ಬುದ್ಧ ಆಧ್ಯಾತ್ಮಿಕ ಮನೋ ಚಿಕಿತ್ಸಕ : ಎಸ್.ಎಮ್. ಶೇಖ

ವಿಜಯಪುರ,ಮೇ.24: ಭಗವಾನ ಬುದ್ಧರು ಪ್ರಥಮ ಆಧ್ಯಾತ್ಮಿಕ ಮನೋ ಚಿಕಿತ್ಸಕರು. ಬುದ್ಧನ ಚಿಂತನೆಗಳು ಹಿಂದೆಂದಿಗಿಂತಲೂ ಇಂದು ಪ್ರಸ್ತುತ. ಧರ್ಮ ಇರುವದು ಮನುಷ್ಯನ ಏಳಿಗೆಗಾಗಿ. ಧರ್ಮಕ್ಕಿಂತ ದೇಶ ದೊಡ್ಡದು. ಜಗತ್ತಿನ ಅತ್ಯಂತ ವೈಜ್ಞಾನಿಕವಾದದ್ದು ಬೌದ್ಧ ಧರ್ಮ ಎಂದು ಬನಹಟ್ಟಿ ವಿಶ್ರಾಂತ ಪ್ರಾಚಾರ್ಯ ಎಸ್.ಎಮ್. ಶೇಖ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ, ತಾಲೂಕ ಹಾಗೂ ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಸÀಂಯುಕ್ತ ಆಶ್ರಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಬುದ್ಧ ಪೂರ್ಣಿಮಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬುದ್ಧರ ಪೂರ್ಣಿಮಾ ಮಹತ್ವ ಎಂದರೆ ಜನ್ಮ, ಜ್ಞಾನೋದಯ, ಮಹಾಪರಿ ನಿರ್ಮಾಣ ವೈಶಾಖ ಪೂರ್ಣಿಮೆ. ಶಾಂತಿ ಅಹಿಂಸೆ ತತ್ವದಿಂದ ಬುದ್ಧರು ವಿಶ್ವ ತತ್ವಜ್ಞಾನಿಗಳಾದರು ಎಂದರು.
ಇತಿಹಾಸ ಉಪನ್ಯಾಸಕ ಡಾ. ಆನಂದ ಕುಲಕರ್ಣಿ ಉಪನ್ಯಾಸ ನೀಡಿ, ಕ್ರಿ ಶ ಆರನೇ ಶತಮಾನದಲ್ಲಿ ಲುಂಬನಿಯಲ್ಲಿ ಜನಿಸಿದರು. ಬುದ್ಧ ಆಗಿನ ಕಾಲದಲ್ಲಿ ಪಾಲಿ ಭಾμÉಯಲ್ಲಿ ತಮ್ಮ ವಿಚಾರಗಳನ್ನು ತಿಳಿಸುತ್ತಾ ಆಶೆಯೇ ದು:ಖಕ್ಕೆ ಕಾರಣ. ಅಹಿಂಸೆ ಪರಮೋ ಧರ್ಮ ಎಂದು ಬುದ್ಧ ಹೇಳಿದ ವಿಚಾರ ಅತ್ಯಂತ ಸೂಕ್ತ. ಬುದ್ಧನ ತತ್ವಗಳು ಸಾರ್ವಕಾಲಿಕ ಎಂದರು.
ಎರಡನೆಯ ಉಪನ್ಯಾಸ ನೀಡಿದ ವಿಜಯಪುರ ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಅನ್ನಪೂರ್ಣ ಬೆಳ್ಳೆನವರ ಮಾತನಾಡಿ, ಬುದ್ಧ ಭೂಮಿಯ ಮೇಲಿನ ಮೊದಲ ವೈಜ್ಞಾನಿಕ ತತ್ವಜ್ಞಾನಿಯಾಗಿದ್ದರು ಎಂದು ಹೇಳಿದರು.
ಬುದ್ಧ ಬೊಧಿಸಿದ ಪಂಚಶೀಲಗಳು, ನಾಲ್ಕು ಅರಿಯ ಸತ್ಯಗಳನ್ನು ಅರಿತು ಬದುಕಬೇಕು. ಸಮಾಜಿಕ ಕಂದಾಚಾರಗಳನ್ಮು ಪ್ರತಿರೋಧಿಸದೇ ಪರಿವತ9ನೆ ಮಾಡಿದ ಮಹಾಪುರುಷ ಭಗವಾನ ಬುದ್ಧರು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಅಡಿವೆಪ್ಪ ಸಾಲಗಲ್. ಮುಖ್ಯ ಅತಿಥಿಗಳಾದ ಮಹೇಶ ಕ್ಯಾತನ್, ಎಸ್.ಎಲ್. ಇಂಗಳೇಶ್ವರ ಬುದ್ಧನ ಕುರಿತು ಮಾತನಾಡಿದರು.
ಲಕ್ಷ್ಮಿ ಕಾತ್ರಾಳ, ಆನಂದ ಹೊನವಾಡ, ಮಹೆತಾಬ ಕಾಗವಾಡ ಬುದ್ಧರ ಕುರಿತು ಕವನ ವಾಚಿಸಿದರು. ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಪ್ರಾಸ್ತಾವಿಕ ಮಾತನಾಡಿದರ. ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಅಭಿμÉೀಕ ಚಕ್ರವರ್ತಿ ವಂದಿಸಿದರು. ಪರುಶರಾಮ ಪೆÇೀಳ ಮತ್ತಿತರರು ವೇದಿಕೆಯಲ್ಲಿದ್ದರು. ಇಂಡಿ ಪ್ರಾಥಮಿಕ ಶಾಲೆಯ ಶಿಕ್ಷಕರ ಸಂಘ ಗೌರವ ಕಾರ್ಯದರ್ಶಿ ಅನಿತಾ ರಾಠೋಡ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು..
ರವಿ ಕಿತ್ತೂರ, ಸುಭಾಷ ಗುಡಿಮನಿ, ರಾಜೇಸಾಬ ಶಿವನಗುತ್ತಿ, ಸೌಜನ್ಯಾ ಲಂಬು, ಬಸನಗೌಡ ಬಿರಾದಾರ, ಬಸವರಾಜ ಅಜೂರ, ಟಿ. ಆರ್. ಹಾವಿನಾಳ, ಅಹಮ್ಮದ ವಾಲಿಕಾರ, ಕಾಶಿನಾಥ ಹೊಸೂರ. ಕೆ.ಎಸ್. ಹಣಮಾನಿ, ಶಾಂತಾ ವಿಭೂತಿ, ಜಿ.ಎಸ್. ಬಳ್ಳೂರ, ಎಂ.ಡಿ. ಕಂಟಿಕರ, ಗಂಗಮ್ಮ ರಡ್ಡಿ, ಉಮೇಶ ಕಾಂಬಳೆ, ಎಮ್.ಎಚ್. ಬೀಳಗಿ, ನಿಂಗರಾಜ ಬಿರಾದಾರ, ಶಶಿಕಲಾ ನಾಯ್ಕೋಡಿ ಮುಂತಾದವರು ಉಪಸ್ಥಿತರಿದ್ದರು.