ಬುದ್ಧ ಪೂರ್ಣಿಮಾ ಆಚರಣೆ ಮತ್ತು ಸನ್ಮಾನ

ಬೀದರ:ಮೇ:27: ನಗರ ಸಭೆ ಮೈಲೂರು ಸಿ ಎಮ್ ಸಿ ಕಾಲೋನಿಯಲ್ಲಿ ಡಾ|| ಬಿ ಆರ್ ಅಂಬೇಡ್ಕರ ಭವನದಲ್ಲಿ ವಿಶ್ವಕ್ಕೆ ಶಾಂತಿಯನ್ನು ಬೋಧಿಸಿರುವ ಏಷ್ಯ ಖಂಡದ ಬೆಳಕು ಗೌತಮ ಬುದ್ದರ 2565 ನೇ ಬುದ್ದ ಪೂರ್ಣಿಮಾವನ್ನು ಕೊವಿಡ್ 19 ಎರಡನೆ ಅಲೆ ಸರ್ಕಾರದ ನಿಯಮದಡಿಯಲ್ಲಿ ಸರಳವಾಗಿ ಆಚರಣೆ ಮಾಡಲಾಯಿತು.
ಸಿ ಎಮ್ ಸಿ ಕಾಲೋನಿ ಮೈಲೂರು ನೂತನ ನಗರ ಸಭೆ ಸದಸ್ಯರಾಗಿ ಆಯ್ಕೆಯಾದ ಶಿವಕುಮಾರ ಭಾವಿಕಟ್ಟಿಯವರಿಗೆ, ಹಾಗೂ ಡಾ|| ಬಿ ಆರ್ ಅಂಬೇಡ್ಕರ ಸೇವಾ ಸಮಿತಿ ನೂತನ ಅಧ್ಯಕ್ಷ ವಿಠಲರಾವ ಮನ್ನಾಏಖೆಳಿಕರ ರವರಿಗೆ ಸನ್ಮಾನಿಸಲಾಯಿತು.
ಬೆಳಗೆ 9 ಗಂಟೆಗೆ ಸಿದ್ದಾರ್ಥ ಉದ್ಯಾನ ವನದಲ್ಲಿ ಮತ್ತು ಡಾ|| ಬಿ ಆರ್ ಅಂಬೇಡ್ಕರ ಭವನದಲ್ಲಿ ಧ್ವಜರೋಹಣ ಮಾಡಲಾಯಿತು. ಸ್ವಾಗತವನ್ನು ಸೇವಾ ಸಮಿತಿಯ ಉಪಾಧ್ಯಕ್ಷ ಲಕ್ಷ್ಮಣ ಕಾಂಚೆ ಮಾಡಿದರು. ಪ್ರಸ್ತಾವಿಕ ನುಡಿ ಜಗನಾಥ ಬಡಿಗೆರ, ಸೇವಾ ಸಮಿತಿ ಮಾಡಿರುವ, ಮಾಡುತ್ತಿರುವ ಕಾರ್ಯಗಳ ಬಗ್ಗೆ ಅರುಣ ಪಟೇಲ್ ತಿಳಿಸಿದ್ದರು. ನಿರೂಪಣೆ ಸುಬ್ಬಣ್ಣ ಕರಕಕನಳ್ಳಿ, ಮಾಡಿದರು.