ಬೀಳ್ಕೊಡುಗೆ, ಅಭಿನಂದನಾ ಸಮಾರಂಭ

ಧಾರವಾಡ,ಜೂ.7: ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ 133 ವರ್ಷಗಳ ಐತಿಹಾಸಿಕ ಪರಂಪರೆಯಿದ್ದು, ಇದುಕನ್ನಡ ನಾಡು, ನುಡಿಯ ಶ್ರೇಯಸ್ಸಿಗಾಗಿ ಸಲ್ಲಿಸಿದ ಸೇವೆ ಅನುಪಮವಾದದ್ದು. ಇಂತಹ ಸಂಘದಲ್ಲಿಟೈಪಿಸ್ಟ್ ಅಗಿ ಸೇವೆಗೆ ಸೇರಿದಎನ್.ಎಸ್. ಕಾಶಪ್ಪನವರ ಸಂಘದಅಧೀಕ್ಷಕರಾಗಿ ನಿವೃತ್ತರಾದರು.ಇವರ ಸೇವಾ ನಿಷ್ಠೆ ಹಾಗೂ ಪ್ರಾಮಾಣಿಕಕಾರ್ಯವನ್ನು ಗುರುತಿಸಿದ ಕರ್ನಾಟಕ ವಿದ್ಯಾವರ್ಧಕ ಸಂಘ ವಯೋನಿವೃತ್ತಿ ಹೊಂದಿದಅವರಿಗೆಇತ್ತೀಚೆಗೆ ಸಂಘದ ನಾಡೋಜಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಬೀಳ್ಕೊಡುಗೆ ಹಾಗೂ ಅಭಿನಂದನಾ ಸಮಾರಂಭ ಆಯೋಜಿಸಿತ್ತು.
ಈ ಸಂದರ್ಭದಲ್ಲಿಎನ್.ಎಸ್. ಕಾಶಪ್ಪನವರಅವರಿಗೂ ನಾಡೋಜಡಾ.ಪಾಟೀಲ ಪುಟ್ಟಪ್ಪನವರಿಗೂಇದ್ದಒಡನಾಟ ಹಾಗೂ ಪಾಪುರವರ ಸಾಹಿತ್ಯದ ತಿರುಳನ್ನು ಕಾಶಪ್ಪನವರಟೈಪ ಮಾಡುತ್ತಿದ್ದ ವೈಖರಿಯನ್ನು ಅನೇಕ ಜನ ಮಹನೀಯರು ಹಂಚಿಕೊಂಡರು.ಜೊತೆಗೆಕಾಶಪ್ಪನವರರಾಜ್ಯದ ಹಾಗೂ ಹೊರರಾಜ್ಯದಕನ್ನಡಿಗರೊಂದಿಗಿನಒಡನಾಟ, ನಿಷ್ಪ್ರಹ ಸೇವಾ ನಿಷ್ಠೆ, ಸಂಘಕ್ಕೆ ಆಗಮಿಸುವ ಅತಿಥಿಗಳಿಗೆ ನೀಡುತ್ತಿದ್ದಅತಿಥಿ ಸತ್ಕಾರ, ಅವರೊಂದಿಗೆತೋರುತ್ತಿದ್ದಗೌರವ ಭಾವನೆ, ನಿಯಮಿತವಾಗಿ ಹಾಗೂ ಅಚ್ಚುಕಟ್ಟಾಗಿಕಾರ್ಯಕ್ರಮದ ವ್ಯವಸ್ಥೆ ಮಾಡುತ್ತಿದ್ದರೀತಿ, ಬಂದ ಸಮಸ್ಯೆಗಳಿಗೆ ಪ್ರೀತಿಯಿಂದ ಪರಿಹರಿಸುತ್ತಿದ್ದಅವರ ನಿಷ್ಕಪಟ ಮನಸ್ಥಿತಿ ಮುಂತಾದ ಗುಣಗಳ ಕುರಿತು ಕ.ವಿ.ವ.ಸಂಘದಉಪಾಧ್ಯಕ್ಷರಾದ ಪ್ರೊ.ಮಾಲತಿ ಪಟ್ಟಣಶೆಟ್ಟಿ, ಹಿರಿಯ ಮಕ್ಕಳ ಸಾಹಿತಿ ನಿಂಗಣ್ಣಕುಂಟಿ, ಅಥಣಿ ವಿಮೋಚನಾ ಸಂಸ್ಥೆಯ ಬಿ.ಎಲ್. ಪಾಟೀಲ, ನಿವೃತ್ತಗ್ರಂಥಾಲಯಾಧಿಕಾರಿ ಜಿ. ಬಿ. ಹೊಂಬಳ, ಎಸ್. ಬಿ. ಗುತ್ತಲ, ಕ.ವಿ.ವ.ಸಂಘದಗೌರವ ವ್ಯವಸ್ಥಾಪಕ ಶಿ.ಮ.ರಾಚಯ್ಯನವರ ನುಡಿಗಳನ್ನಾಡಿ ಶುಭಕೋರಿದರು. ಯುವಕವಿ ಚನಬಸಪ್ಪ ಚೌಗಲಾ ಕಾಶಪ್ಪನವರಕುರಿತು ಸ್ವರಚಿತ ಕವನ ವಾಚಿಸಿದರು.
ಸಮಾರಂಭದಲ್ಲಿ ಎನ್. ಎಸ್. ಕಾಶಪ್ಪನವರ ಮತ್ತು ಶ್ರೀಮತಿ ಮಹಾದೇವಿ ಕಾಶಪ್ಪನವರ ದಂಪತಿಗಳನ್ನು ಸನ್ಮಾನಿಸಲಾಯಿತು.
ನಂತರ ಅನೇಕ ಸಂಘ, ಸಂಸ್ಥೆಗಳು ಹಾಗೂ ಸಾರ್ವಜನಿಕರುಕಾಶಪ್ಪನವರನ್ನು ಸನ್ಮಾನಿಸಿ ಶುಭಕೋರಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದಕಾಶಪ್ಪನವರ, ಸಂಘದಎಲ್ಲ ಪದಾಧಿಕಾರಿಗಳು ಯಾವುದೇರೀತಿಯ ಲಾಭಾಂಶ ಪಡೆಯದೆಉಚಿತವಾಗಿಕನ್ನಡಾಂಬೆಯ ಸೇವೆ ಮಾಡುತ್ತಿರುವಾಗ, ಸಂಬಳ ತೆಗೆದುಕೊಳ್ಳುತ್ತಿರುವ ನಾವೇಕೆ ಕಾರ್ಯತತ್ಪರರಾಗಬಾರದು ಎಂಬ ಆಲೋಚನೆಯ ಹಿನ್ನೆಲೆಯಲ್ಲಿ ಸಂಘದ ಪ್ರತಿಯೊಂದು ಕೆಲಸವನ್ನುದೇವರ ಕೆಲಸ ಎಂದು ಭಾವಿಸಿ ಕಾರ್ಯ ಮಾಡುತ್ತಿದ್ದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಸನ್ಮಾನಕ್ಕೆಕೃತಜ್ಞತೆ ಸಲ್ಲಿಸಿದರು.