
ಕುರುಗೋಡು.ಡಿ 20 : ಕುರುಗೋಡು ಸಮೀಪದ ಬುಡ್ಗಜಂಗಮ ಕಾಲೋನಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ಕುಡುತಿನಿ ಪಟ್ಟಣ ಪಂಚಾಯಿತಿ ಅದ್ಯಕ್ಷ ಹಾಗು ಮುಖ್ಯಾದಿಕಾರಿಗಳಿಗೆ ಬುಡ್ಗಜಂಗಮ ಕಾಲೋನಿಯ ನಿವಾಸಿಗಳು ಸಮೂಹಿಕವಾಗಿ ಶುಕ್ರವಾರ ಮನವಿಸಲ್ಲಿಸಿದರು.
ಮನವಿಯಲ್ಲಿ ಬುಡ್ಗಜಂಗಮ ಕಾಲೋನಿಯ ಮುಖಂಡ ಬಿ.ಸಂಪತ್ಕುಮಾರ್ ಮಾತನಾಡಿ, ಕುಡುತಿನಿಯ 3 ನೇವಾರ್ಡಿನಲ್ಲಿರುವ ಬುಡ್ಗಜಂಗಮ ಕಾಲೋನಿಯಲ್ಲಿ ಹಲವಾರು ವರ್ಷಗಳಿಂದ ಮೂಲಭೂತ ಸೌಕರ್ಯಗಳಿಲ್ಲದೆ ಅಲ್ಲಿನ ನಿವಾಸಿಗಳು ಬಹಳ ತೊಂದರೆ ಅನುಭವಿಸುವಂತಾಗಿದೆ. ಇಂದಿನಿಂದಾದರೂ ಕುಡುತಿನಿ ಪಟ್ಟಣ ಪಂಚಾಯಿತಿ ವತಿಯಿಂದ ಬುಡ್ಗಜಂಗಮ ಕಾಲೋನಿಯಲ್ಲಿ ಚರಂಡಿವ್ಯವಸ್ಥೆ, ಶುದ್ದಕುಡಿಯುವನೀರಿನ ಘಟಕ, ಬೀದಿದೀಪ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಪಟ್ಟಣಪಂಚಾಯಿತಿ ಅದ್ಯಕ್ಷ ವಿ.ರಾಜಶೇಖರ ಹಾಗು ಮುಖ್ಯಾಧಿಕಾರಿ ಸತ್ಯನಾರಾಯಣರಾವ್ರವರಿಗೆ ಕಾಲೋನಿಯ ಪ.ಪಂ.ಸದಸ್ಯ ಹಾಗು ನಿವಾಸಿಗಳು ಎಲ್ಲರೂ ಸಮೂಹಿಕವಾಗಿ ಮನವಿಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಪಟ್ಟಣಪಂಚಾಯಿತಿ ಅದ್ಯಕ್ಷ ವಿ.ರಾಜಶೇಖರ್ ಈಗಾಗಲೇ ಬುಡ್ಗಜಂಗಮ ಕಾಲೋನಿಯಲ್ಲಿ ಸಿಸಿರಸ್ತೆ ಹಾಕಲಾಗಿದ್ದು, ಹಂತ-ಹಂತವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದರು. ಮುಖ್ಯಾಧಿಕಾರಿ ಸತ್ಯನಾರಾಯಣ, ಪ.ಪಂ. ಉಪಾದ್ಯಕ್ಷ ಗೀತಾನಾಗರಾಜ, ಬುಡ್ಗಜಂಗಮಕಾಲೋನಿಯ ಪ.ಪಂ.ಸದಸ್ಯ ಸಿಡಿ.ದುಗ್ಗೆಪ್ಪ, ವೆಂಕಟರಮಣಬಾಬು, ಲೆನಿನ್, ಕನಿಕೇರಿಪಂಪಾಪತಿ, ಕೆಎಂ.ಹಾಲಪ್ಪ, ಪ್ರತಾಪ್, ಬುಡ್ಗಜಂಗಮಕಾಲೋನಿಯ ನಿವಾಸಿಗಳಾದ ಮಿರಿಯಾಲಶ್ರೀನಿವಾಸ್, ಆರ್.ಕುಮಾರ್, ಮಿರಿಯಾಲಲಾಲಪ್ಪ, ದೊಡ್ಡಶಂಕ್ರಪ್ಪ, ಹುಷೇನಪ್ಪ, ಎಂ.ಶೇಖರ್, ಕ್ರುಷ್ಣ, ರವಿಚಂದ್ರ, ಬಿ.ಮಾರೆಪ್ಪ, ಉಮೇಶ್, ರೆಡ್ಡೆಪ್ಪ, ಜಂಭಣ್ಣ, ಎಂ.ಹುಷೇನಿ, ನಾಗರಾಜ, ತಿಪ್ಪೇಸ್ವಾಮಿ, ಗಿರಿಯಪ್ಪ, ಶೀನ, ಮಾರೇಶ್, ಮರಿಸ್ವಾಮಿ, ಉಮೇಶ್,ಸೇರಿದಂತೆ ಇತರೆ ಬುಡ್ಗಜಂಗಮಕಾಲೋನಿಯ ನಿವಾಸಿಗಳು ಇದ್ದರು.
ಪ್ರಾರಂಭದಲ್ಲಿ ಬುಡ್ಗಜಂಗಮಕಾಲೋನಿಯ [3ನೇವಾರ್ಡು] ನಿವಾಸಿಗಳು ಕಾಲೋನಿಯಲ್ಲಿ ಬಹುದಿನಗಳಿಂದ ಕನಸಾದ ಸಿಸಿರಸ್ತೆ ಇಂದು ಪಟ್ಟಣಪಂಚಾಯಿತಿವತಿಯಿಂದ ನೂತನವಾಗಿ ನಿರ್ಮಾಣಮಾಡಿದ್ದಕ್ಕೆ ಪ.ಪಂ.ಅದ್ಯಕ್ಷ, ಉಪಾದ್ಯಕ್ಷ, ಸದಸ್ಯರನ್ನು ನಿವಾಸಿಗಳು ಹೂಗುಚ್ಚನೀಡಿ ಗೌರವಿಸಿದರು.