ಬುದ್ಧ ಬಸವ ಅಂಬೇಡ್ಕರ ಅವರ ವಿಚಾರಧಾರೆಗಳು ನಮ್ಮೆಲ್ಲರಿಗೆ ದಾರಿದೀಪ: ಬಸವರಾಜ ಬಿಸನಕೊಪ್ಪ

ಅಥಣಿ: ಮಾ.28:ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದ ತಂಡ ನೀಡಿರುವ ಸಂವಿಧಾನ ಸದೃಢ ಭಾರತ ನಿರ್ಮಾಣಕ್ಕೆ ಸಹಕಾರಿಯಾಗಿದೆ. ಈ ಸಂವಿಧಾನದ ಮೂಲಕ ಸಮಾನತೆ, ಸರ್ವರಿಗೂ ಶಿಕ್ಷಣ ದೊರೆತಿದ್ದು, ಮೂಲಭೂತ ಹಕ್ಕುಗಳ ಜೊತೆ ಮೂಲಭೂತ ಕರ್ತವ್ಯಗಳ ಬಗ್ಗೆ ನಾವು ಗಮನ ಹರಿಸಬೇಕು. ಸಂವಿಧಾನದ ಧ್ಯೇಯೋದ್ದೇಶಗಳನ್ನು ಪಾಲಿಸುವತ್ತ ನಾವು ಹೆಚ್ಚು ಗಮನ ಹರಿಸಬೇಕು ಎಂದು ಉದ್ಯಮಿ ಹಾಗೂ ಅಥರ್ವ ಸಾಂಗ್ಲಿಕರ್ ಟ್ರಸ್ಟ್ ನ ಅಧ್ಯಕ್ಷ ಚಂದ್ರಕಾಂತ ಸಾಂಗ್ಲಿಕರ ಹೇಳಿದರು.

ಅವರು ಅಥಣಿ ಪಟ್ಟಣದ ಆದರ್ಶ ನಗರದಲ್ಲಿ ಅಥಣಿ ತಾಲೂಕಾ ದಲಿತ ಸಂಘರ್ಷ ಸಮಿತಿ ವತಿಯಿಂದ ಇತ್ತೀಚಿಗೆ ಬುದ್ಧ ಬಸವ ಅಂಬೇಡ್ಕರ್ ಕುರಿತು ಆಯೋಜಿಸಿದ್ದ ರಸಪ್ರಶ್ನೆ ಕಾರ್ಯಕ್ರಮದ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿವಿಧತೆಯಲ್ಲಿ ಏಕತೆಯನ್ನು ಪ್ರತಿಪಾದಿಸಿಕೊಂಡು ಬಂದಿರುವ ಏಕೈಕ ದೇಶ ಭಾರತವಾಗಿದ್ದು, ನಾವು ನಮ್ಮ ಹಕ್ಕುಗಳಿಗಾಗಿ ಹೋರಾಡುವಂತೆ ಸಂವಿಧಾನದ ಆಶಯ ಪಾಲಿಸಬೇಕು ನಮ್ಮ ಕರ್ತವ್ಯಗಳನ್ನು ಪಾಲಿಸಬೇಕು ಹೇಳಿದ ಅವರು ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಗುರುತಿಸುವುದರ ಜೊತೆಗೆ ಬುದ್ಧಬಸವ ಅಂಬೇಡ್ಕರ್ ಅವರಂತಹ ಮಹಾ ಮಾನವತಾವಾದಿಗಳ ಇತಿಹಾಸವನ್ನು. ಪರಿಚಯಿಸುವ ಕಾರ್ಯವನ್ನು ದಲಿತ ಸಂಘರ್ಷ ಸಮಿತಿ ಸಂಘಟಕರು ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಸವರಾಜ ಬಿಸನಕೊಪ್ಪ ಮಾತನಾಡಿ ಇತಿಹಾಸವನ್ನು ಅರಿತವರು ಇತಿಹಾಸವನ್ನು ನಿರ್ಮಿಸಬಲ್ಲರು ಅಂಬೇಡ್ಕರ್ ಅವರ ಎಂಬ ವಿಚಾರಧಾರೆಯಂತೆ ಪ್ರತಿಯೊಬ್ಬರೂ ಇತಿಹಾಸವನ್ನು ಅರಿತುಕೊಳ್ಳಬೇಕು, ಅನೇಕ. ಕಷ್ಟದ ದಿನಗಳಲ್ಲಿ ಇತಿಹಾಸವನ್ನ ಸೃಷ್ಟಿಸಿರುವ ಬುದ್ಧ ಬಸವ ಅಂಬೇಡ್ಕರ ಅವರ ವಿಚಾರಧಾರೆಗಳು ಇಂದಿಗೂ ನಮ್ಮೆಲ್ಲರಿಗೆ ದಾರಿದೀಪವಾಗಿವೆ. ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಣ ಬಹಳ ಮುಖ್ಯ. ವಿದ್ಯಾರ್ಥಿ ಜೀವನದಲ್ಲಿ ಶ್ರದ್ಧೆಯಿಂದ ಜ್ಞಾನವನ್ನು ಸಂಗ್ರಹಿಸಬೇಕು ಎಂದು ಹೇಳಿದ ಅವರು ರಸಪ್ರಶ್ನೆ ಕಾರ್ಯಕ್ರಮದ ವಿಜೇತರಿಗೆ ಬಹುಮಾನ ವಿತರಿಸಿದರು.

ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಪರಿನಿರ್ವಣ ದಿನದ ಅಂಗವಾಗಿ ಕಳೆದ ಡಿಸೆಂಬರ್ ನಲ್ಲಿ ಆಯೋಜಿಸಲಾಗಿದ್ದ ಲಿಖಿತ ರಸಪ್ರಶ್ನೆ ಕಾರ್ಯಕ್ರಮದ ವಿಜೇತರರಿಗೆ ಬಹುಮಾನ ವಿತರಿಸಲಾಯಿತು.ಪ್ರಾಥಮಿಕ ಶಾಲಾ ವಿಭಾಗ, ಪ್ರೌಢಶಾಲಾ ವಿಭಾಗ, ಮುತ್ತು ಕಾಲೇಜು ವಿಭಾಗದಲ್ಲಿ ಪ್ರಥಮ ದ್ವಿತೀಯ ಮತ್ತು ತೃತೀಯ ನಗದು ಬಹುಮಾನ, ಪ್ರಮಾಣ ಪತ್ರ ಮತ್ತು ಪದಕ ನೀಡಿ ಸನ್ಮಾನಿಸಲಾಯಿತು.

ಸಂಘಟನೆಯ ಜಿಲ್ಲಾ ಸಂಘಟನಾ ಸಂಚಾಲಕ ಸಂಜಯ ತಳವಲಕರ, ನ್ಯಾಯವಾದಿ ಮೀಡೇಶ ಪಟ್ಟಣ, ಪುರಸಭಾ ಸದಸ್ಯ ರಾವಸಾಬ ಐಹೊಳೆ, ದಲಿತ ಸಂಘರ್ಷ ಸಮಿತಿಯ ಸಂಚಾಲಕ ರವಿ ಕಾಂಬಳೆ ಮಾತನಾಡಿದರು.

ಈ ವೇಳೆ ಸಮಾರಂಭದಲ್ಲಿ ಪುರಸಭಾ ಸದಸ್ಯ ಕಲ್ಲೇಶ ಮಡ್ಡಿ, ಜಿಲ್ಲಾ ಸಂಚಾಲಕ ಶ್ರೀಕಾಂತ ತಳವಾರ, ದಿಲೀಪ ಕಾಂಬಳೆ, ತಿಪ್ಪಣ್ಣ ಭಜಂತ್ರಿ, ಸಂಗಯ್ಯ ಪೂಜಾರಿ, ಪಾಂಡುರಂಗ ಕಾಂಬಳೆ, ಅಶೋಕ ಗೌರ ಗೊಂಡ, ಡಾ. ಜಗದೀಶ್ ಮಿರಜಕರ, ಸದಾಶಿವ ಕಾಂಬಳೆ, ಎಂ ಎಂ ಕಾಂಡಕರ, ಪರಶುರಾಮ ಚುಬಚಿ, ಅಣ್ಣಾಸಾಬ ತೆಲಸಂಗ, ದಿಲೀಪ ಕಾಂಬಳ, ಪೂಜಾರಿ ಉಪಸ್ಥಿತರಿದ್ದರು. ಸೇರಿದಂತೆ ಕುಮಾರ ಇನ್ನಿತರರು ಬನಸೋಡ ಸ್ವಾಗತಿಸಿದರು. ರವಿ ಕಾಂಬಳೆ ಕಾರ್ಯಕ್ರಮ ನಿರೂ ಪಿಸಿದರು. ಶ್ರೀಕಾಂತ ಆಲಗುರ ವಂದಿಸಿದರು.