ಬುಧವಾರ ಕೊಟ್ಟೂರಿಗೆ ಪಂಚಮಸಾಲಿಗಳ ಕೃತಜ್ಞಾತ ಯಾತ್ರೆ

ಕೊಟ್ಟೂರು ಮಾ30: ಪಂಚಮಸಾಲಿ ಸಮುದಾಯ 2ಎ ಮೀಸಲಾತಿಗಾಗಿ ನಡೆಸಿದ ಪಾದಯಾತ್ರೆಗೆ ಸಹಕರಿಸಿದ ಶರಣಿಗೆ ಕೃತಜ್ಞತೆ ಸಲ್ಲಿಸಲು ಕೊಟ್ಟೂರು ಪಟ್ಟಣಕ್ಕೆ ಬುಧವಾರ ಸಂಜೆ 4ಗಂಟೆಗೆ ಕೃತಜ್ಞತಾ ಯಾತ್ರೆ ಜಗದ್ಗುರುಬಸವಜಯಮೃತ್ಯುಂಜಯಸ್ವಾಮೀಜಿ ಕೂಡಲಸಂಗಮಪೀಠ ನೇತೃತ್ವದಲ್ಲಿ ಆಗಮಿಸಲಿದೆ ಎಂದು ಪಂಚಮಸಾಲಿ ಸಮಾಜದ ತಾಲೂಕು ಘಟಕ ಅಧ್ಯಕ್ಷ ಎಂ.ಶಿವಣ್ಣ ಹೇಳಿದರು.ಪಟ್ಟಣದ ಪಂಚಮಸಾಲಿ ಭವನದಲ್ಲಿ ಶರಣುಶರಣರ್ಥಿ ಕಾರ್ಯಕ್ರಮ ನಡೆಯಲಿದೆ,ಈಗಾಗಲೇ ಯಾತ್ರೆ ಆರಂಭವಾಗಿದ್ದುತುಮಕೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಹಾವೇರಿ, ಗದಗ, ಬಳ್ಳಾರಿ, ಯಲಬುರ್ಗ, ಕೊಪ್ಪಳ, ರಾಯಚೂರು, ಯಾದಗಿರಿ ಮೂಲಕ ಏಪ್ರಿಲ್ 11ಕ್ಕೆ ಕೂಡಲ ಸಂಗಮ ತಲುಪಲಿದೆ ಎಂದರು.ಈ ಕಾರ್ಯಕ್ರಮದಲ್ಲಿ ವಿಜಯ ನಂದಕಶಪ್ಪ ನವರು ಸೇರಿದಂತೆ ಆನೇಕ ಗಣ್ಯರು ಆಗಮಿಸಲಿದ್ದಾರೆ ಎಂದರು ಈ ಸಂದರ್ಭದಲ್ಲಿ ಪರಂ ಜ್ಯೋತಿ ಗೌಡ್ರ, ನಂಜನಗೌಡ, ಮುದುಕಪ್ಪ, ಅಕ್ಕಿ ಚಂದ್ರಣ್ಣ, ಹುಲುಮನಿ ಮಲ್ಲೇಶಪ್ಪ, ಅಂಗಡಿ ಪಂಪಾಪತಿ, ನಿಂಬಳ ಗೇರಿ ಕಲ್ಲೇಶಪ್ಪ ಸೇರಿದಂತೆ ಆನೇಕರಿದ್ದರು.