ಬೀಸಿ ನೀರು, ನೀರಿನ ಹಬೆ ಸೇವನೆಯಿಂದ ಸೋಂಕು ನಿಯಂತ್ರಣ

ಕೋಲಾರ,ಮೇ.೨೯: ಕೊಂಡರಾಜನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪ ಬಾಬು ಕೋವಿಡ್ ಎರಡನೇ ಅಲೆ ಇರುವ ಕಾರಣ ಖಾದ್ರಿಪುರ ಗ್ರಾಮಕ್ಕೆ ಬೇಟಿ ನೀಡಿದ್ದರು. ಅಲ್ಲಿನ ಸುಮಾರು ೨೦ ಮಂದಿ ಕರೋನಾ ಪಾಸಿಟಿವ್ ಆದ ಮನೆಗಳಿಗೆ ಬೇಟಿ ನೀಡಿ ಅವರಿಗೆ ಧೈರವನ್ನು ತುಂಬಿ ಬಿಸಿ ನೀರನ್ನು ಸೇವಿಸಿ ಸ್ಟಿಮ್‌ನ್ನು ಮಾಡುವುದರಿಂದ ಕರೋನಾವನ್ನು ತಡೆಯಬಹುದಾಗಿ ಹಾಗೂ ಸರ್ಕಾರದಿಂದ ಮೇಡಿಸನ್ ಕಿಟ್‌ಗಳು ಎಲ್ಲಾರಿಗೂ ಲಭ್ಯವಿದಿಯಾ ಎಂದು ಅವರ ಯೋಗಕ್ಷೇಮನ್ನು ವಿಚಾರಿಸಿ ಪಂಚಾಯಿತಿ ಕಡೆಯಿಂದ ನಿಮಗೆ ಏನು ಸೌಲಭ್ಯ ಲಭ್ಯವಿದೆಯೋ ಅದನ್ನು ಒದಿಗಲು ಸದಾ ಸಿಧ್ಧ ಎಂದು ಅಲ್ಲಿನ ಜನರಿಗೆ ಅತ್ಮಸ್ತೈರ್ಯ ತುಂಬಿದರು.
ಅಲ್ಲಿ ಕರೋನಾ ಪಾಸಿಟಿವ್‌ಆಗಿರುವ ಮನೆಗಳಿಗೆ ದಿನಸಿ ಕಿಟ್‌ಗಳನ್ನು ಆದಷ್ಟು ಬೇಗ ವಿತರಿಸಲು ಕ್ರಮ ಕೈಗೂಳ್ಳಲಾಗುವುದು ಎಂದು ತಿಳಿಸಿ ಅವರಿಗೆ ದೈರ್ಯವನ್ನು ತುಂಬಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ನಾಗರತ್ನ, ರಾಜೇಶ್, ಎಲ್. ನಿರಂಜನ್ ಹಾಗೂ ಗೋವಿಂದಪ್ಪ, ಸ್ಥಳಿಯರಾದ ಬಾಬರ್, ಸಂತೋಷ, ಪಂಚಾಯಿತಿ ಸಿಬ್ಬಂದಿ ಬಿಲ್ ಕಲೆಕ್ಟರ್ ಹಾಜರಿದ್ದರು. ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಗೈರು ಹಾಜರಾಗಿದ್ದಕ್ಕೆ ಅಲ್ಲಿನ ಸದಸ್ಯರು ಹಾಗೂ ಅಲ್ಲಿನ ಸ್ಥಳಿಯರು ಬೇಸರವನ್ನು ವ್ಯಕ್ತಪಡಿಸಿದರು.