ಬುದ್ಧನ ಸಿದ್ಧಾಂತಗಳಲ್ಲಿ ಅನುಭವದ ಅಮೃತವಿದೆ”

ಸಂಜೆವಾಣಿ ವಾರ್ತೆ

ದಾವಣಗೆರೆ. ಮೇ.೨೪: ನಗರದ ಧ.ರಾ.ಮ.ವಿಜ್ಞಾನ ಕಾಲೇಜಿನಲ್ಲಿ  “ಜ್ಞಾನ ಜ್ಯೋತಿ ಬುದ್ಧ ಪೂರ್ಣಿಮಾ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ  ಪ್ರಾಧ್ಯಾಪಕರಾದ ಡಾ.ಹೆಚ್.ಎಸ್.ಮಂಜುನಾಥ್‌ ಕುರ್ಕಿ‌ ಮಾತನಾಡಿ ಸಿರಿವಂತಿಕೆಯನ್ನು ತ್ಯಜಿಸಿ, ಅಲೌಕಿಕ ಜ್ಞಾನದ ಕಡೆಗೆ ಗಮನ ಹರಿಸಿ, ಆಸೆಯೇ ದುಃಖಕ್ಕೆ ಮೂಲ ಕಾರಣ ಎಂದು ಹೇಳುತ್ತಾ, ಸಮಾಜ ಸುಧಾರಣೆಗೆ ಅಷ್ಟಾಂಗ ಮಾರ್ಗಗಳನ್ನು ಬೋಧಿಸಿದ, ಬುದ್ಧನ ತತ್ವಗಳಲ್ಲಿ ಅನುಭವದ ಅಮೃತವಿದೆ ಎಂದು ವಿದ್ಯಾರ್ಥಿಗಳಿಗೆ ಅರ್ಥಪೂರ್ಣವಾಗಿ ತಿಳಿಹೇಳಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ, ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ.ರೂಪಶ್ರೀ.ಎಂ.ಪಿ. ಅವರು ಕಿಸ್ತ.ಪೂರ್ವ ಆರನೇ ಶತಮಾನದಲ್ಲಿ ಬೋಧಿಸಿದ ಬುದ್ಧನ ತತ್ವಗಳು ಇಂದಿಗೂ ಪ್ರಸ್ತುತವೆನಿಸುತ್ತವೆ ಎಂದು ಹೇಳುತ್ತಾ ನಮ್ಮ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳಲು ನಾವೆಲ್ಲರೂ ಕಂಕಣಬದ್ಧರಾಗಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು ವೇದಿಕೆಯ ಮೇಲೆ ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ, ಡಾ.ಮೊಹಮ್ಮದ್‌ ಇಮಾದಾದುಲ್ಲಾ ಹಾಗೂ ಹಿರಿಯ ಪ್ರಾಧ್ಯಾಪಕರಾದ ಡಾ.ವಸಂತನಾಯ್ಕ್.ಟಿ. ಉಪಸ್ಥಿತರಿದ್ದರು. ಸ್ವಾಗತ .ಎಂ.ಜಿ.ವಿನಯಾ ಕುಮಾರ್‌, ತೃತೀಯ ಬಿ.ಎಸ್ಸಿ .,ವಂದನಾರ್ಪಣೆ  ಕು.ಎಂ.ಎಂ.ಪೂರ್ಣಿಮಾ, ನಿರೂಪಣೆ ಕು.ಚಂದನಾ  ನಿರ್ವಹಿಸಿದರು ಹಾಗೂ ಕಾಲೇಜಿನ ಎಲ್ಲ ವಿದ್ಯಾರ್ಥಿಗಳು,ಬೋಧಕ-ಬೋಧಕೇತರ ನೌಕರರೆಲ್ಲರೂ ಉಪಸ್ಥಿತರಿದ್ದರು. ಪ್ರಯುಕ್ತಾ ದಯಮಾಡಿ ತಮ್ಮ ಪತ್ರಿಕೆಯಲ್ಲಿ ಈ ವರದಿಯನ್ನು ಪ್ರಕಟಿಸಲು ಕೋರುತ್ತೇನೆ.