ಬೀಳ್ಕೊಡುವ ಸಮಾರಂಭ

ಬಾದಾಮಿ,ಮಾ11: ಇಲ್ಲಿನ ಸರಕಾರಿ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಜರುಗಿತು. ಮುಖ್ಯಶಿಕ್ಷಕ ಬಿ.ಎಸ್.ಅಬ್ಬಿಗೇರಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಾಧ್ಯಾಪಕ ಶಶಿಧರ ಮೂಲಿಮನಿ, ತಾಲೂಕಾ ಕಸಾಪ ಅಧ್ಯಕ್ಷ ಬಿ.ಎಫ್.ಹೊರಕೇರಿ, ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಪ್ಪೆ ಅರಭಟ್ಟ ಯಾರು ನಾಟಕವನ್ನು 9 ನೆಯ ತರಗತಿ ಕಪ್ಪೆ ಅರಭಟ್ಟ ಯೋಜನೆಯ ಮಕ್ಕಳು ನೃತ್ಯ, ನಾಟಕ, ಹಾಡುಗಳ ಮುಖಾಂತರವಾಗಿ ಪ್ರದರ್ಶಿಸಿದರು. ಸಮಾರಂಭ ವಿಜೃಂಭಣೆಯಿಂದ ನೇರವೆರಿತು.