಗ್ರಾಮ ಪಂಚಾಯಿತಿಯ ಒಟ್ಟು ೨೮೨ ಸದಸ್ಯ ಸ್ಥಾನಗಳಲ್ಲಿ ೧೩೪ ಸಾಮಾನ್ಯ, ೧೪೮ ಮಹಿಳಾ ಸ್ಥಾನಗಳಿದ್ದು, ೪೩ ಅನುಸೂಚಿತ ಜಾತಿ ಸದಸ್ಯ ಸ್ಥಾನಗಳಲ್ಲಿ ಸಾಮಾನ್ಯ ೧೪, ಮಹಿಳೆ ೨೯, ಮತ್ತು ೩೩ ಅನುಸೂಚಿತ ಪಂಗಡ ಸದಸ್ಯ ಸ್ಥಾನಗಳಲ್ಲಿ ೭ ಸಾಮಾನ್ಯ, ೨೬ ಮಹಿಳೆ, ೪೮ ಹಿಂದುಳಿದ ಅ. ವರ್ಗಗಳಲ್ಲಿ ೧೪ ಸಾಮಾನ್ಯ , ೩೪ ಮಹಿಳೆ, ೧೦ ಹಿಂದುಳಿದ ಬ ವರ್ಗ ಸದಸ್ಯ ಸ್ಥಾನಗಳಲ್ಲಿ ೯ ಸಾಮಾನ್ಯ ೧ ಮಹಿಳೆ ಹಾಗೂ ೧೪೮ ಸಾಮಾನ್ಯ ವರ್ಗದ ಸದಸ್ಯ ಸ್ಥಾನಗಳಲ್ಲಿ ೯೦ ಸಾಮಾನ್ಯ, ೫೮ ಮಹಿಳೆಯರು ಆಯ್ಕೆಯಾಗಿರುತ್ತಾರೆ.
ಕಡಬ ತಾಲೂಕಿನ ೨೧ ಗ್ರಾಮ ಪಂಚಾಯತ್‌ಗಳಲ್ಲಿ, ೨೮೫ ಸ್ಥಾನಗಳಿಗೆ ೭ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ೨೭೮ ಸದಸ್ಯರನ್ನು ಮತದಾನದ ಮೂಲಕ ಆಯ್ಕೆ ಮಾಡಲಾಗಿದೆ. ಗ್ರಾಮ ಪಂಚಾಯಿತಿಯ ಒಟ್ಟು ೨೮೫ ಸದಸ್ಯ ಸ್ಥಾನಗಳಲ್ಲಿ ೧೩೫ ಸಾಮಾನ್ಯ, ೧೫೦ ಮಹಿಳಾ ಸ್ಥಾನಗಳಿದ್ದು, ೩೬ ಅನುಸೂಚಿತ ಜಾತಿ ಸದಸ್ಯ ಸ್ಥಾನಗಳಲ್ಲಿ ಸಾಮಾನ್ಯ ೧೨, ಮಹಿಳೆ ೨೪, ಮತ್ತು ೨೧ ಅನುಸೂಚಿತ ಪಂಗಡ ಸದಸ್ಯ ಸ್ಥಾನಗಳಲ್ಲಿ ೨೧ ಮಹಿಳೆಯರು, ೬೩ ಹಿಂದುಳಿದ ಅ. ವರ್ಗಗಳಲ್ಲಿ ೨೮ ಸಾಮಾನ್ಯ , ೩೫ ಮಹಿಳೆ, ೧೪ ಹಿಂದುಳಿದ ಬ ವರ್ಗ ಸದಸ್ಯ ಸ್ಥಾನಗಳಲ್ಲಿ ೫ ಸಾಮಾನ್ಯ ೯ ಮಹಿಳೆ ಹಾಗೂ ೧೫೧ ಸಾಮಾನ್ಯ ವರ್ಗದ ಸದಸ್ಯ ಸ್ಥಾನಗಳಲ್ಲಿ ೯೦ ಸಾಮಾನ್ಯ, ೬೧ ಮಹಿಳೆಯರು ಆಯ್ಕೆಯಾಗಿರುತ್ತಾರೆ
ಜಿಲ್ಲೆಯಲ್ಲಿ ಅಂತಿಮ ಮತ ಎಣಿಕೆ ಪ್ರಕ್ರಿಯೆಯಲ್ಲಿ ೨೨೦ ಗ್ರಾಮ ಪಂಚಾಯತ್‌ಗಳ, ೩,೨೨೨ ಸ್ಥಾನಗಳಿಗೆ ೯೧ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ೩೧೩೧ ಸದಸ್ಯರನ್ನು ಮತದಾನದ ಮೂಲಕ ಆಯ್ಕೆ ಮಾಡಲಾಗಿದೆ. ಗ್ರಾಮ ಪಂಚಾಯಿತಿಯ ಒಟ್ಟು ೩,೨೨೨ ಸದಸ್ಯ ಸ್ಥಾನಗಳಲ್ಲಿ ೧,೫೫೩ ಸಾಮಾನ್ಯ, ೧,೬೬೯ ಮಹಿಳಾ ಸ್ಥಾನಗಳಿದ್ದು, ೩೦೪ ಅನುಸೂಚಿತ ಜಾತಿ ಸದಸ್ಯ ಸ್ಥಾನಗಳಲ್ಲಿ ಸಾಮಾನ್ಯ ೬೯, ಮಹಿಳೆ ೨೩೫, ಮತ್ತು ೨೬೮ ಅನುಸೂಚಿತ ಪಂಗಡ ಸದಸ್ಯ ಸ್ಥಾನಗಳಲ್ಲಿ ೪೦ ಸಾಮಾನ್ಯ, ೨೨೮ ಮಹಿಳೆ, ೭೩೮ ಹಿಂದುಳಿದ ಅ. ವರ್ಗಗಳಲ್ಲಿ ೩೦೬ ಸಾಮಾನ್ಯ , ೪೩೨ ಮಹಿಳೆ, ೧೮೬ ಹಿಂದುಳಿದ ಬ ವರ್ಗ ಸದಸ್ಯ ಸ್ಥಾನಗಳಲ್ಲಿ ೯೬ ಸಾಮಾನ್ಯ ೯೦ ಮಹಿಳೆ ಹಾಗೂ ೧,೭೨೬ ಸಾಮಾನ್ಯ ವರ್ಗದ ಸದಸ್ಯ ಸ್ಥಾನಗಳಲ್ಲಿ ೧,೦೪೨ ಸಾಮಾನ್ಯ, ೬೮೪ ಮಹಿಳೆಯರು ಆಯ್ಕೆಯಾಗಿದ್ದಾರೆ.