ಬುದ್ಧಿವಂತಿಕೆಯ ಭರಾಟೆಯಲ್ಲಿ ಹೃದಯವಂತಿಕೆ ಮರೆಯಾಗುತ್ತಿದೆ: ತೆಂಗಳಿ ಶ್ರೀ

ಕಾಳಗಿ:ನ.4: ಆಧುನಿಕ ಕಂಪ್ಯೂಟರ್ ಯುಗದಲ್ಲಿ ಬುದ್ದಿವಂತಿಕೆ ಹೆಚ್ಚಾಗುತ್ತಿದೆ, ಇದರಿಂದ ಹೊಸ ಹೊಸ ಆವಿಷ್ಕಾರಗಳಾಗುತ್ತಿರುವದು ಸಂತೋಷದ ಸಂಗತಿ, ಆದರೆ ಬುದ್ದಿವಂತಿಕೆಯ ಭರಾಟೆಯಲ್ಲಿ ವ್ಯಕ್ತಿಯಲ್ಲಿ ಹೃದಯವಂತಿಕೆ ಕಡಿಮೆಯಾಗುತ್ತಿರುವುದು ವಿಷಾದನಿಯ ಸಂಗತಿ ಎಂದು ತೆಂಗಳಿ-ಮಂಗಲಗಿಯ ಶಾಂತೇಶ್ವರ ಮಠದ ಪೀಠಾಧಿಪತಿ ಡಾ. ಶಂತಸೋಮನಾಥ ಶಿವಾಚಾರ್ಯರು ಹೇಳಿದರು.

ತಾಲೂಕಿನ ತೆಂಗಳಿ ಗ್ರಾಮದ ಅಂಬಾಭವಾನಿ ದೇವಸ್ಥಾನದಲ್ಲಿ ಸೀಗೆ ಹುಣ್ಣಿಮೆಯ ನಿಮಿತ್ಯ ವಚನೋತ್ಸವ ಪ್ರತಿಷ್ಠಾನ ಯುವ ಘಟಕದ ವತಿಯಿಂದ 43ನೇ ಉಡಿ ತುಂಬುವ ಹಾಗೂ ಬಾಲ ಮೈತ್ತೈದೆಯರಿಗೆ ಪ್ರಶಸ್ತಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕøತಿ, ಸಂಸ್ಕಾರಗಳು ಕಲಿಸುವದು ತುಂಬಾ ಅವಶ್ಯಕವಾಗಿದೆ. ವಿದ್ಯಾವಂತ ಸಂಸ್ಕಾರಯುತ ಮಕ್ಕಳು ದೇಶದ ಆಸ್ತಿ, ಆ ನಿಟ್ಟಿನಲ್ಲಿ ಮಕ್ಕಳು ತಯಾರಿಸುವ ಜವಾಬ್ದಾರಿ ತಂದೆ-ತಾಯಂದಿರು, ಪೋಷಕರು ಹಾಗೂ ಗುರುಗಳ ಮೇಲಿದೆ ಎಂದರು.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆ ಎಷ್ಟು ಮುಖ್ಯವೋ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವದು ಅಷ್ಟೆ ಮುಖ್ಯವಾಗಿದೆ. ಧಾರ್ಮಿಕ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ಸಂಸ್ಕಾರ ಹಾಗೂ ಸಂಸ್ಕøತಿ ದೊರಕುವದು, ಸಂಸ್ಕಾರಯುತ ಮಕ್ಕಳು ಹೃದಯವಂತಿಯ ಅಧಿಪತಿಗಳಾಗುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಐಶ್ವರ್ಯ ಕಿರಣಕುಮಾರ ಸರಡಗಿ, ಅರ್ಪಿತಾ ವಿಶ್ವನಾಥ ಹಿಲ್ಲಾ, ಕವಿತಾ ದೇವಿಂದ್ರಪ್ಪ ತೆಲಗಾಣಿ, ಮೇಘರಾಣಿ ಉಮಾಶಂಕರ ತುಪ್ಪದ, ನಿವೇದಿತಾ ನಾಗಯ್ಯ ಭೈರಾಮಡಗಿ, ವೈಷ್ಣವಿ ಚಂದ್ರಕಾಂತ ಬಾರಿಗಿಡ, ಸುಕನ್ಯ ಈರಯ್ಯ ಮಠಪತಿ, ನಿರ್ಮಲಾ ರಾಜಶೇಖರ ಹೊಂದೆ, ಹಾಗೂ ಭವ್ಯಶ್ರೀ ಶಿವಕುಮಾರ ಸುಲ್ತಾನಪುರ ಇವರುಗಳು ನವರಾತ್ರಿ ನವದುರ್ಗೆ 9 ಅವತಾರಗಳಲ್ಲಿ 9 ವಿವಿಧ ಬಣ್ಣಗಳಿಂದ ಸೀರೆಯನ್ನುಟ್ಟು ಶೃಂಗಾರಗೊಂಡು ಭಾಗವಹಿಸಿದರು, 9 ಬಾಲ ಮುತ್ತೈದಿ ಮಕ್ಕಳಿಗೆ ಟೆಂಗಳಿ ಮಂಗಲಗಿಯ ಡಾ. ಶಾಂತಸೋಮನಾಥ ಶಿವಾಚಾರ್ಯರು ಪ್ರಶಸ್ತಿ ಪತ್ರ ವಿತರಿಸಿ ಆಶಿರ್ವದಿಸಿದರು.

ವಚನೋತ್ಸವ ಪ್ರತಿಷ್ಠಾನ ಯುವ ಘಟಕದ ಅಧ್ಯಕ್ಷ ಶಿವರಾಜ ಅಂಡಗಿ ಮಾತನಾಡಿ, ಕಳೆದ 42 ವರ್ಷಗಳಿಂದ ನಮ್ಮ ತಂದೆ ದಿ. ಶಿವಶರಣಪ್ಪ ಅಂಡಗಿ ಅವರು ಉಡಿ ತುಂಬುವ ಕಾರ್ಯಕ್ರಮ ನೆರೆವೆರಿಸಿಕೊಂಡು ಬಂದಿದ್ದರು, ಅವರ ಅಗಲಿಕೆಯಾದರೂ ಅವರ ಸಂಪ್ರದಾಯ ಕೊನೆಗೊಳ್ಳಬಾರದು ಎಂದು ಅವರ ಮಕ್ಕಳಾದ ನಾವು ಉಡಿ ತುಂಬುವ ಕಾರ್ಯಕ್ರಮ ಮುಂದಿವರೆಸಿಕೊಂಡು ಬಂದಿದ್ದೆವೆ ಎಂದರು.

ಕಾರ್ಯಕ್ರಮದ ನಂತರ ಭೀರಣ್ಣ ಪೂಜಾರಿ, ವಿಶ್ವನಾಥ ಬಾಳದೆ, ಚಂದ್ರಶೇಖರ ಎಲೇರಿ, ಜಗನ್ನಾಥ ಚಿದ್ರಿ ಹುಳಗೇರಿ ಹಾಗು ಸಂಗಡಿಗರಿಂದ ಭಜನೆ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಅಬಾಭವಾನಿ ದೇವಸ್ಥಾನದ ಅಧ್ಯಕ್ಷ ಧನಂಜಯ ಕುಲಕರ್ಣಿ, ಉಪಾಧ್ಯಕ್ಷ ಸಿದ್ರಾಮಪ್ಪ ಅಂಡಗಿ, ಖಜಾಂಚಿ ಚಂದ್ರಶೇಖರ ಮಂಗದ, ಸದಸ್ಯರಾದ ವೀರಭದ್ರಪ್ಪ ಚೆಂಗಟಿ, ಭೀರಣ್ಣ ಪೂಜಾರಿ, ರೇವಣಸಿದ್ದಪ್ಪ ಮತ್ತಿಮೂಡ, ವಚನೋತ್ಸವ ಪ್ರತಿಷ್ಠಾನ ಯುವ ಘಟಕದ ಅಧ್ಯಕ್ಷ ಶಿವರಾಜ ಅಂಡಗಿ, ಭೀಮೇಶ್ವರ ಜಿರ್ಣೋಧ್ಧಾರ ಸಮಿತಿ ಅಧ್ಯಕ್ಷ ವಿರೇಂದ್ರ ವಾಲಿ, ಭೀಮೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಭೀಮಾಶಂಕರ ಅಂಕಲಗಿ, ಪ್ರಮುಖರಾದ ಡಾ. ಓಂಪ್ರಕಾಶ ಹೆಬ್ಬಾಳ, ಭೀಮರಾವ ಬಾರಿಗಿಡ, ಮಲ್ಲಣ್ಣ ಭೇರನ, ಭೀಮರಾವ ಕುದ್ರಿಕಾರ, ಯಶ್ವಂತರಾವ ಅಂಕಲಗಿ, ಗುಂಡಪ್ಪ ಪಟೇದ, ಬಸವರಾಜ ತುಪ್ಪದ, ರವಿಂದ್ರ ಬೀದನ, ನಾಗರಾಜ ಮಹಾಗಾಂವ, ವಿಶ್ವನಾಥ ಹಿಲ್ಲಾ, ವಿಶ್ವನಾಥ ಬಾಳದೆ, ಚಂದ್ರಶೇಖರ ಎಲೇರಿ, ಅಣವೀರಪ್ಪ ಹತ್ತಿ, ಬಸವರಾಜ ಬಸ್ತೆ, ಹನೀಫಸಾಬ್, ನಾಗಣ್ಣ ಹಟಗಾರ, ಅನೀಲ್ ತುಪ್ಪದ, ರಾಜು ಪಟ್ಟೆದ್, ಸಂಗಯ್ಯ ಬುದನಮಠ, ಕಿರಣಕುಮಾರ ಸರಡಗಿ, ಕಾಶಿನಾಥ ತುಪ್ಪದ, ಶೇಖರ ಲಾಳಿ, ರೇವಣಸಿದ್ದಯ್ಯ ಮಠಪತಿ, ಮಹಾದೇವಯ್ಯ ಮಠಪತಿ, ಶರಣಪ್ಪ ಕಲಗುರ್ತಿ, ವಿನೋದಕುಮಾರ ಜನೆವರಿ, ರಾಜಶೇಖರ ಮರಪಳ್ಳಿ, ಚಂದ್ರಶೇಖರ ಸುಲೇಪೇಟ, ಮಹೇಂದ್ರಕುಮಾರ ಗೋಟೂರ, ಶರಣಬಸಪ್ಪ ಆಂದೇಲಿ, ಅಣವೀರಪ್ಪ ಆಂದೇಲಿ, ಬಸವರಾಜ ಡೊಣ್ಣೂರ ಸೇರಿದಂತೆ ಅನೇಕರು ಇದ್ದರು.

ಕಾರ್ಯಕ್ರಮವನ್ನು ಪ್ರೊ. ಸಿದ್ರಾಮಪ್ಪ ಅಂಡಗಿ ಸ್ವಾಗತಿಸಿದರು, ಭೀಮೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಭೀಮಾಶಂಕರ ಅಂಕಲಗಿ ಕಾರ್ಯಕ್ರಮ ನಿರೂಪಿಸಿದರು, ಭೀಮೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಭೀಮಾಶಂಕರ ಅಂಕಲಗಿ ಕಾರ್ಯಕ್ರಮ ನಿರೂಪಿಸಿದರು, ಡಾ. ಓಂಪ್ರಕಾಶ ಹೆಬ್ಬಾಳ ವಂದಿಸಿದರು.