ಬೀಳ್ಕೊಡುಗೆ-ಸ್ವಾಗತ

ಬೆಳಗಾವಿ, ಮೇ 13: ಜಿಲ್ಲಾಡಳಿತ ವತಿಯಿಂದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ನಿಕಟಪೂರ್ವ ಜಿಲ್ಲಾಧಿಕಾರಿ ಎಂಜಿ. ಹಿರೇಮಠ ಅವರಿಗೆ ಬೀಳ್ಕೊಡುಗೆ; ನೂತನ ಜಿಲ್ಲಾಧಿಕಾರಿ ನಿತೇಶ್ ಪಾಟೀಲರ ಸ್ವಾಗತ ಸಮಾರಂಭ ನಡೆಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ.ಜಿ.ಹಿರೇಮಠ ಅವರು, ತವರು ಜಿಲ್ಲೆಯಲ್ಲಿ ಕೆಲಸ ಮಾಡುವ ಅವಕಾಶ ದೊರೆತಿದ್ದು ವೃತ್ತಿಜೀವನದ ಬಹುದೊಡ್ಡ ಸೌಭಾಗ್ಯ ಎಂದರು.
ತಾನು ತಿರುಗಾಡಿದ, ಆಡಿಬೆಳೆದ ಊರಿಗೆ ಜಿಲ್ಲಾಧಿಕಾರಿಯಾಗಿ ಬರುವುದು ಅಪರೂಪ. ಅಂತಹ ಭಾಗ್ಯ ನನಗೆ ದೊರೆತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಜನರು, ಅಧಿಕಾರಿಗಳು, ಸಂಘ-ಸಂಸ್ಥೆಗಳ ಸಹಕಾರ, ಜನಪ್ರತಿನಿಧಿಗಳ ಪೆÇ್ರೀತ್ಸಾಹವನ್ನು ಅವರು ಸ್ಮರಿಸಿದರು.
ತಮ್ಮ ಆಡಳಿತಾವಧಿಯಲ್ಲಿ ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು ನೀಡಿದ ಪೆÇ್ರೀತ್ಸಾಹ ಸ್ನರಿಸಿಕೊಂಡರು.
ಎಂತಹದೇ ಕ್ಲಿಷ್ಟಕರ ಸಂದರ್ಭಗಳಲ್ಲಿ ಕೂಡ ಸಹೋದ್ಯೋಗಿ ಅಧಿಕಾರಿಗಳಾದ ಸಿಇಓ, ಎಸ್.ಪಿ., ಅಪರ ಜಿಲ್ಲಾಧಿಕಾರ ಮತ್ತಿತರ ಅಧಿಕಾರಿಗಳ ಸಹಕಾರದಿಂದ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು ಎಂದು ಎಂ.ಜಿ. ಹಿರೇಮಠ ಹೇಳಿದರು.
ಇದೇ ವೇಳೆ ಮಾತನಾಡಿದ ನೂತನ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಕೆಲಸ ಮಾಡುವುದು ಸಂತಸದ ಸಂಗತಿಯಾಗಿದೆ. ಹಿಂದಿನ ಅನುಭವದ ಆಧಾರದ ಮೇಲೆ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದರು.
ವರ್ಗಾವಣೆಗೊಂಡಿರುವ ಎಂ.ಜಿ.ಹಿರೇಮಠರು ಮಾಡಿರುವ ಉತ್ತಮ ಕೆಲಸಗಳನ್ನು ಅದೇ ರೀತಿ ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಭರವಸೆ ನೀಡಿದರು.
ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.