ಬೀಳ್ಕೊಡುವ ಕಾರ್ಯಕ್ರಮ

(ಸಂಜೆವಾಣಿ ವಾರ್ತೆ
ಕುಂದಗೋಳ ಆ. 19 : ತಾಲೂಕಿನ ಸಂಶಿ ಕೆಎಲ್‍ಇ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ಪದವಿ ವಿದ್ಯಾರ್ಥಿಗಳ ಬಿಳ್ಕೊಡುವ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಮತ್ತು ಪ್ರಸಕ್ತ ಸಾಲಿನ ಕ್ರೀಡಾ, ಸಾಂಸ್ಕೃತಿಕ ಹಾಗೂ ಎನ್ ಎಸ್ ಎಸ್ ಚಟುವಟಿಕೆಗಳ ಉದ್ಘಾಟನೆ ಜತೆಗೆ ಪರಿಸರ ಸ್ನೇಹಿ ಗಣೇಶ ಹಬ್ಬದ ಆಚರಣೆ ಕುರಿತು ಜಾಗೃತಿ ಕಾರ್ಯಕ್ರಮ ಜರುಗಿತು.
ಕುಂದಗೋಳ ಕಲ್ಯಾಣಪುರ ಅಭಿನವ ಬಸವಣ್ಣಜ್ಜನವರು ಸಾನಿಧ್ಯ ವಹಿಸಿಕೊಂಡು ಮಾತನಾಡಿ ವಿದ್ಯಾರ್ಥಿಗಳು ತಂದೆ-ತಾಯಿ, ಗುರುಗಳನ್ನು ಗೌರವಿಸುವ ಮೂಲಕ ಭಾರತೀಯ ಸಂಸ್ಕೃತಿ ಉಳಿಸಲು ಮುಂದಾಗಬೇಕು ಎಂದರು.
ಕರ್ನಾಟಕ ವಿವಿ ನಿವೃತ್ತ ಪ್ರಾಧ್ಯಾಪಕ ಡಾ. ಪಿ ಎಸ್ ಹಳ್ಯಾಳ ಅವರು ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಆತ್ಮವಿಶ್ವಾಸವನ್ನು ವೃದ್ಧಿಸಿಕೊಂಡು ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಅಭ್ಯಸಿಸುವ ಮನೋಭಾವ ಬೆಳೆಸಿಕೊಂಡಾಗ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾಲೇಜು ಅಧ್ಯಕ್ಷ ಎ ಬಿ ಉಪ್ಪಿನ, ಸದಸ್ಯರಾದ ಬಿ ಬಿ ಬೂದಿಹಾಳ ಎಚ್ ಎನ್ ಪಾಟೀಲ, ಬಿ ವಿ ಸೈಬಣ್ಣವರ ,ಬಿ ಎಂ ಕಜ್ಜಿ ಉಪಸ್ಥಿತರಿದ್ದರು ಪ್ರಾಚಾರ್ಯ ಪೆÇ್ರ ರಮೇಶ ಯ ಅತ್ತಿಗೇರಿ ಸ್ವಾಗತಿಸಿದರು. ಎಂ ಸಿ ಅಂಗಡಿ ನಿರೂಪಿಸಿದರು. ಶ್ರೀ ಮತಿ ಆರ್ ಜಿ ಮಣಕಟ್ಟಿ ನಿರ್ವಹಿಸಿದರು.