ಬುದ್ದಿಮಾಂದ್ಯ ಬಾಲಕಿ ಅತ್ಯಾಚಾರಖಂಡಿಸಿ ಪ್ರತಿಭಟನೆ

ಸಿಂದಗಿ;ಡಿ.26: ವಿಜಯಪುರ ಜಿಲ್ಲೆಯ ತಾಳಿಕೋಟ ತಾಲೂಕಿನ ನಡಹಳ್ಳಿ ಗ್ರಾಮದ ಬುದ್ಧಿಮಾಂದ್ಯ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಆರೋಪಿಯ ಪ್ರಕರಣ ತನಿಖೆ ನಡೆಸುವಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಮಹಿಳಾ ಪಿ.ಎಸ್.ಐ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾಲೂಕಾ ದಂಡಾಧಿಕಾರಿಗಳ ಕಾರ್ಯಾಲಯದ ಶಿರಸ್ತೆದಾರ ಸಿ.ಬಿ.ಬಾಬಾನಗರ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಾಯಾಲಯದ ಆವರಣದಲ್ಲಿ ಜಮಾಯಿಸಿದ ಕರ್ನಾಟಕ ಅಂಗವಿಕಲರ ಐಕ್ಯತಾ ವೇದಿಕೆಯ ಹಾಗೂ ಎಮ್.ಆರ್.ಡಬ್ಲೂ, ವಿ,ಆರ್,ಡಬ್ಲೂ, ಫ್ರೀಡಮ್ ಅಸೋಸಿಯೇಶನ್ ವಿಥ್ ಡಿಸೇಬಲ್ಟಿ, ಸಿಂದಗಿ ಹಾಗೂ ವಿಷೇಶ ಚೇತರಿಗಾಗಿ ಶ್ರಮಿಸುತ್ತಿರುವ ಸಂಘ ಸಂಸ್ಥೆಗಳ ಹಾಗೂ ಸಂಘಟನೆಗಳ ಪದಾಧಿಕಾರಿಗಳು ಅನ್ಯಾಯವನ್ನು ಖಂಡಿಸಿ ಘೋಷಣೆಗಳನ್ನು ಕೂಗುತ್ತ ಪ್ರತಿಭಟನೆ ನಡೆಸಿದರು.
ರಾಜ್ಯಾಧ್ಯಕ್ಷೆ ಸಬಿಯಾಬೇಗಂ ಡಿ. ಮರ್ತೂರ ಮಾತನಾಡಿ, ತಾಳಿಕೋಟ ತಾಲೂಕಿನ ನಡಹಳ್ಳಿ ಗ್ರಾಮದ ಬುದ್ಧಿಮಾಂದ್ಯ ಬಾಲಕೀಯ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ ವ್ಯಕ್ತಿಯೋರ್ವನ ವಿರುದ್ಧ ಡಿ. 16 ರಂದು ತಾಳಿಕೋಟಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಆರೋಪಿಯನ್ನು ಬಂಧಿಸಿದ್ದು ಆರೋಪಿಯ ಮೇಲೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಆದರೆ ಘಟನೆ ನಡೆದು 4, 5 ದಿನಗಳಾದರೂ ಸಹ ತನಿಖೆ ಮಾಡಲು ನಿರ್ಲಕ್ಷ್ಯ ವಹಿಸಿದ ಮಹಿಳಾ ಪಿ.ಎಸ್.ಐ ಇವರ ವಿರುದ್ಧ ಕಠಿಣ ಕ್ರಮ ಜರುಗಿಸಿ ಅನ್ಯಾಯಕ್ಕೊಳಗಾದ ಬಾಲಕಿಗೆ ಸರಕಾರದಿಂದ ಸೂಕ್ತ ಪರಿಹಾರ ಒದಗಿಸಿಕೊಡಬೇಕು ಅಲ್ಲದೆ ಘಟನೆಗೆ ಕಾರಣಿಭೂತರಾದ ಆರೋಪಿತನಿಗೆ ಕಠಿಣ ಶಿಕ್ಷೆಕೊಟ್ಟು ಸಮಾಜದಲ್ಲಿ ಇಂತಹ ಪ್ರಕರಣಗಳಲ್ಲಿ ಬಾಗವಹಿಸುತ್ತಿರುವ ಅತ್ಯಾಚಾರಿಗಳಿಗೆ ಕಠೀಣ ಸಂದೇಶ ರವಾನಿಸಬೇಕು ಸರಕಾರದಿಂದ ಬುದ್ಧಿಮಾಂದ್ಯ ಬಾಲಿಕಿಯ ಜೀವನಕ್ಕೆ ಪರಿಹಾರ ಪೂರೈಸಿಕೊಡಬೇಕಲ್ಲದೆ ರಾಜ್ಯದಲ್ಲಿ ವಿಕಲ ಚೇತನರ ಮೇಲೆ ಆಗುವ ದೌರ್ಜನ್ಯ, ಅತ್ಯಾಚಾರ ಹೆಚ್ಚಾಗುತ್ತಿದ್ದು, ಇಂತಹ ಅತ್ಯಾಚಾರಗಳು ನಡೆಯದಂತೆ ಮಾನ್ಯ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿಠ್ಠಲ ಖರ್ಜಗಿ ಮಾತನಾಡಿ, ಅಂಗವಿಕರ ಮತ್ತು ದೈಹಿಕವಾಗಿ ಅಶಕ್ತರಾದ ಮಹಿಳೆಯರ ಮೇಲೆ ಪದೆ-ಪದೆ ಈ ತರಹದ ಅತ್ಯಾಚಾರಗಳು ಸತತವಾಗಿ ನಡೆಯುತ್ತಿದ್ದು, ಪ್ರಮುಖವಾಗಿ ಇತ್ತಿಚಿಗೆ ಅತ್ಯಾಚಾರ ನಡೆದ ನಡಹಳ್ಳಿ ಗ್ರಾಮವು ಮುದ್ದೆಬಿಹಾಳ ಪೋಲಿಸ ಠಾಣೆಯ ವ್ಯಾಪ್ತಿಯಲ್ಲಿದ್ದು ಅಲ್ಲಿ ಪಿ.ಎಸ್.ಐ ಕೂಡಾ ಮಹಿಳೆಯರಾಗಿದ್ದು, ಘಟನೆ ನಡೆದ 4-5 ದಿನಗಳಾದರು ಕೂಡಾ ತನಿಖೆಯ ಬಗ್ಗೆ ಆಸಕ್ತಿ ವಹಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಕಾರಣ ಘಟನೆಯನ್ನು ತಿವ್ರಗತಿಯಲ್ಲಿ ತನಿಖೆಗೆ ಒಳಪಡಿಸಿ ಅತ್ಯಾಚಾರಕ್ಕೆ ಕಾರಣರಾದ ಆರೋಪಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವ ಕಾನೂನನ್ನು ದೇಶದಲ್ಲಿ ಜಾರಿಗೆ ತಂದಾಗ ಮಾತ್ರ ಇಂತಹ ಘಟನೆಗಳು ಮರುಕಳಿಸದು ಮಾನ್ಯರವರು ಅತ್ಯಾಚಾರಕ್ಕೊಳಪಟ್ಟಿರುವ ಬಾಲಕಿಗೆ ಸೂಕ್ತ ರಕ್ಷನೆ ನೀಡುವ ಮೂಲಕ ಸರಕಾರ ಸೂಕ್ತ ಪರಿಹಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಮ್.ಆರ್.ಡಬ್ಲೂ ಮುತ್ತುರಾಜ ಬ ಸಾತಿಹಾಳ, ಸುನೀತಾ ಎಸ್. ಛತ್ರಿ, ವಿಜಯ ಬಜಂತ್ರಿ, ಗುಲಶನಬಿ ಅಲ್ಲಿಸಾಬ ಬೈರೋಡಗಿ, ನೀಲಮ್ಮ ಶಂಭೇವಾಡ, ಕೌಸರ ನಬೀಲಾ ಬೈರೋಡಗಿ, ರೇವಣಸಿದ್ದ ಆಹೇರಿ, ರಾಜು ಯಡ್ರಾಮಿ, ಪಾರ್ವತಿ ಬಗಲೂರ, ವಸಂತ್ರಾಯ ಕುಲಕರ್ಣಿ ಸೇರಿದಂತೆ ಅನೇಕರು ಇದ್ದರು.