
ಅಥಣಿ :ಜು.5: ಭಾರತೀಯ ಸಂಸ್ಕøತಿಯಲ್ಲಿ ಗುರು ಶಿಷ್ಯರ ಬಾಂಧವ್ಯಕ್ಕೆ ಪವಿತ್ರವಾದ ಸಂಬಂಧವಿದೆ. ತಂದೆ ತಾಯಿ ನಮಗೆ ಜನ್ಮ ನೀಡಿ ಪೆÇೀಷಣೆ ಮಾಡಿದರೆ, ಗುರುಗಳು ನಮಗೆ ಕಲಿಸಿದ ವಿದ್ಯೆ ಜೀವನದ ಸಂಸ್ಕೃತಿಗೆ ಭದ್ರ ಬುನಾದಿ ಇದ್ದಂತೆ ಎಂದು ಹಿರಿಯ ಯೋಗ ಶಿಕ್ಷಕ ಎ. ಬಿ ಪಾಟೀಲ ಹೇಳಿದರು.
ಅವರು ಅಥಣಿ ಪಟ್ಟಣದ ಕನಕ ನಗರದ ಬುದ್ಧ ವಿಹಾರ ಉದ್ಯಾನವನದಲ್ಲಿ ತಾಲೂಕಾ ಪತಂಜಲಿ ಯೋಗ ಸಮಿತಿ ವತಿಯಿಂದ ಆಯೋಜಿಸಲಾಗಿರುವ ಉಚಿತ ಯೋಗ ಶಿಬಿರ ಹಾಗೂ ಗುರು ಪೂರ್ಣಿಮಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಒಬ್ಬ ವ್ಯಕ್ತಿ ಶಕ್ತಿಯಾಗಿ ಬೆಳೆಯಬೇಕಾದರೆ ಆತನಿಗೆ ಗುರುವಿನ ಮಾರ್ಗದರ್ಶನ ಬಹಳ ಮುಖ್ಯ. ನಮಗೆ ಶಾಲೆಗಳಲ್ಲಿ ವಿದ್ಯೆ, ಬುದ್ಧಿ ಕಲಿಸಿದ ಶಿಕ್ಷಕರು ಗುರುಗಳು, ನಮ್ಮ ಬದುಕಿನಲ್ಲಿ ಸನ್ಮಾರ್ಗವನ್ನು ತೋರಿಸಿದವರು ಕೂಡ ಗುರುಗಳು ಎಂಬ ಭಾವನೆ ನಮ್ಮಲ್ಲಿರಬೇಕು. ಗುರುಗಳು ಹೇಳುವ ಮಾತನ್ನು ಏಕಾಗ್ರತೆ ಮತ್ತು ಶ್ರದ್ಧೆಯಿಂದ ಕಲಿತಾಗ ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳುವುದರ ಜೊತೆಗೆ ಸ್ಪಷ್ಟವಾದ ಗುರಿಯನ್ನು ಮುಟ್ಟಲು ಸಾಧ್ಯವಿದೆ ಎಂದು ಹೇಳಿದರು.
ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ ಎಸ್ ಕೆ ಹೊಳೆಪ್ಪನವರ ಮಾತನಾಡಿ ಪ್ರತಿಯೊಬ್ಬರ ಜೀವನದಲ್ಲಿ ಗುರುಗಳು ಮತ್ತು ಅವರ ಮಾರ್ಗದರ್ಶನ ಬೇಕೇ ಬೇಕು. ನಮ್ಮ ಜೀವನಕ್ಕೆ ಸನ್ಮಾರ್ಗವನ್ನು ತೋರಿಸಿದ ಗುರುಗಳಿಗೆ ನಮನ ಸಲ್ಲಿಸುವ ಮತ್ತು ಅವರ ಸೇವೆಯನ್ನ ಸ್ಮರಿಸುವ ಉದ್ದೇಶದಿಂದ ಗುರುಪೂರ್ಣಿಮೆಯ ಆಚರಿಸಲಾಗುತ್ತದೆ ಎಂದು ಹೇಳಿದರು.
ಯೋಗ ಶಿಕ್ಷಕ ಡಾ. ವಿನಾಯಕ ಚಿಂಚೋಳಿಮಠ ಮಾತನಾಡಿ ಯೋಗಮಯ ಜೀವನ ರೋಗ ಮುಕ್ತ ಜೀವನವಾಗಿದೆ. ಪ್ರತಿಯೊಬ್ಬರೂ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಸದೃಢತೆಯನ್ನು ಹೊಂದಲು ಪ್ರತಿದಿನ ಪ್ರಾಣಾಯಾಮ, ಧ್ಯಾನ ಮತ್ತು ಯೋಗವನ ರೂಡಿಸಿಕೊಳ್ಳಬೇಕು. ಪತಂಜಲಿ ಯೋಗ ಸಮಿತಿಯಿಂದ ಆಯೋಜಿಸಲಾಗಿರುವ ಉಚಿತ ಯೋಗ ಶಿಬಿರದ ಲಾಭವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಯೋಗ ಶಿಕ್ಷಕ ಶ್ರೀಶೈಲ ಪಾಟೀಲ ಬುದ್ಧ ವಿಹಾರ ಕಮಿಟಿ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನಂತರ ಶಿಬಿರಾರ್ಥಿಗಳಿಗೆ ಯೋಗಾಭ್ಯಾಸದ ಪ್ರಾತ್ಯಕ್ಷತೆ ಹೇಳಿಕೊಟ್ಟರು.
ಈ ವೇಳೆ ಬುದ್ಧ ವಿಹಾರ ಕಮಿಟಿಯ ಅಧ್ಯಕ್ಷ ಶಿವಾನಂದ ದೊಡ್ಡಮನಿ, ಬಾಹುಸಾಹೇಬ ದೊಡ್ಡಮನಿ, ಪರಶುರಾಮ ಚುಬಚಿ, ರಾಮಚಂದ್ರ ದೊಡ್ಡಮನಿ, ಸೋಮಲಿಂಗ ನಿಡೋಣಿ, ನ್ಯಾಯವಾದಿ ಎಂ.ಎಲ್. ಈಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.