ಬುಡಕಟ್ಟು.ಮಹಿಳೆ ದ್ರೌಪದಿ ಮುರ್ಮುಗೆ ಒಲಿದ ಅತ್ಯುನ್ನತ ಪದವಿ: 15ನೇ ರಾಷ್ಟ್ರಪತಿಯಾಗಿ ಆಯ್ಕೆ

ನವದೆಹಲಿ, ಜು.21- ನಿರೀಕ್ಷೆಯಂತೆ ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ದೇಶದ 15 ನೇ ರಾಷ್ಟ್ರಪತಿಯಾಗಿ ಆಯ್ಯೆಯಾಗಿದ್ದಾರೆ‌. ಇದರಿಂದಾಗಿ ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಯಶವಂತ ಸಿನ್ಹಾ ಅವರು ಭಾರೀ ಮುಖಭಂಗ ಅನುಭವಿಸಿದ್ದಾರೆ.
ತೀವ್ರ ಕುತೂಹಲ ಕೆರಳಿಸಿದ್ದ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು 6,65000 ಸಾವಿರ ಮತಗಳಿಂದ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ.
ಇಂದು ಬೆಳಿಗ್ಗೆಯಿಂದ ಮತ ಎಣಿಕೆ ಕಾರ್ಯ ನಡೆಯಿತು.ಮೂರನೇ ಸುತ್ತಿನಲ್ಲಿ ಅಗತ್ಯವಿರುವ ಶೇ 60ರಷ್ಟು ಮತ ದಾಟಿ ಮುಂದೆ ಸಾಗಿದ್ದಾರೆ.ಈ ಅಭೂತಪೂರ್ವ ಗೆಲುವಿನೊಂದಿಗೆ ಜಾರ್ಖಂಡ್ ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ದೇಶದ ಅತ್ಯುನ್ನತ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದಂತಾಗಿದೆ.
ದ್ರೌಪದಿ ಮುರ್ಮುಗೆ ಮೊದಲ ಸುತ್ತಿನಲ್ಲಿ ಶೇ.72.19ರಷ್ಟು ಮತಗಳಿಸಿ ಮುನ್ನಡೆ ಸಾಧಿಸಿದ್ದರು.
ಎರಡನೇ ಹಂತದ ಮತ ಎಣಿಕೆ ಮುಕ್ತಾಯ ಗೊಂಡಾಗಲು ದ್ರೌಪದಿ ಮುರ್ಮು ಒಟ್ಟು 1,138 ಮತಗಳ ಪೈಕಿ ಎನ್ ಡಿಎ ಅಭ್ಯರ್ಥಿ 899 ಮತಗಳನ್ನು ಪಡೆದುಕೊಂಡಿದ್ದಾರೆ. ಪ್ರತಿಪಕ್ಷದ ಅಭ್ಯರ್ಥಿ ಯಶವಂತ ಸಿನ್ಹಾ ಅವರಿಗೆ 329 ಮತಗಳನ್ನು ಗಳಿಸಿದ್ದಾರೆ. ದ್ರೌಪದಿಯವರು 1886 ಮತಗಳ ಪೈಕಿ 1349 ಮತಗಳನ್ನು ಗಳಿಸಿದರೆ ಸಿನ್ಹಾ ಅವರಿಗೆ 537 ಮತಗಳನ್ನು ಗಳಿಸಿದ್ದರು.
ಮುರ್ಮು ಅವರು ಶೇ. 53ರಷ್ಟು ಮತಪಡೆದಿದ್ದಾರೆ ಎಂದು ಚುನಾವಷಾಧಿಕಾರಿ ಪಿ.ಸಿ.ಮೋದಿ ತಿಳಿಸಿದ್ದಾರೆ.
ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅವಧಿ ಜು.24 ರಂದು ಅಂತ್ಯಗೊಳ್ಳಲಿದ್ದು ಜು.25ರಂದು ದೇಶದ ನೂತನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
15ನೇ ರಾಷ್ಟ್ರಪತಿ ಆಯ್ಕೆಗಾಗಿ ಜು. 18ರಂದು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ನಡೆದಿತ್ತು.

ದ್ರೌಪದಿ ಮುರ್ಮು ಪಡೆದ ಮತ:
ಮೊದಲ ಸುತ್ತು (ಸಂಸದರ ಮತಮೌಲ್ಯ 700) ಚಲಾವಣೆಯಾದ ಸಂಸದರ ಮತ – 763 – ಮತ ಮೌಲ್ಯ – 5,34,100
ದ್ರೌಪದಿ ಮುರ್ಮು – 540 – ಮತ ಮೌಲ್ಯ – 3,78,000
ಯಶವಂತ್‌ ಸಿನ್ಹಾ – 208 – ಮತ ಮೌಲ್ಯ – 1,45,600
ಅನರ್ಹ ಮತ – 15 – ಮತ ಮೌಲ್ಯ – 10,500

ಸಂಭ್ರಮಾಚರಣೆ
ಮುರ್ಮ ಗೆಲುವು ಸಾಧಿಸುತ್ತಿದ್ದಂತೆ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಕುಣಿದು ಕುಪ್ಪಳಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ದ್ರೌಪದಿಯವರು ಸ್ಥಾಪಿಸಿದ ಶಾಲೆಯಲ್ಲೂ ವಿದ್ಯಾರ್ಥಿಗಳು ವಿಜಯೋತ್ಸವ ಆಚರಿಸಿದರು.
ಇದೇ ವೇಳೆ ಮುರ್ಮು ಅವರ ಸ್ವಗ್ರಾಮ ಒಡಿಶಾದ ರಾಯಿರಂಗ್ ಗ್ರಾಮದಲ್ಲಿ ಸಂಭ್ರಮಾಚರಣೆ ಮುಗಿಲುಮುಟ್ಟಿದೆ.

ಕೋವಿಂದ್, ಮೋದಿ ಅಭಿನಂದನೆ

ದ್ರೌಪದಿ ಮುರ್ಮು ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಮೋದಿ, ವಿಪಕ್ಷ ನಾಯಕರು ಸೇರಿ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.