ಬೀಳ್ಕೊಡುಗೆ ಸಮಾರಂಭ ನಾಳೆ

ಕಲಬುರಗಿ:ಅ.30: ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂಕಲಬುರಗಿ ಜಿಲ್ಲಾ ಕಲಾವಿದರ ಬಳಗದ ವತಿಯಿಂದ ದಿ. 31 ರಂದು ಸಂಜೆ 4 ಗಂಟೆಗೆ ಇಲ್ಲಿನ ಎಸ್ ಎಂ. ಪಂಡಿತ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಸಿಬ್ಬಂದಿ ಕಲಾವತಿ ಪಿ. ಪಂಡಿತ್‍ಅವರ
ವಯೋ ನಿವೃತ್ತಿ ಸಮಾÀಂಭ ಹಮ್ಮಿಕೊಳ್ಳಲಾಗಿದೆ.ಚಿತ್ರ ಕಲಾವಿದೆ ಮೀನಾಕ್ಷಿ ಅಂಬಯ್ಯ ಗುತ್ತೇದಾರ ಅಧ್ಯಕ್ಚತೆವಹಿಸುವರು.
ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಲಯ ಜಂಟಿ ನಿರ್ದೇಶಕ ಕೆ.ಎಚ್. ಚನ್ನೂರ, ರಂಗಾಯಣದ ಆಡಳಿತ ಅಧಿಕಾರಿ ಜಗದೀಶ್ವರಿ ಅ. ನಾಸಿ, ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ,ಆಕಾಶವಾಣಿ ಕಾರ್ಯಕ್ರಮ ನಿರ್ವಾಹಣಾಧಿಕಾರಿ ಡಾ. ಸದಾನಂದ ಪೆರ್ಲ, ನಿರೂಪಕಿ ಸಂಗೀತಾ ಎನ್.ಎಮ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾಗೀರತಿ ಎಸ್. ಗುನ್ನಾಪೂರ, ಮಾಯಾದೇವಿ ದತ್ತರಾಜ ಕಲಶೆಟ್ಟಿ ಆಗಮಿಸುವರು.ಜಿಲ್ಲೆಯ ಸಕಲ ಕಲಾವಿದರು ಹಾಗೂ ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕಲಾವಿದರು ಕೋರಿದ್ದಾರೆ.