
ಬಸವಕಲ್ಯಾಣ:ಫೆ.20:ಬುದ್ಧರ ಜೀವನ ಸಂದೆಶಗಳೆ ನಮ್ಮೆಲ್ಲರಿಗೂ ಆದರ್ಶ. ಪ್ರತಿಯೊಬ್ಬರು ಬುದ್ಧರ ತತ್ವ, ಬೋಧನೆ ಪಾಲಿಸಿದರೆ ನಾವೆಲ್ಲ ಹರ್ಷ,ನೆಮ್ಮದಿಯಿಂದ ಇರಲು ಸಾಧ್ಯ ಎಂದು ಅಂತಾರಾಷ್ಟ್ರೀಯ ಬುದ್ಧರ ಪ್ರತಿಮೆ ವಿತರಣಾ ಸಮಿತಿ ಅಧ್ಯಕ್ಷರು ಹಾಗೂ ಸಮಾರಂಭದ ಅಧ್ಯಕ್ಷತೆ ವಹಿಸಿರುವ ಡಾ. ಸುರೆಶ್ ಎಲ್. ಶರ್ಮಾ ಅವರು ಹೇಳಿದರು.
ಬಸವಕಲ್ಯಾಣ ತಾಲೂಕಿನ ಹತ್ಯಾಳ ಗ್ರಾಮದಲ್ಲಿ 2ನೇ ಅಂತರಾಷ್ಟ್ರೀಯ 52 ಬುದ್ಧರ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಮಾತನಾಡಿದ ಅವರು ಬುದ್ಧರು ವಿಶ್ವಕ್ಕೆ ಶಾಂತಿ ಸಂದೇಶ ಸಾರಿದಾರೆ. ಅದನ್ನು ಅರಿಯದೆ ನಾವು ದುರಾಶೆಗಳ ಹಿಂದೆ ಬಿದ್ದಿದ್ದೆವೆ. ದುರಾಶೆಯ ಫಲವಾಗಿ ದೇಶದಲ್ಲಿ ಶಾಂತಿ ಇಲ್ಲದಂತಾಗಿದೆ. ಬುದ್ಧರ ಮೂರ್ತಿ ಅನಾವರಣದ ಉದ್ದೆಶ ಪ್ರತಿಯೊಬ್ಬರ, ವೈಚಾರಿಕ, ವೈಜ್ಞಾನಿಕ ಮನೊಭಾವ ಬೆಳೆಯುವಂತಾಗಬೇಕು. ಬುದ್ಧರ ಜೀವನ, ಸಂದೇಶಗಳು ಹೆಚ್ಚು ಪ್ರಸಾರ ಮಾಡಬೇಕಿರುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಚಕ್ರವರ್ತಿ ಅಶೋಕ, ಕಾನಿಷ್ಕರಂತೆ ಬುದ್ಧ ಧಮ್ಮ ಪೆÇ್ರೀತ್ಸಾಹಿಸಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಥೈಲ್ಯಾಂಡಿನ ಪ್ರಾ,ಧಮ್ಮಮೂಲಿ ಪ್ರಾ,ಅಡುಲ್
ಹತ್ಯಾಳದ ಡಾ.ಬಿ.ಆರ್.ಅಂಬೆಡ್ಕರ್ ಮೆಮೋರಿಯಲ್ ಪಬ್ಲಿಕ್ ಶಾಲೆಯ ಅಧ್ಯಕ್ಷರಾದ ಮಹಾಂತವೀರ ಭಂತೆ ಧಮ್ಮನಾಗ, ಅಂತಾರಾಷ್ಟ್ರೀಯ ಬುದ್ಧರ ಪ್ರತಿಮೆ ವಿತರಣಾ ಸಮಿತಿ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಸುಭಾನೆ, ಉದ್ಯಮಿ ಡಾ. ಕಲ್ಪನಾ ಸರೋಜಾ, ಸಾಹಿತಿ ಆರ್.ಕೆ.ಹುಡಗಿ,ಪ್ರೆ?ಮ ಸಾಗರ ವಿಲಾಸ್ ಗಜಘಾಟೆ,ಸೂರ್ಯಕಾಂತ ನಿಂಬಾಳಕರ್,ಪೀರಪ್ಪ ಯಾತನೂರ್ ,ಬೌದ್ಧ ಬಿಕ್ಕುಗಳು ಮುಂತಾದವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.