ಬುದ್ಧವಿಹಾರದಲ್ಲಿ ಸಂಭ್ರಮದ ಬುದ್ಧಪೂರ್ಣಿಮೆ

ಕಲಬುರಗಿ,ಮೇ 23: ನಗರದ ಸೇಡಂ ರಸ್ತೆಯಲ್ಲಿನ ಬುದ್ಧವಿಹಾರದಲ್ಲಿ ಇಂದು ಸಿದ್ಧಾರ್ಥ ವಿಹಾರ ಟ್ರಸ್ಟ್ ವತಿಯಿಂದ ವೈಶಾಖ ಬುದ್ಧಪೂರ್ಣಿಮೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಬೆಳಿಗ್ಗೆ ಬುದ್ಧವಿಹಾರದ ಸಂಘಾನಂದ ಭಂತೇಜಿ ಅವರಿಂದ ಬುದ್ಧ ವಂದನೆ ನೆರವೇರಿತು.ಚಿಂತಕ ಎಚ್.ಆರ್ ಸ್ವಾಮಿ ವಿಶೇಷ ಉಪನ್ಯಾಸ ನೀಡಿದರು.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ರಾಧಾಬಾಯಿ ಮಲ್ಲಿಕಾರ್ಜುನ ಖರ್ಗೆ, ಸಚಿವ ಡಾ. ಶರಣಪ್ರಕಾಶ ಪಾಟೀಲ,ಶಾಸಕರಾದ ಅಲ್ಲಮಪ್ರಭು ಪಾಟೀಲ, ಎಂ.ವೈ ಪಾಟೀಲ,ತಿಪ್ಪಣ್ಣಪ್ಪ ಕಮಕನೂರ,ಮುಖಂಡರಾದ ಮಾಲೀಕಯ್ಯ ಗುತ್ತೇದಾರ, ನೀಲಕಂಠರಾವ ಮೂಲಗೆ,ಜಗದೇವ ಗುತ್ತೇದಾರ ,ಟ್ರಸ್ಟ್ ಆಡಳಿತಾಧಿಕಾರಿ ಆರ್ ಕೆ ಬೇಗಾರ ಮತ್ತು ಹಲವಾರು ಬೌಧ್ಧ ಉಪಾಸಕರು ಪಾಲ್ಗೊಂಡರು.
ಇಂದು ಸಂಜೆ ಬುದ್ಧ ವಿಹಾರದ ರಂಗಮಂದಿರದಲ್ಲಿ ಬುದ್ಧ ಭೀಮ ಗೀತಗಾಯನ,ಅಂಗುಲಿಮಾಲ ನಾಟಕ ಪ್ರದರ್ಶನ ನಡೆಯಲಿದೆ.