
ಸಂಜೆವಾಣಿ ವಾರ್ತೆ
ಹೊಸಪೇಟೆ ಮಾ10 : ಜಿಲ್ಲಾ ಪಂಚಾಯಿತಿ ವಿಜಯನಗರ ಆದೇಶದಂತೆ ಬುಕ್ಕಸಾಗರ ಗ್ರಾಮಕ್ಕೆ ಗ್ರಾಮ ಸೇವಕ ನೇಮಕಕ್ಕೆ ಆರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿದ ಅವರು ಮಾಸಿಕ ಗೌರವಧನದ ಆದಾರದಮೇಲೆ ನೇಮಕಗೊಳ್ಳಲಿರುವ ಹುದ್ದೆಗೆ ದಾಖಲಾತಿಗಳೊಂದಿಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲಾ ಪಂಚಾಯಿತಿ ವಿಜಯನಗರ ಇವರಿಗೆ ಇದೆ ಮಾರ್ಚ 14ರೊಳಗಾಗಿ ಸಲ್ಲಿಸಲು ಕೋರಿದೆ.
ಹೆಚ್ಚಿನ ಮಾಹಿತಿಗೆ ಅಭಿವೃದ್ಧಿ ಅಧಿಕಾರಿಗಳು ಬುಕ್ಕಸಾಗರ ಗ್ರಾಮ ಪಂಚಾಯತಿ, ಹೊಸಪೇಟೆ ತಾಲೂಕು ಇವರನ್ನು ಸಂಪರ್ಕಿಸಲು ಕೋರಲಾಗಿದೆ.