ಬುದ್ಧನ ತತ್ವಗಳು ಸಮಾಜದಲ್ಲಿ ಶಾಂತಿ ನೆಲೆಸಲು ಸಹಕಾರಿ: ಶರಣಪ್ಪ ಬಾಬಣ್ಣ

ಹುಮನಾಬಾದ್:ಮೇ.25: ಬುದ್ಧನ ಆದರ್ಶ ತತ್ವಗಳು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಶಾಂತಿ ನೆಮ್ಮದಿಯಿಂದ ಬಾಳಲು ಸಾಯವಾಗುತ್ತದೆ ಎಂದು ಬಿಜೆಪಿಯ ಹಿರಿಯ ಮುಖಂಡ ಶರಣಪ್ಪ ಕುಡಂಬಲ್ ನುಡಿದರು.
ಬುದ್ಧ ಪೂರ್ಣಿಮೆ ಅಂಗವಾಗಿ ಚಿಟಗುಪ್ಪಾ ತಾಲ್ಲೂಕಿನ ಮನ್ನಾಎಖೇಳ್ಳಿ ಹತ್ತಿರದ ರೇಕುಳಗಿ ಮೌಂಟ ಬುದ್ಧ ವಿಹಾರಕ್ಕೆ ಕುಟುಂಬ ಸಮೇತರಾಗಿ ತೆರಳಿ ಬುದ್ಧನ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕದ ಸುಪ್ರಸಿದ್ದ ರೇಕುಳಗಿ ಮೌಂಟ್ ಬುದ್ಧ ವಿಹಾರ ಇಲ್ಲಿನ ಸುಂದರ ಪರಿಸರ ಮಧ್ಯದಲ್ಲಿದ್ದು, ಬೀದರ್ ಜಿಲ್ಲೆ ಹೆಮ್ಮೆಯ ಐತಿಹಾಸಿಕ ಧಾರ್ಮಿಕ ಕೇಂದ್ರವಾಗಿದೆ ಜಿಲ್ಲಾಡಳಿತ ಈ ಪವಿತ್ರ ಸ್ಥಳವನ್ನು ಅಭಿವೃದ್ಧಿಪಡಿಸಿ, ಬುದ್ದ ವಿಹಾರದಲ್ಲಿ ಭಕ್ತಾಧಿಗಳಿಗೆ ಮೂಲಭೂತ ಸೌಲಭ್ಯಗಳು ಒದಗಿಸಬೇಕು ಎಂದು ಮನವಿ ಮಾಡಿದರು