ಬುಡಾ ಅಧ್ಯಕ್ಷರಿಂದ ವಿವಿಧ ಪ್ರದೇಶಗಳ ಅಭಿವೃದ್ಧಿ ಪರಿಶೀಲನೆ

ಬಳ್ಳಾರಿ,ನ.05: ನಗರದ ತಾಳೂರು ಮುಖ್ಯ ರಸ್ತೆ, ಶ್ರೀನಗರ ಮುಖ್ಯ ರಸ್ತೆಯಿಂದ, ಗಜ್ಜಿಕುಂಟೆ ನಾಗಪ್ಪ ಕಾಲೋನಿ ಮುಖ್ಯ ರಸ್ತೆಯಿಂದ, ಇಂಜಿನಿಯರ್ ಬಸವನಗೌಡ ಮನೆವರೆಗೆ ಅಭಿವೃದ್ಧಿ ಪಡಿಸಿರುವ ಲಿಂಕ್ ರಸ್ತೆ ಕಾಮಗಾರಿ ಹಾಗೂ ತಾಳೂರು ರಸ್ತೆಯಿಂದ ಶಕ್ತಿ ನಸಿರ್ಂಗ್ ಹೋಮ್ ಮುಖ್ಯ ರಸ್ತೆಗೆ ಪ್ರಾಧಿಕಾರದ ವತಿಯಿಂದ ಒಟ್ಟು ಅಂದಾಜು 50 ಲಕ್ಷ ರೂ ವೆಚ್ಚದಲ್ಲಿ ಪೂರ್ಣಗೊಳಿಸಿರುವ ಸಿ.ಸಿ ರಸ್ತೆಯ ಕಾಮಗಾರಿಯನ್ನು ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು ನಿನ್ನೆ ಸ್ಥಳ ಪರಿಶೀಲನೆ ಮಾಡಿದರು ಈ ಸಂದರ್ಭದಲ್ಲಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರ ರವಿಶಂಕರ್ ಹಾಗೂ ಇಂಜಿನಿಯರ್ ನಹೀಂ ಮೊದಲಾದವರು ಇದ್ದರು.