ಬುದ್ದಿ ಮಾಂದ್ಯ ಯುವತಿ ಮೇಲೆ ಅತ್ಯಾಚಾರ ವೆಸಗಿ ಪರಾರಿಯಾದ ಆರೋಪಿ ವಿರುದ್ದ ಕ್ರಮಕ್ಕೆ ಆಗ್ರಹ

ಮುದ್ದೇಬಿಹಾಳ: ಡಿ.18:ತಾಳಿಕೋಟಿ ತಾಲೂಕಿನ ನಡಹಳ್ಳಿ ಗ್ರಾಮದ ಬುದ್ದಿ ಮಾಂಧ್ಯ ಯುವತಿ ಮೇಲೆ ಅತ್ಯಾಚಾರ ವೆಸಗಿ ಪರಾರಿಯಾಗಿದ್ದ ಆರೋಪಿಯನ್ನು ಸೂಕ್ತ ಕಾನೂನು ಕ್ರಮ ಕೈಗೋಳ್ಳದ ಮಹಿಳಾ ಪಿ ಎಸ್ ಐ ಅವರ ಮೇಲೇ ಹಾಗೂ ಅತ್ಯಾಚಾರಿಗೆ ಕಠೀಣ ಶಿಕ್ಷಗೆಒಳಪಡಿಸಬೇಕು ಎಂದು ಆಗ್ರಹಿಸಿ ತಾಲೂಕಾ ವಿಕಲಚೇತನ ಹಾಗೂ ವಿವಿಧ ದಲಿತ ಪರ ಸಂಘಟನೆಗಳಿಂದ ಗುರುವಾರ ಶಿರಸ್ತೆದಾರ ವಿ ಎಸ್ ಬಳೂರಗಿ ಅವರ ಮೂಲಕ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಹಾಗೂ ವಿಜಯಪುರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕಳೇದ ನಾಲ್ಕೈದು ದಿನಗಳ ಹಿಂದೇ ತಾಳಿಕೋಟಿ ತಾಲೂಕಿನ ನಡಹಳ್ಳಿ ಗ್ರಾಮದಲ್ಲಿನ ಬುದ್ಧಿ ಮಾಂಧ್ಯ 16 ವರ್ಷದ ಯುವತಿ ಮೇಲೆ ರುದ್ರುಗೌಡ ಹಣಮಂತ್ರಾಯ ಬಿರಾದಾರ ಎನ್ನುವ ವ್ಯಕ್ತಿಯು ಅತ್ಯಾಚಾರ ವೆಸಗಿ ಪರಾಯಾಗಿದ್ದಾನೆ. ವಿಷಯ ತಿಳಿದ ಸ್ಥಳಿಯರು ಹಾಗೂ ಮುಖಂಡರು ಸೇರಿ ತಾಳಿಕೋಟಿ ಪೋಲಿಸ್ ಠಾಣೆಗೆ ತೆರಳಿ ದೂರು ದಾಖಲಿಸುವಂತೆ ಅಲ್ಲಿನ ಮಹಿಳಾ ಪಿ ಎಸ್ ಐ ಅವರಲ್ಲಿ ಕೇಳಿಕೊಂಡಿದ್ದಾರೆ. ಆದರೇ ಮಹಿಳಾ ಪಿ ಎಸ್ ಐ ಅವರು ತಕ್ಷಣವೇ ಪ್ರಕರಣ ದಾಖಲಿಸಿಕೊಳ್ಳದೇ ಎರಡು ಮೂರು ದಿನಳವೆರೆ ಠಾಣೆಗೆ ಅಲೆದಾಡುವಂತೆ ಮಾಡಿದ್ದಲ್ಲದೇ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಸಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಕೊನೆಗೆ ದಿ, 16 ರಂದು ಪ್ರಕರಣ ದಾಖಸಿಕೊಂಡಿದ್ದಾರೆ. ಹಾಗಾಗಿ ಪ್ರಕರಣ ದಾಖಲಿಸಲು ವಿಳಬಂ ನೀತಿ ಅನುಸರಿಸಿದ ಮಹಿಳಾ ಪಿಎಸೈ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಅತ್ಯಾಚಾರಿ ಆರೋಪಿಗೆ ಕಠೀಣ ಶಿಕ್ಷೇ ನೀಡಬೇಕು ಎಂದು ಮನವಿಲ್ಲಿ ತಿಳಿಸಿದ್ದಾರೆ.ಈ ವೇಳೆ ವಿಕಲಚೇತನ ಸಂಘದ ಜಿಲ್ಲಾಧ್ಯಕ್ಷ ಎಸ್ ಕೆ ಘಾಟಿ, ತಾಲೂಕಾ ಅಧ್ಯಕ್ಷವ ಎ ಪಿ ಕೊಡಗಾನೂರ, ರುದ್ರಗೌಡ ಗೌಡರ, ಸಾಹೇಬಪಟೇಲ ಬೇವಿನಗಿಡ, ಜಿ ಬಿ ಹಿರೇಮಠ, ಸಂಗಮೇಶ ನಾಆಗರಾಳ, ಬಸಪ್ಪ ಕಠಾರಿ, ಬಿ ಎಸ್ ನಾಯ್ಕೋಡಿ, ಎಂ ಎಂ ಕುಂಬಾರ ಎಂ ಎಸ್ ಸಿಂಹಾಸನ ಸೇರಿದಂತೆ ಹಲವರು ಇದ್ದರು.