ಬುಡ್ಗ ಜಂಗಮರಿಗೆ ಪುಡ್ ಕಿಟ್ ವಿತರಣೆ

 ಹರಪನಹಳ್ಳಿ,ಜೂ.೫; ಲಾಕ್ ಡೌನ್ ನಿಂದ ಸಂಕಷ್ಟಕ್ಕೀಡಾಗಿ ಊಟಕ್ಕೂ ಪರದಾಡುತ್ತಿದ್ದ ಪಟ್ಟಣದ ಹರಿಹರ ರಸ್ತೆಯ ಬುಡ್ಗ ಜಂಗಮ ಹಾಗೂ ಹಗಲು ವೇಷಗಾರರಿಗೆ ಕೆಪಿಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು ತಮ್ಮ ಕಾರ್ಯಕರ್ತರ ಮೂಲಕ ಪುಡ್ ಕಿಟ್ ವಿತರಿಸಿ ನೆರವಾದರು.ಕಳೆದ ಒಂದೂವರೆ ತಿಂಗಳಿನಿಂದ ಕೆಲಸ ವಿಲ್ಲದೆ ಮನೆಯಲ್ಲಿಯೇ ಇದ್ದ ಈ ಅಲೆಮಾರಿ ಸಮುದಾಯದವರು ಚಿಕ್ಕ ಚಿಕ್ಕ ಮಕ್ಕಳೊಂದಿಗೆ ಒಂದೊಂದು ಊಟ ಮಾಡಿದರೆ ಇನ್ನೊಂದು ಊಟಕ್ಕೆ ಇರುತ್ತಿರಲಿಲ್ಲ. ಈ ಕುರಿತು ಮಾತನಾಡಿದ ಬುಡ್ಗ ಜಂಗಮ ಮುಖಂಡ ಸಣ್ಣ ಅಜ್ಜಯ್ಯ ನಮ್ಮ ಸಮುದಾಯದ ಮಕ್ಕಳು, ಮರಿ ಹಸಿವಿನಿಂದ ಬಳಲುತ್ತಿದ್ದರು. ಎಂ.ಪಿ.ಲತಾ ಅವರು ಪುಡ್ ಕಿಟ್ ನೀಡಿ ಸಹಾಯ ಮಾಡಿದರು ಎಂದು ಸ್ಮರಿಸಿದರು.ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಮತ್ತೂರು ಬಸವರಾಜ, ಟಿಎಪಿಸಿಎಂಎಸ್ ನಿರ್ದೆಶಕ ಎಂ.ವಿ.ಕೃಷ್ಣಮೂರ್ತಿ, ಹಗಲು ವೇಷದಾರಿ ಕಲಾವಿದ ಮೋತಿ ಮಾರುತಿ ಇತರರು ಉಪಸ್ಥಿತರಿದ್ದರು.