ಬುತ್ತಿ ಬಸವಣ್ಣ 23ನೇಯ ಜಾತ್ರಾ ಮಹೋತ್ಸವಬಸವ ಜಯಂತಿ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರ

ಬೀದರ:ಎ.20: ಬೀದರ ಕಮಠಾಣಾ ರಸ್ತೆಯಲ್ಲಿರುವ ಏರರ್ಪೋಟ್ ಗೇಟ್ ಹತ್ತಿರದ ಚಿದ್ರಿಯ ಶ್ರೀ ಬುತ್ತಿ ಬಸವಣ್ಣ ದೇವಾಲಯದ 23ನೇಯ ಜಾತ್ರಾ ಮಹೋತ್ಸವ ಮತ್ತು ಬಸವಜಯಂತಿ ಕಾರ್ಯಕ್ರಮಗಳು ಎಪ್ರಿಲ್ 20 ರಿಂದ 25 ವರೆಗೆ ವಿಜ್ರಂಭಣೆಯಿಂದ ನಡೆಯಲಿದೆ ಎಂದು ಉತ್ಸವ ಸಮಿತಿಯ ಅಧ್ಯಕ್ಷ ಸಂಗಶೆಟ್ಟಿ ಬಿರಾದಾರ ಮತ್ತು ದೇವಾಲಯ ಟ್ರಸ್ಟ್‍ನ ಅಧ್ಯಕ್ಷ ರಮೇಶ ಮಾಶೆಟ್ಟಿ ಚಿದ್ರಿ ಅವರು ದೇವಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಎಪ್ರಿಲ್ 20 ರಂದು ಬೆಳಿಗ್ಗೆ 8 ಗಂಟೆಗೆ ನಂದಿ ಬಸವಣ್ಣ ಮೂರ್ತಿಗೆ ರುದ್ರಾಭಿಷೇಕ, 8 ಗಂಟೆಗೆ ಷಟಸ್ಥಲ ಧ್ವಜಾರೋಹಣ, ಜಾತ್ರಾ ಮಹೋತ್ಸವ ಉದ್ಘಾಟನೆ ನಡೆಯಲಿದೆ. ಸಂಜೆ 7 ಗಂಟೆಗೆ ಪೂಜ್ಯ ಶ್ರೀ ಡಾ. ರಾಜಶೇಖರ ಶಿವಾಚಾರ್ಯರು ಗೋರ್ಟಾ ಮತ್ತು ಪೂಜ್ಯ ಶ್ರೀ ಮಾತೆ ಬಸವಾಂಜಲಿ ತಾಯಿಯವರಿಂದ ಪ್ರವಚನ ನಡೆಯಲಿದೆ. 21 ರಂದು ಸಂಜೆ 7 ಗಂಟೆಗೆ ಪೂಜ್ಯ ಶ್ರೀ ಡಾ. ರಾಜಶೇಖರ ಶಿವಾಚಾರ್ಯ ಮತ್ತು ಪೂಜ್ಯ ಶ್ರೀ ರಾಜೇಶ್ವರ ಶಿವಾಚಾರ್ಯರಿಂದ ಪ್ರವಚನ. 22 ರಂದು ಬೆಳಿಗ್ಗೆ 8 ಗಂಟೆಗೆ ಪೂಜ್ಯ ಶ್ರೀ ಡಾ. ರಾಜಶೇಖರ ಶಿವಾಚಾರ್ಯರ ಸನ್ನಿಧಿಯಲ್ಲಿ 101 ದಂಪತಿಗಳಿಂದ ಲಕ್ಷ ಬಿಲ್ವಾರ್ಚನೆ, ರಂಗೋಲಿ ಚಿತ್ರಕಲಾ ಸ್ಪರ್ಧೆಗಳು, ಸಂಜೆ 7 ಗಂಟೆಗೆ ಪೂಜ್ಯ ಶ್ರೀ ಸದ್ಗುರು ಬಸವಲಿಂಗ ಅವಧೂತರಿಂದ ಪ್ರವಚನ ನಡೆಯಲಿದೆ. 23 ರಂದು ಬೆಳಿಗ್ಗೆ 8 ಗಂಟೆಗೆ ದೇವಾಲಯದಿಂದ ಬೀದರ ನಗರದಲ್ಲಿ ಬೈಕ್ ರ್ಯಾಲಿ, ಸಂಜೆ 5 ಗಂಟೆಗೆ ಬಸವಣ್ಣನವರ ತೊಟ್ಟಿಲು ಕಾರ್ಯಕ್ರಮ, 7 ಗಂಟೆಗೆ ಸಂಗಿತ ಕಾರ್ಯಕ್ರಮಗಳು, 8 ಗಂಟೆಗೆ ದೀಪೋತ್ಸವ, ರಾತ್ರಿ 9 ಗಂಟೆಗೆ ದೇವಾಲಯದಿಂದ ನಂದಿ ಬಸವಣ್ಣನವರ ಪಲ್ಲಕಿ ಉತ್ಸವ, ವಿವಿಧ ತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಚಿದ್ರಿಯಲ್ಲಿ ನಡೆಯಲಿದೆ.

ನಸುಕಿನಲ್ಲಿ ಅಗ್ನಿ ಪೂಜೆ 24 ರಂದು ಸಂಜೆ 7 ಗಂಟೆಗೆ ಸಂಗೀತ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು, ರಾತ್ರಿ 9 ಗಂಟೆಗೆ ರಥೋತ್ಸವ, 25 ರಂದು ಬೆಳಿಗ್ಗೆ 7 ಗಂಟೆಗೆ ಕುಸ್ತಿ ಸ್ಪರ್ಧೆಗಳೊಂದಿಗೆ ಜಾತ್ರಾ ಮಹೋತ್ಸವ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ ಎಂದು ಅಮೃತರಾವ ಟೋಕರೆ ಅವರು ವಿವರಿಸಿದರು.

ದಿ. 22 ಮತ್ತು 24 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆಯವರೆಗೆ ಅಕ್ಕಮಹಾದೇವಿ ಆರ್ಯುವೇದಿಕ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ದಿವ್ಯ ಜಿ. ಪಾಟೀಲ, ಡಾ. ಅಬ್ದುಲ್ ಮಜರ್ ಅವರ ನೇತೃತ್ವದಲಿ ವೈದ್ಯರಾದ ಡಾ. ಮಂಜುಳಾ ಡಾ. ಪೂಜಾ ಪಾಟೀಲ, ಡಾ. ದಿನೇಶ, ಡಾ. ಜಗದೀಶ, ಡಾ. ಆಕಾಶ ಚವ್ಹಾಣ್ ಅವರಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆ ಶಿಬಿರ ನಡೆಯಲಿದೆ ಎಂದು ಸಂದೀಪ ಮಾಶೆಟ್ಟಿ ಅವರು ವಿವರಿಸಿ ಈ ಶಿಬಿರದ ಲಾಭ ಪಡೆದುಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜಕುಮಾರ ಬಿರಾದಾರ, ವೀರಶೆಟ್ಟಿ ಮಾಶೆಟ್ಟಿ, ಕಲ್ಯಾಣರಾವ ಬಿರಾದಾರ, ಬಸವರಾಜ ಮಾಶೆಟ್ಟಿ ಚಂದ್ರಕಾಂತ ಹುಮನಾಬಾದೆ, ತಿಪ್ಪಣ್ಣ ಮಗದೆ, ಸಂಜು ಮಾಶೆಟ್ಟಿ, ಮನೋಜ ಪಾಟೀಲ, ಕಂಠಿ ಎಸ್. ವಡ್ಡಿ, ಗುರು ಸ್ವಾಮಿ ದಾಗಡಿ, ಮಲ್ಲು ಮಾಶೆಟ್ಟಿ ಅವರುಗಳು ಉಪಸ್ಥಿತರಿದ್ದರು.