ಬುದೇರಾ: ಸ್ಮಶಾನ ಭೂಮಿಗಾಗಿ ಜಿಲ್ಲಾಡಳಿತಕ್ಕೆ ರಮೇಶ ಕೋರಿ ಮನವಿ

ಬೀದರಃಜು.31: ಬೀದರ ತಾಲ್ಲೂಕಿನ ಚಟನಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಬುದೇರಾ ಗ್ರಾಮದಲ್ಲಿ ಸಾಮಾನ್ಯ ವರ್ಗದವರಿಗಾಗಿ ಸ್ಮಶಾನ ಭೂಮಿ ಇರುವುದಿಲ್ಲ. ಈ ಕುರಿತು ಅನೇಕ ಸಾರಿ ಜಿಲ್ಲಾಡಳಿತಕ್ಕೆ ಸಂಬಂಧಿತ ಅಧಿÀಕಾರಿಗಳಿಗೆ ಮನವಿ ಪತ್ರ ನೀಡಿದರೂ ಸಹ ಇಲ್ಲಿಯವರೆಗೆ ತಮ್ಮ ಬೇಡಿಕೆ ಈಡೇರಲಿಲ್ಲ. ತಕ್ಷಣವೇ ಗಮನಹರಿಸಿ ಸ್ಮಶಾನ ಭೂಮಿ ಮಂಜೂರಿ ಮಾಡಿ ಸೌಲಭ್ಯ ಒದಗಿಸಬೇಕೆಂದು ಗ್ರಾಮ ಪಂಚಾಯತ್ ಸದಸ್ಯರು ಮತ್ತು ಬುದೇರಾ ಗ್ರಾಮದ ಮುಖಂಡರಾದ ರಮೇಶ ಕೋರಿ ಬೀದರ ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಗ್ರಾಮದಲ್ಲಿರುವ ಕುಂಬಾರ ಸಮಾಜ ಹತ್ತಿ ಕಂಕಣ, ರೆಡ್ಡಿ ಕೈಕಡಿ, ಮಡಿವಾಳ, ಕಂಬಾರ, ಸೇರಿದಂತೆ ಸಾಮಾನ್ಯ ವರ್ಗದವರಿಗೆ ತೀವ್ರ ತೊಂದರೆಯುಂಟಾಗುತ್ತಿದೆ. ಸರ್ಕಾರಿ ಭೂಮಿ ಅಂದಾಜು 70 ರಿಂದ 80 ಎಕರೆ ಭೂಗಳ್ಳರು ಅತಿಕ್ರಮಣ ಮಾಡಿರುತ್ತಾರೆ. ಹೀಗಾಗಿ ಸರ್ಕಾರಿ ಭೂಮಿ ನಾಪತ್ತೆಯಾಗಿರುತ್ತದೆ. ಸರ್ಕಾರ ಪ್ರತಿಯೊಂದು ಗ್ರಾಮಕ್ಕೂ ಸ್ಮಶಾನ ಭೂಮಿಗಾಗಿ ವ್ಯವಸ್ಥೆ ಕಲ್ಪಿಸಲು ಈ ಹಿಂದೆಯೇ ಸೂಚಿಸಿರುತ್ತದೆ. ಆದರೂ ಸಹ ಬುದೇರಾ ಗ್ರಾಮಕ್ಕೆ ಇದುವರೆಗೂ ಸ್ಮಶಾನ ಭೂಮಿ ಸಂಬಂಧಿತ ಅಧಿಕಾರಿಗಳು ಒದಗಿಸಿರುವುದಿಲ್ಲ ಎಂದು ರಮೇಶ ಕೋರಿ ಬುದೇರಾ ಅವರು ಆಪಾದಿಸಿ ಕೂಡಲೆ ಬೇಡಿಕೆ ಈಡೇರಿಸಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.